ಪ್ರಥಮ ಪ್ರಯತ್ನದಲ್ಲೇ ಸಿಎ ಪರೀಕ್ಷೆಯಲ್ಲಿಉತ್ತೀರ್ಣ: ತ್ರಿಶಾ ವಿದ್ಯಾರ್ಥಿಯ ಸಾಧನೆ

ಉಡುಪಿ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ಜೂನ್ 2022ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಉಪ್ಪೂರಿನ ರಚಿತ್ ಆರ್ ಶೆಟ್ಟಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಉಡುಪಿಯ ಲೆಕ್ಕಪರಿಶೋಧಕರಾದ ದೇವ್ ಆನಂದ್ ಮತ್ತು ಕಂಪೆನಿಯಲ್ಲಿ ಆರ್ಟಿಕಲ್ಶಿಪ್ ಪೂರೈಸಿದ್ದು, ಇವರು ‘ಸಿಎ’ಯ ಎರಡು ಹಂತದ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಹಾಗೂ ಅಂತಿಮ ಹಂತದ ತರಬೇತಿಯನ್ನು ಆನ್ ಲೈನ್ ಮೂಲಕ ಪಡೆದಿರುತ್ತಾರೆ. ಉಡುಪಿಯ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪೂರೈಸಿರುತ್ತಾರೆ. ಇವರು ಉಪ್ಪೂರಿನ ರತ್ನಾಕರ ಶೆಟ್ಟಿ ಮತ್ತು […]

ಕರಾವಳಿಯಲ್ಲಿ ಮತ್ತೆ ಅತ್ಯಾಧಿಕ ಮಳೆಯ ಮುನ್ಸೂಚನೆ: ಪ್ರಕ್ಷುಬ್ದ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ

ಉಡುಪಿ: ಮುಂದಿನ 24 ಗಂಟೆಗಳಲ್ಲಿ ಮತ್ತು ನಂತರದ ನಾಲ್ಕು ದಿನಗಳವರೆಗೆ ಕರ್ನಾಟಕ ಕರಾವಳಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜುಲೈ 16 ರಂದು 115.6 ಮಿಮೀ ನಿಂದ 204.4 ಮಿಮೀ ವರೆಗೆ ಮಳೆಯಾಗುವ ನಿರೀಕ್ಷೆಯಿದೆ. ಜುಲೈ 17 ರಿಂದ 20ರ ವರೆಗೆ ಕರಾವಳಿ ಭಾಗದಲ್ಲಿ ಅಧಿಕ ಮಳೆ ಬೀಳುವ ಸಾಧ್ಯತೆ ಇದೆ. ಕಾರವಾರದಿಂದ ಮಂಗಳೂರಿನವರೆಗಿನ ಸಮುದ್ರವೂ ಪ್ರಕ್ಷುಬ್ದವಾಗಲಿದ್ದು, 3.5 ರಿಂದ 4.6 ಮೀಟರ್ ಎತ್ತರದ ಅಲೆಗಳು ಕಾಣಿಸಿಕೊಳ್ಳಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. […]

ಅಖಿಲ ಭಾರತ ಕರಾಟೆ ಚಾಂಪಿಯನ್ ಶಿಪ್: ಜಿಲ್ಲಾ ಕರಾಟೆ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ

ಮಣಿಪಾಲ: ಮಹಾರಾಷ್ಟ್ರದ ಪುಣೆಯಲ್ಲಿ ಕರಾಟೆ ಇಂಡಿಯಾ ಸಂಸ್ಥೆ ವತಿಯಿಂದ ಜೂನ್17 ರಿಂದ 19 ರವರೆಗೆ ಆಯೋಜಿಸಲಾಗಿದ್ದ ಅಖಿಲ ಭಾರತ ಕರಾಟೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಗೆದ್ದ ಎಂಟು ಪದಕಗಳಲ್ಲಿ ಐದು ಪದಕಗಳು ಉಡುಪಿ ಜಿಲ್ಲೆಯ ಆಟಗಾರರದ್ದಾಗಿತ್ತು. 2 ಚಿನ್ನ, 2 ಬೆಳ್ಳಿ, 1 ಕಂಚಿನೊಂದಿಗೆ ಜಿಲ್ಲೆಯ ಆಟಗಾರರು ಒಟ್ಟು ಐದು ಪದಕಗಳನ್ನು ತಮ್ಮದಾಗಿಸಿಕೊಂಡರು. ಪದಕ ಗೆದ್ದ ಹಾಗೂ ಭಾಗವಹಿಸಿದ ಎಲ್ಲಾ ಕರಾಟೆ ಆಟಗಾರರಿಗೆ ಉಡುಪಿ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಶನ್ ವತಿಯಿಂದ ಹಾಗೂ ಮಾಹೆ ಸಹಯೋಗದಲ್ಲಿ […]

ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಎನ್.ಇ.ಪಿ ಕುರಿತು ಉಪನ್ಯಾಸ ಕಾರ್ಯಕ್ರಮ

ಶಾರದಾ ರೆಸಿಡೆನ್ಶಿಯಲ್ ಶಾಲೆ ಹಾಗೂ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಜುಲೈ 7 ರಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಡಯಟ್ ಪ್ರಾಂಶುಪಾಲ ಹಾಗೂ ಬಿಇಒ(ಪ್ರಭಾರ) ಡಾ. ಅಶೋಕ್ ಕಾಮತ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹೊಸ ಶಿಕ್ಷಣ ನೀತಿಯ ಗುರಿ, ಅನುಕೂಲಗಳು, ಶಾಲಾ ಶಿಕ್ಷಣದಲ್ಲಿ ಇದುವರೆಗಿದ್ದ 10+2 ಮಾದರಿಯನ್ನು ಮಾರ್ಪಡಿಸಿ,3 ರಿಂದ 18 ವಯೋಮಾನದವರೆಗೆ 5+3+3+4 ಮಾದರಿಯಲ್ಲಿ ಬೋಧನಾ ಕ್ರಮ ಹಾಗೂ ಶಿಕ್ಷಣ ಮರು ವಿನ್ಯಾಸ ಮಾಡಿರುವುದರ ಬಗ್ಗೆ ಸಮಗ್ರ ಮಾಹಿತಿ […]

ಎಸ್.ಎಫ್. ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿ: ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ ವತಿಯಿಂದ ಪ್ರಸಕ್ತ ಸಾಲಿನ ಎಸ್.ಎಫ್. ಸಿ ಮುಕ್ತನಿಧಿ ಹಾಗೂ ನಗರಸಭಾ ನಿಧಿಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನದಡಿ ಪರಿಶಿಷ್ಟ ಜಾತಿಗೆ ಒಳಚರಂಡಿ ಜೋಡಣೆ, ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ನವೀಕರಣ, ಪರಿಶಿಷ್ಟ ಪಂಗಡಕ್ಕೆ ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ನವೀಕರಣ, ನಳ್ಳಿ ನೀರಿನ ಜೋಡಣೆ, ಶೌಚಾಲಯ ನಿರ್ಮಾಣ ಮತ್ತು ಸ್ವಂತ ಉದ್ಯೋಗ ಹೊಂದಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ […]