ಭಂಡಾರ್ಕಾರ್ಸ್ ಕಾಲೇಜು: ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ವಿಶ್ವವಿದ್ಯಾಲಯ ಮಟ್ಟದ ದೇಶಭಕ್ತಿ ಗೀತೆ, ಓಟದ ಸ್ಪರ್ಧೆ

ಕುಂದಾಪುರ: ನಾವು ದೇಶದ ಆಸ್ತಿಯಾಗಬೇಕು. ಆಜಾದಿ ಕಾ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಯುವಜನತೆ ದೇಶದ ಅಖಂಡತೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಬೇಕು ಎಂದು ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ್ ವಿ.ನಾಯಕ್  ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಅವರು ಜುಲೈ 26ರಂದು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಭಂಡಾರ್ಕಾರ್ಸ್ ಕಾಲೇಜಿನ ಸಹಯೋಗದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ವಿಶ್ವವಿದ್ಯಾಲಯ ಮಟ್ಟದ ದೇಶಭಕ್ತಿ ಗೀತೆ ಗಾಯನ ಮತ್ತು ಸ್ವಾತಂತ್ರ್ಯ ಓಟದ ಸ್ಪರ್ಧೆಯನ್ನು […]

ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ

  ಕುಂದಾಪುರ: ಈ ವರ್ಷದ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು  ಕಾವ್ಯ ಕಡಮೆ ಅವರ “ಮಾಕೋನ ಏಕಾಂತ” ಸಂಕಲನಕ್ಕೆ ದೊರೆತಿದೆ. ಕನ್ನಡದ ಪ್ರಮುಖ ಲೇಖಕರುಗಳಾದ ಡಾ.ಕೆ.ವೈ.ನಾರಾಯಣಸ್ವಾಮಿ, ರೇಣುಕಾ ನಿಡಗುಂದಿ, ಕಮಲಾಕರ ಭಟ್ ಕಡವೆ ಇವರುಗಳು ನಿರ್ಣಾಯಕರಾಗಿ ಸಹಕರಿಸಿರುತ್ತಾರೆ. ಈ ಪ್ರಶಸ್ತಿಯು ಹದಿನೈದು ಸಾವಿರ ನಗದಿನೊಂದಿಗೆ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಆಗಸ್ಟ್ ಹದಿಮೂರರಂದು ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ

ಹೆಮ್ಮಾಡಿ: ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಣೆ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಪ್ರಾಂಶುಪಾಲ ಗಣೇಶ‌ ಮೊಗವೀರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಭಾರತೀಯ ಸೇನೆಯ  ನಿವೃತ್ತ  ಜೂನಿಯರ್ ಕಮಿಷನ್ಡ್ ಅಧಿಕಾರಿ ಜೋಷಿ ಪಿ.ಪಿ. ಮಾತನಾಡಿ ತಾವು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ನೆನಪುಗಳೊಂದಿಗೆ ಯುದ್ಧದ ಕುರಿತಾದ ಸಂಪೂರ್ಣ ಮಾಹಿತಿ ನೀಡಿದರು. ಕಾಲೇಜು ಆಡಳಿತ ಮಂಡಳಿಯ ಉಪಾಧ್ಯಕ್ಷ ಹಾಗೂ ರಸಾಯನಶಾಸ್ತ್ರ ಉಪನ್ಯಾಸಕ ಡಾ. ಮಂಜುನಾಥ ಗಾಣಿಗ, ಕಾರ್ಯದರ್ಶಿ ಹಾಗೂ […]

ಮಾಂಡವಿ ಏಕ್ರೋಪೊಲಿಸ್ ವತಿಯಿಂದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ

ಉಡುಪಿ: ನಗರದ ಹೃದಯ ಭಾಗದಲ್ಲಿರುವ ಮಾಂಡವಿ ಏಕ್ರೋಪೊಲಿಸ್ ನ ನಿವಾಸಿಗಳೆಲ್ಲರೂ ಸೇರಿ ನಡೆಸಿದಂತಹ “ಕೆಸರ್ಡ್ ಒಂಜಿ ದಿನ” ಕಾರ್ಯಕ್ರಮ ಬೈಲೂರು ಮಹಿಷಿ ಮರ್ದಿನಿ ಶಾಲೆಯ ಬಳಿ ಇರುವ ಗದ್ದೆಯಲ್ಲಿ ಅತ್ಯಂತ ಅದ್ದೂರಿಯಾಗಿ ಜರಗಿತು. ಮಾಂಡವಿ ಬಿಲ್ಡರ್ಸ್ ನ ಪ್ರಮುಖರಾದ ಜೆರ್ರಿ ವಿನ್ಸೆಂಟ್ ಡಯಾಸ್ ಅವರು ತೆಂಗಿನ ಗರಿಯ ಹೂವನ್ನು ಬಿಡಿಸುವ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮಾಂಡವಿ ಏಕ್ರೋಪೊಲಿಸ್ ಸೊಸೈಟಿ ಅಧ್ಯಕ್ಷ ಸುಕುಮಾರ್ ಶೆಟ್ಟಿ ಕೆಸರಿನ ಆಟದ  ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ಲೆಂಡ್ ಡಯಾಸ್, […]

ಜುಲೈ 30-31 ರಂದು ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಟೂರ್ನಮೆಂಟ್

ಉಡುಪಿ: ಉಡುಪಿಯ ವಿಕ್ಟೋರಿಯಾ ಜುಬಿಲಿ ಯೂನಿಯನ್ ಕ್ಲಬ್ ಇವರ ಆಶ್ರಯದಲ್ಲಿ ಹಾಗೂ ಟೇಬಲ್ ಟೆನಿಸ್ ಚಾಂಪಿಯನ್ ದಿ. ಬಿ.ಯು.ಕೃಷ್ಣಮೂರ್ತಿ ಇವರ ನೆನಪಿನಲ್ಲಿ, ಉಡುಪಿ ಜಿಲ್ಲಾ ಟೇಬಲ್ ಟೆನಿಸ್ ಅಸೋಸಿಯೇಷನ್ ನ ನೇತೃತ್ವದಲ್ಲಿ, ಜುಲೈ 30 ಮತ್ತು 31 ರಂದು ನಗರದ ವಿಜೆಯು ಕ್ಲಬ್ ನಲ್ಲಿ, ಉಡುಪಿ ಜಿಲ್ಲೆಯ ಟೇಬಲ್ ಟೆನಿಸ್ ಆಟಗಾರರಿಗೆ ಟೂರ್ನಮೆಂಟ್ ನಡೆಯಲಿದೆ. ಟೂರ್ನಮೆಂಟ್ ನಲ್ಲಿ ಭಾಗವಹಿಸುವವರು ಜುಲೈ 28 ರೊಳಗೆ ತಮ್ಮ ಹೆಸರನ್ನು ಪಾರಿತೋಷಕ್ (ದೂರವಾಣಿ: 8971898557) ಇವರಲ್ಲಿ ನೋಂದಾಯಿಸಬೇಕು ಎಂದು ಕ್ಲಬ್ ನ […]