ಕೇಂದ್ರ ಸರಕಾರದ ಮಧ್ಯಪ್ರವೇಶದಿಂದ ಟೋಮೇಟೋ-ನೀರುಳ್ಳಿ ಚಿಲ್ಲರೆ ಮಾರಾಟ ಬೆಲೆ ಸ್ಥಿರ

ನವದೆಹಲಿ: ಮಾನ್ಸೂನ್ ಮಳೆಯ ಪ್ರಾರಂಭದೊಂದಿಗೆ ಮಾರುಕಟ್ಟೆಯ ಆಗಮನವು ಸುಧಾರಿಸಿರುವುದರಿಂದ ಟೊಮೇಟೊದ ಅಖಿಲ ಭಾರತ ಚಿಲ್ಲರೆ ಬೆಲೆ ಕಳೆದ ತಿಂಗಳಿಗಿಂತ ಶೇಕಡಾ 29 ರಷ್ಟು ಕುಸಿತವನ್ನು ದಾಖಲಿಸಿದೆ. ಈರುಳ್ಳಿಯ ಚಿಲ್ಲರೆ ಬೆಲೆಯು ಶೇಕಡಾ 9ರಷ್ಟು ನಿಯಂತ್ರಣದಲ್ಲಿದೆ, ಇದು ಕಳೆದ ವರ್ಷದ ಮಟ್ಟಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಈರುಳ್ಳಿ ಮತ್ತು ಟೊಮೆಟೊ ಬೆಲೆ ಸ್ಥಿರವಾಗಿರಲು ಸಹಕಾರಿಯಾಗಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರವು ಎರಡು ಲಕ್ಷ ಐವತ್ತು ಸಾವಿರ ಟನ್‌ಗಳಷ್ಟು ಈರುಳ್ಳಿಯನ್ನು ಸಂಗ್ರಹಿಸಿದೆ. ಇದು […]

ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ: ದೇಶಾದ್ಯಂತ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ ಮಂಜೂರು

ನವದೆಹಲಿ: ಫೇಮ್ ಇಂಡಿಯಾ ಯೋಜನೆಯ ಹಂತ-2 ಅಡಿಯಲ್ಲಿ ದೇಶಾದ್ಯಂತ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರವು 25 ರಾಜ್ಯ ಹಾಗೂ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳ 68 ನಗರಗಳಲ್ಲಿ 2,877 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಮಂಜೂರು ಮಾಡಿದೆ. ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ(ಫೇಮ್) ಯೋಜನೆಯಡಿ ಇವುಗಳನ್ನು ಮಂಜೂರು ಮಾಡಲಾಗಿದೆ. ಭಾರೀ ಕೈಗಾರಿಕೆಗಳ ರಾಜ್ಯ ಸಚಿವ ಕ್ರಿಶನ್ ಪಾಲ್ ಗುರ್ಜರ್ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ಫೇಮ್ ಇಂಡಿಯಾ […]

ಆಯುಷ್ಮಾನ್ ಭಾರತ್- ಡಿಜಿಟಲ್ ಹೆಲ್ತ್ ಐಡಿ ಕಡ್ಡಾಯ

ಉಡುಪಿ : ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್-ಡಿಜಿಟಲ್ ಹೆಲ್ತ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಸಾರ್ವಜನಿಕರು ಇದರ ಸೌಲಭ್ಯವನ್ನು ಪಡೆಯಲು ಆಯುಷ್ಮಾನ್ ಭಾರತ್-ಹೆಲ್ತ್ ಐಡಿ (ಎ.ಬಿ.ಹೆಚ್.ಎ. ಐಡಿ) ಹೊಂದಿರುವುದು ಕಡ್ಡಾಯವಾಗಿರುತ್ತದೆ. ಇದರಲ್ಲಿ ರೋಗಿಯ ಅನುಮತಿ ಮೇರೆಗೆ ವೈದ್ಯಕೀಯ ಚಿಕಿತ್ಸೆಗಳ ವಿವರಗಳನ್ನು ನಮೂದಿಸಲಾಗುವುದು ಹಾಗೂ ಚಿಕಿತ್ಸೆ ಪಡೆದ ವಿವರವನ್ನು ಆನ್‌ಲೈನ್ ಮೂಲಕ ಸಕಾಲಕ್ಕೆ ವೀಕ್ಷಿಸಬಹುದಾಗಿದೆ. ಸಾರ್ವಜನಿಕರು https://healthid.ndhm.gov.in/register ಲಿಂಕ್ ಅನ್ನು ಕ್ಲಿಕ್ ಮಾಡಿ ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ, ಆಧಾರ್ ಆಧಾರಿತ ಓ.ಟಿ.ಪಿ ವೆರಿಫಿಕೇಷನ್ ಮೂಲಕ ಎ.ಬಿ.ಹೆಚ್.ಎ. ಐಡಿ ಪಡೆಯಬಹುದಾಗಿದೆ ಎಂದು ಜಿಲ್ಲಾ […]