ವಿದ್ಯಾ ಟ್ಯುಟೋರಿಯಲ್: ಹತ್ತನೇ ತರಗತಿ ಉತ್ತೀರ್ಣರಾದವರಿಗೆ ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗುವ ಅವಕಾಶ
ಉಡುಪಿ: ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿ, ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಫೇಲಾಗಿದ್ದಲ್ಲಿ ಜನ್ಮ ದಿನಾಂಕ 31-03-2006 ರ ಮೊದಲು ಇದ್ದಲ್ಲಿ, ನೇರವಾಗಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟುವ ಅಥವಾ 7,8,9 ನೇ ತರಗತಿಗಳಲ್ಲಿ ಫೇಲಾಗಿದ್ದರೆ, ನೇರವಾಗಿ ಹತ್ತನೇ ತರಗತಿ ಪರೀಕ್ಷೆ ಕಟ್ಟುವ ಅವಕಾಶವಿದೆ. 8 ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೆ ತರಗತಿಗಳ ಪ್ರವೇಶಾತಿ ಪ್ರಾರಂಭವಾಗಿದೆ. ಸಂಪರ್ಕಿಸಿ: ಸತೀಶ್.ಎಸ್.ಕಾಡೋಳಿ, ವಿದ್ಯಾ ಟ್ಯುಟೋರಿಯಲ್ ಉಡುಪಿ. Ph: 98452 98165.
ಉಡುಪಿ ರಾಷ್ಟ್ರೀಯ ಹೆದ್ದಾರಿಗಳು ಮಾಯ! ಹೊಂಡದಲ್ಲಿ ರಸ್ತೆಯೋ ರಸ್ತೆಯಲ್ಲಿ ಹೊಂಡವೋ? ಪ್ರಯಾಣಿಕರಲ್ಲಿ ಗಲಿಬಿಲಿ!
ಉಡುಪಿ: ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ಮತ್ತು ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈಗ ಸಂಪೂರ್ಣ ಹೊಂಡಗಳದ್ದೇ ಕಾರುಬಾರು. ಜಿಲ್ಲೆಯ ಸಾವಿರಾರು ಪ್ರಯಾಣಿಕ ವಾಹನಗಳಿಗೆ ನಿತ್ಯ ಆಸರೆಯಾಗಿರುವ ಹೆದ್ದಾರಿಗಳು ಮರಣ ಮೃದಂಗ ಬಾರಿಸುತ್ತಿವೆ. ಹೆದ್ದಾರಿಗಳಲ್ಲಿ ನಿರ್ಮಾಣವಾಗಿರುವ ಆಳತ್ತೆರದ ಗುಂಡಿಯಲ್ಲಿ ಬಿದ್ದು, ಪ್ರಾಣ ಕಳೆದುಕೊಂಡ, ಕೈ ಕಾಲು ಮುರಿದುಕೊಂಡ ಘಟನೆಗಳು ಹಲವಾರು ನಡೆದಿವೆ. ಸುರತ್ಕಲ್ -ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಚಿಂತಾಜನಕವಾಗಿದೆ. ಇಲ್ಲಿ ರಸ್ತೆಯಲ್ಲಿ ಗುಂಡಿಯೋ, ಗುಂಡಿಯೊಳಗೆ ರಸ್ತೆಯೋ ಎಂದು ಪ್ರಯಾಣಿಕರು ಗಲಿಬಿಲಿಗೊಂಡು ಪ್ರಾಣ ಕೈಯಲ್ಲಿ […]
ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪ್ರವೇಶ ಪರೀಕ್ಷೆ: ಅರ್ಜಿ ಆಹ್ವಾನ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಉತ್ತರಾಖಂಡ ರಾಜ್ಯದ ಡೆಹರಾಡೂನ್‌ನಲ್ಲಿರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನ 8 ನೇ ತರಗತಿ ಸೇರ್ಪಡೆಗೆ ಪ್ರವೇಶ ಪರೀಕ್ಷೆಯು ಡಿಸೆಂಬರ್ 3 ರಂದು ಬೆಂಗಳೂರು ಕೇಂದ್ರದಲ್ಲಿ ನಡೆಯಲಿದ್ದು, ಸರ್ಕಾರದಿಂದ ಮಾನ್ಯತೆ ಪಡೆದಿರುವ ಯಾವುದೇ ಶಾಲೆಯಲ್ಲಿ 7 ನೇ ತರಗತಿ ಓದುತ್ತಿರುವ ಅಥವಾ ಉತ್ತೀರ್ಣರಾಗಿರುವ, 2023 ಜುಲೈ 1 ಕ್ಕೆ 11 1/2 ರಿಂದ 13 ವರ್ಷ ತುಂಬಿರುವ ಬಾಲಕ ಹಾಗೂ ಬಾಲಕಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳು 600 ರೂ. ಹಾಗೂ ಎಸ್.ಸಿ.ಎಸ್.ಟಿ ಅಭ್ಯರ್ಥಿಗಳು […]
ಸಿ.ಎಸ್.ಫೌಂಡೇಶನ್ ಪರೀಕ್ಷೆ: ಕಾರ್ಕಳ ಜ್ಞಾನಸುಧಾ ಕಾಲೇಜಿನ ಶ್ರೀಜಾ ಶೆಟ್ಟಿ ಸಾಧನೆ
ಕಾರ್ಕಳ: ಇಲ್ಲಿನ ಜ್ಞಾನಸುಧಾ ಪಿಯು ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು. ಶ್ರೀಜಾ ಶೆಟ್ಟಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರಿಸ್ ನಡೆಸುವ ರಾಷ್ಟ್ರ ಮಟ್ಟದ ಸಿಎಸ್ ಫೌಂಡೇಶನ್ ಪರೀಕ್ಷೆಯಲ್ಲಿಉತ್ತೀರ್ಣರಾಗಿ, ಸಿಎಸ್ ಎಕ್ಸಿಕ್ಯುಟಿವ್ ಪರೀಕ್ಷೆಗೆ ಅರ್ಹತೆ ಗಳಿಸಿದ್ದಾರೆ. ಈಕೆ ಮಿಯಾರು ಕುಂಟಿಬೈಲು ನಿವಾಸಿ ಪ್ರಶಾಂತ್ ಶೆಟ್ಟಿ ಹಾಗೂ ಶರ್ಮಿಳಾ ದಂಪತಿಯ ಪುತ್ರಿ. ಈಕೆಯ ಸಾಧನೆಗೆ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಅಭಿನಂದಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿಅತ್ಯಂತ ಮಹತ್ವ ಹೊಂದಿರುವ ಸಿಎಸ್ ಪರೀಕ್ಷೆಯಲ್ಲಿಉತ್ತೀರ್ಣರಾದವರಿಗೆ ಬಹುರಾಷ್ಟ್ರೀಯ […]
ಅಮೇರಿಕಾದ ಒರೆಗಾನ್‌ನಲ್ಲಿ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಅಮೇರಿಕಾದ ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ನಲ್ಲಿ 88.39 ಮೀಟರ್‌ಗಳ ಎಸೆತದೊಂದಿಗೆ ಭಾರತ ನೀರಜ್ ಚೋಪ್ರಾ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಚೋಪ್ರಾ, ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ ಫೈನಲ್‌ನ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದಾರೆ. ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಚೋಪ್ರಾ ಮೊದಲಿಗರಾಗಿ ಜಾವಲಿನ್ ಎಸೆದಿದ್ದಾರೆ. ನಾಳೆ ಮುಂಜಾನೆ ನಡೆಯಲಿರುವ ಫೈನಲ್‌ನಲ್ಲಿ 24 ವರ್ಷ ವಯಸ್ಸಿನ ಚೋಪ್ರಾ ಸ್ಪರ್ಧಿಸಲಿದ್ದಾರೆ. ನೀರಜ್ ಜೊತೆಗೆ ರೋಹಿತ್ ಯಾದವ್ ಕೂಡ […]