ಪ್ರಾಕೃತಿಕ ವಿಕೋಪ ಸಮಸ್ಯೆಗೆ ಶೀಘ್ರ ಪರಿಹಾರ: ಜಿಲ್ಲಾಡಳಿತದಿಂದ ವ್ಯಾಟ್ಸ್ ಅಪ್ ಸಂಖ್ಯೆ ಆರಂಭ

ಉಡುಪಿ: ಜಿಲ್ಲೆಯಲ್ಲಿ ಮಳೆಗಾಲದ ಸಮಯದಲ್ಲಿ ಉಂಟಾಗುವ ನೆರೆ ಪ್ರವಾಹ, ಮನೆ ಹಾನಿ, ಮೂಲಭೂತ ಸೌಕರ್ಯಗಳ ಹಾನಿ ಹಾಗೂ ಇನ್ನಿತರ ಯಾವುದೇ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ಛಾಯಾಚಿತ್ರದೊಂದಿಗೆ ಜಿಲ್ಲಾಡಳಿತದ ಗಮನಕ್ಕೆ ತಂದು, ಆ ಮೂಲಕ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರ ಗಮನಕ್ಕೆ ತರುವುದರೊಂದಿಗೆ ಕ್ಷಿಪ್ರಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಜಿಲ್ಲಾಡಳಿತವು ದೂರವಾಣಿ ಸಂಖ್ಯೆಯೊಂದಿಗೆ ವಾಟ್ಸ್ಅಪ್ ಸಂಖ್ಯೆಯನ್ನು 9880831516 ಆರಂಭಗೊಳಿಸಿದ್ದು, ಇದರ ಸದುಪಯೋಗವನ್ನು ಪಡೆಯುವುದರೊಂದಿಗೆ ಮಾನ್ಸೂನ್ ಸಂಧರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ ಕಾರ್ಯಕೈಗೊಳ್ಳಲು […]

ಉಡುಪಿ ಜಿಲ್ಲೆಗೆ 100 ಬೆಡ್‌ಗಳ ಇ.ಎಸ್.ಐ ಆಸ್ಪತ್ರೆ ಮಂಜೂರು: ಬಹುಕಾಲದ ಬೇಡಿಕೆ ನನಸಾಗಿದೆ ಎಂದ ಕುಯಿಲಾಡಿ

ಉಡುಪಿ: ಕೇಂದ್ರ ಸರಕಾರದಿಂದ ಉಡುಪಿ ಜಿಲ್ಲೆಗೆ 100 ಬೆಡ್ ಗಳ ಇ.ಎಸ್.ಐ ಆಸ್ಪತೆ ಮಂಜೂರಾಗಿದ್ದು, ಜಿಲ್ಲೆಯ ಜನತೆಯ ಬಹುಕಾಲದ ಬೇಡಿಕೆ ನನಸಾಗಿದೆ ಎಂದು ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹರ್ಷ ವ್ಯಕ್ತಪಡಿದ್ದಾರೆ. ಜನತೆಯ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಕೇಂದ್ರ ಕಾರ್ಮಿಕ ಸಚಿವರಾದ ಶ್ರೀ ಭೂಪೇಂದ್ರ ಯಾದವ್ ಹಾಗೂ ಉಡುಪಿ ಜಿಲ್ಲೆಗೆ ಆಸ್ಪತ್ರೆ ಮಂಜೂರು ಮಾಡುವಲ್ಲಿ ವಿಶೇಷ ಮುತುವರ್ಜಿ ವಹಿಸಿ ಯಶಸ್ವಿಯಾದ ಉಡುಪಿ-ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ […]

ಐಸಿಎಐಯ ಸಿ.ಎ ಪರೀಕ್ಷೆಯಲ್ಲಿ ತ್ರಿಶಾ ವಿದ್ಯಾರ್ಥಿಗಳ ಸಾಧನೆ

ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜೂನ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಫಿ಼ಯೋನಾ ಮೋನಿಸ್ ಮತ್ತು ಮಾರ್ವೆಲ್ ಕ್ರಿಸ್ಟನ್ ಡಿಸೋಜಾ಼ ಇವರುಗಳು ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಪ್ರಸ್ತುತ ಇವರಿಬ್ಬರೂ ಮಂಗಳೂರಿನ ಲೆಕ್ಕಪರಿಶೋಧಕರಾದ ಶ್ರೀರಾಮುಲು ನಾಯ್ಡು ಮತ್ತು ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ನಡೆಸುತ್ತಿದ್ದು, ಇವರು ಸಿಎಯ ಎರಡು ಹಂತದ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಅಂತಿಮ ಹಂತದ ತರಬೇತಿಯನ್ನು ಆನ್ ಲೈನ್ ಮೂಲಕ ಪಡೆದಿರುತ್ತಾರೆ. ಉಡುಪಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು […]