ದೇವನಹಳ್ಳಿಯ ತ್ಯಾಜ್ಯ ಸಂಸ್ಕರಣ ಘಟಕ ಮಾದರಿಯಿಂದ ಇಂದ್ರಾಣಿ ನದಿ ರಕ್ಷಣೆ: ವಿಜಯ್ ಕೊಡವೂರು

ಉಡುಪಿ: ದೇವನಹಳ್ಳಿ ಪುರಸಭಾ ವ್ಯಾಪ್ತಿಯಲ್ಲಿ 40,000 ಜನಸಂಖ್ಯೆ ಇರುವ 7100 ಮನೆಗಳನ್ನು ಹೊಂದಿರುವಂತಹ ಪ್ರದೇಶದ ನಾಗರಿಕರಿಗೆ ಅರ್ಧ ಎಕರೆ ಜಾಗದಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕದಿಂದ ಉತ್ತಮವಾದ ವ್ಯವಸ್ಥೆಯನ್ನು ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಕೊಳಕು ವಾಸನೆ ಇಲ್ಲ. ಮಲ ತ್ಯಾಜ್ಯದ ನೀರಿನ ಅಂಶವನ್ನು ತೋಡಿಗೆ ಅಥವಾ ನದಿಗೆ ಬಿಡಲಾಗುವುದಿಲ್ಲ ಬದಲಿಗೆ ಮಲವನ್ನು ಕೇಕ್ ರೂಪದಲ್ಲಿ ಹಸಿ ಕಸದ ಜೊತೆಯಲ್ಲಿ ಗೊಬ್ಬರವನ್ನಾಗಿ ಮಾಡಿ ಅಲ್ಲಿಯ ಕೃಷಿಕರಿಗೆ ಮಾರಾಟ ಮಾಡುವಂತಹ ಪದ್ಧತಿ ನಡೆಯುತ್ತಿದೆ. ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ, ನೀರಿನ […]