ಉಡುಪಿಯ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌಲ್ಯದ ಚಿನ್ನದ ಗಿಂಡಿ ಕಳವು: ದೂರು ದಾಖಲು
ಉಡುಪಿ : ಇಲ್ಲಿನ ಪುತ್ತಿಗೆ ಮಠದಲ್ಲಿ 7 ಲಕ್ಷ ರೂ. ಮೌನ್ಯದ ಚಿನ್ನದ ಗಿಂಡಿ ಕಳವಾಗಿರುವ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ವಿವರ: ಜು.26 ರಂದು ಬೆಳಿಗ್ಗೆ ಮಠದಲ್ಲಿ ಪೂಜೆಯ ಸಂದರ್ಭದಲ್ಲಿ ಮಠದ 6 ವಿದ್ಯಾರ್ಥಿಗಳು ಮತ್ತು ಪುರೋಹಿತರು ಬಂದು ಹೋಗಿದ್ದು, ಪೂಜೆಯ ನಂತರ ಪೂಜಾ ಸಾಮಾಗ್ರಿಗಳನ್ನು ತೆಗೆದಿಡುವ ಸಂದರ್ಭದಲ್ಲಿ 7 ಲಕ್ಷ ರೂಪಾಯಿ ಮೌಲ್ಯದ 146 ಗ್ರಾಂ ತೂಕದ ಚಿನ್ನದ ಗಿಂಡಿ ಕಾಣೆಯಾಗಿದ್ದು ಗಮನಕ್ಕೆ ಬಂದಿದೆ. ಮಠದ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಅವರು […]
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಟ್ರೇಡ್ ಬುಲ್ಸ್ ಕಂಪನಿಯ ಕ್ಯಾಂಪಸ್ ಡ್ರೈವ್
ಬ್ರಹ್ಮಾವರ: ಭಾರತದಲ್ಲಿ ಅತ್ಯುತ್ತಮ ಹೆಸರು ಗಳಿಸಿದ ಟ್ರೇಡ್ ಬುಲ್ಸ್ ಕಂಪನಿಯ ಕ್ಯಾಂಪಸ್ ಸೆಲೆಕ್ಷನ್ ತಂಡವು ಬ್ರಹ್ಮಾವರದ ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಗೆ ಜುಲೈ 29 ರಂದು ಭೇಟಿ ನೀಡಿತು. ಟ್ರೇಡ್ ಬುಲ್ಸ್ ಕಂಪನಿಯ ಪ್ರತಿನಿಧಿಗಳಾದ ನಯಿಮ್ ಅಕ್ತರ್, ಮಹಮ್ಮದ್ಸಿನಾನ್, ಮಂಜುನಾಥ್ ಇವರುಗಳು ಆಗಮಿಸಿ, ಸಂಸ್ಥೆಯ ವಿದ್ಯಾರ್ಥಿಗಳನ್ನು ಸಂದರ್ಶನಕ್ಕೆ ಒಳಪಡಿಸಿ ಒಟ್ಟು 16 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು. ಇದಲ್ಲದೆ ಸುಮಾರು 57 ವಿದ್ಯಾರ್ಥಿಗಳು ಟಿಸಿಎಸ್ ,ಅಪ್ ಸ್ಕಿಲ್ಸ್, ಅಮೆಜಾನ್, ಇಂಡಿಗೋ ಹೀಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾಗಿರುತ್ತಾರೆ. ಕಾರ್ಯಕ್ರಮದ […]
ಶ್ರೀಕೃಷ್ಣಮಠ: ಶ್ರಾವಣ ಶನಿವಾರ ಪ್ರಯುಕ್ತ ಶ್ರೀಕೃಷ್ಣನಿಗೆ ವಿಚಾರ ಶ್ರೀನಿವಾಸ ಅಲಂಕಾರ
ಉಡುಪಿ: ಶ್ರೀಕೃಷ್ಣಮಠದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ಶ್ರೀಕೃಷ್ಣದೇವರಿಗೆ ಕಾಣಿಯೂರು ಮಠಾಧೀಶರು “ವಿಚಾರ ಶ್ರೀನಿವಾಸ” ಅಲಂಕಾರ ಮಾಡಿ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.
ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆ: ಅನ್ಯ ರಾಜ್ಯದ ಚೀಟಿದಾರರಿಗೂ ಆಧಾರ್ ಆಧಾರಿತ ಪಡಿತರ ವಿತರಣೆ
ಉಡುಪಿ: ಕೇಂದ್ರ ಸರ್ಕಾರದ ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಯಡಿ ಜಿಲ್ಲೆಯ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಬೇರೆ ರಾಜ್ಯದ ಪಡಿತರ ಚೀಟಿದಾರರು ಅವರ ಆಧಾರ್ ದೃಢೀಕೃತ ಬೆರಳಚ್ಚು ಬಯೋಮೆಟ್ರಿಕ್ ಅಥವಾ ಆಧಾರ್ ಆಧಾರಿತ ಒ.ಟಿ.ಪಿ ನೀಡಿ ಪಡಿತರ ಪಡೆಯಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದ ಇಸ್ರೇಲಿನಲ್ಲಿ ಜಗನ್ನಾಥನ ಪ್ರಪ್ರಥಮ ರಥ ಯಾತ್ರೆ: ಭಾರತೀಯ ರಂಗಿನಲ್ಲಿ ಮಿಂದೆದ್ದ ಇಸ್ರೇಲಿಗರು
ಟೆಲ್ ಅವೀವ್: ಭಾರತ ಮತ್ತು ಇಸ್ರೇಲ್ ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಘನಿಷ್ಠ ಮಿತ್ರತ್ವವನ್ನು ಹೊಂದಿರುವ ದೇಶಗಳು. ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಯಹೂದಿಯರ ಹತ್ಯಾಕಾಂಡ ನಡೆಯುತ್ತಿದ್ದಾಗ, ತಮ್ಮ ದೇಶ ತೊರೆದು ಸುರಕ್ಷಿತ ಸ್ಥಾನಗಳಿಗಾಗಿ ಅರಸುತ್ತಿದ್ದ ಯಹೂದಿಯರಿಗೆ ಮೊಟ್ಟ ಮೊದಲ ಬಾರಿಗೆ ಆಶ್ರಯ ನೀಡಿದ್ದು ಭಾರತ. ಅಂದಿನಿಂದ ಇಂದಿನವರೆಗೂ ಭಾರತ ಮತ್ತು ಇಸ್ರೇಲ್ ಅತ್ಯಂತ ಆಪ್ತ ಮಿತ್ರರಾಗಿ ಉಳಿದುಕೊಂಡಿವೆ. https://www.youtube.com/watch?v=Z0aAHwMKGQ0 ಭಾರತ ಮತ್ತು ಇಸ್ರೇಲಿನ ಸಂಬಂಧದ ಕುರುಹಿನ ಪ್ರತಿಯಾಗಿ ಇದೀಗ ಪ್ರಪ್ರಥಮ ಬಾರಿಗೆ ಇಸ್ರೇಲಿನಲ್ಲಿ ಪುರಿ […]