ಬೈಕಾಡಿ: ಕೆ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದ ವತಿಯಿಂದ ಉಚಿತ ನೇತ್ರ ತಪಾಸಣಾ ಶಿಬಿರ
ಬೈಕಾಡಿ: ಕೆ ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಇವರ ವತಿಯಿಂದ ಬೈಕಾಡಿ ಗಾಂಧಿನಗರ ನಾಗದೇವರು ಮತ್ತು ನಾಗಕನ್ನಿಕಾ ಅಮ್ಮನವರ ಸಾನಿಧ್ಯ, ಗೆಳೆಯರ ಬಳಗ, ನವಗ್ರಹ ಫ್ರೆಂಡ್ಸ್, ಶ್ರೀ ರಾಮ ಮಿತ್ರ ಕೂಟ ಭಜನಾ ಮಂದಿರ, ಲಕ್ಕಿ ಸ್ಟಾರ್ ಡ್ಯಾನ್ಸ್ ಗ್ರೂಪ್, ನೂರಾನಿ ಜುಮ್ಮಾ ಮಸೀದಿ, ಶ್ರೀ ಮಂಜುನಾಥೇಶ್ವರ ವಿದ್ಯಾರ್ಥಿ ಕ್ಷೇಮಾಭಿವೃದ್ದಿ ಸಂಘ, ಬೈಕಾಡಿ ಭದ್ರಗಿರಿ ಯುವಕ ಮಂಡಲ ಇವರ ಸಹಯೋಗದೊಂದಿಗೆ ಜುಲೈ 16 ರಂದು ಶನಿವಾರ ಗಾಂಧಿನಗರ […]
ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದೆ: ಪಾಕ್ ಪತ್ರಕರ್ತನ ಹೇಳಿಕೆಯಿಂದ ದೇಶದಲ್ಲಿ ಸಂಚಲನ
ನವದೆಹಲಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ತನ್ನನ್ನು ಭಾರತಕ್ಕೆ ಆಹ್ವಾನಿಸುತ್ತಿದ್ದರು ಎಂಬ ಪಾಕ್ ಪತ್ರಕರ್ತನ ಹೇಳಿಕೆ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಈ ಹೇಳಿಕೆಯಿಂದ ದೇಶದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ. ಹಮೀದ್ ಅನ್ಸಾರಿ ಉಪರಾಷ್ಟ್ರಪತಿಯಾಗಿದ್ದಾಗ ಭಾರತಕ್ಕೆ ಭೇಟಿ ನೀಡಿದ್ದೆ ಮತ್ತು ಆ ಸಮಯದಲ್ಲಿ ಪಾಕಿಸ್ತಾನದ ಐಎಸ್‌ಐ ಜೊತೆ ಭಾರತಕ್ಕೆ ಸಂಬಂಧಿಸಿದ ಹಲವು ಗೌಪ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾಗಿ ಪಾಕಿಸ್ತಾನಿ ಪತ್ರಕರ್ತರೊಬ್ಬರ ಸಂದರ್ಶನದಿಂದ ಈ ವಿವಾದ ಹುಟ್ಟಿಕೊಂಡಿದೆ. “ಭಾರತದ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು […]
ಯೂನಿವರ್ಸಿಟಿ ರೋವರ್ ಚಾಲೆಂಜ್ ಸ್ಪರ್ಧೆಯಲ್ಲಿ ಎಂಐಟಿ ವಿದ್ಯಾರ್ಥಿಗಳ ಸಾಧನೆ: 21 ನೇ ಸ್ಥಾನ ಗಳಿಕೆ
ಮಣಿಪಾಲ: ಇಲ್ಲಿನ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಾಹೆಯ ವಿದ್ಯಾರ್ಥಿ ತಂಡವು ಜೂನ್ 1 ರಿಂದ 4 ರವರೆಗೆ ಅಮೇರಿಕಾದ ಹ್ಯಾಂಕ್ಸ್ವಿಲ್ಲೆ, ಉತಾಹ್ ನ ಮಾರ್ಸ್ ಡೆಸರ್ಟ್ ರಿಸರ್ಚ್ ಸ್ಟೇಷನ್‌ನಲ್ಲಿ ನಡೆದ ‘ಯೂನಿವರ್ಸಿಟಿ ರೋವರ್ ಚಾಲೆಂಜ್ 2022’ ಪ್ರದರ್ಶನದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ಎಂಐಟಿಯ ‘ಮಾರ್ಸ್ ರೋವರ್ ಮಣಿಪಾಲ್’ ತಂಡವು ಸ್ಪರ್ಧೆಯಲ್ಲಿ ಒಟ್ಟಾರೆ 21 ನೇ ಸ್ಥಾನವನ್ನು ಗಳಿಸಿದೆ ಮತ್ತು ಅತ್ಯುತ್ತಮ ವಿಜ್ಞಾನ ತಂಡವಾಗಿ “ಜಾನ್ ಬರೈಂಕಾ ಪ್ರಶಸ್ತಿ”ಯನ್ನು ಸಹ ಗೆದ್ದುಕೊಂಡಿದೆ. ಯೂನಿವರ್ಸಿಟಿ ರೋವರ್ ಚಾಲೆಂಜ್ ವಾರ್ಷಿಕವಾಗಿ […]
ಭಾರತೀಯ ಅಂಚೆ ಇಲಾಖೆಯ ವತಿಯಿಂದ ಪತ್ರ ಲೇಖನ ಸ್ಪರ್ಧೆ
ಉಡುಪಿ: ಭಾರತೀಯ ಅಂಚೆ ಇಲಾಖೆಯ ವತಿಯಿಂದ 18 ವರ್ಷ ಮೇಲ್ಪಟ್ಟವರಿಗೆ, ‘ವಿಶನ್ ಫಾರ್ ಇಂಡಿಯಾ 2047’ ಎಂಬ ವಿಷಯದ ಕುರಿತು ಹಿಂದಿ, ಇಂಗ್ಲೀಷ್ ಹಾಗೂ ಕನ್ನಡ ಭಾಷೆಯಲ್ಲಿ ಪತ್ರಲೇಖನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧಾಳುಗಳು ಅಂತರ್ದೇಶೀಯ ಪತ್ರದಲ್ಲಿ ಬರೆದ ಕೈಬರಹದ ಪ್ರತಿಯನ್ನು ಅಂಚೆ ಅಧೀಕ್ಷಕರು, ಉಡುಪಿ ಅಂಚೆ ವಿಭಾಗ, ಉಡುಪಿ ಇವರಿಗೆ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.indiapost.gov.in, www.karnatakapost.gov.in ಅಥವಾ ದೂರವಾಣಿ ಸಂಖ್ಯೆ: 0820-2521780 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ವಿಭಾಗದ […]
ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಮುಖ್ಯಮಂತ್ರಿಗಳಿಂದ ನಮನ ಸಲ್ಲಿಕೆ
ಉಡುಪಿ: ಬುಧವಾರದಂದು ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಪ್ರಯುಕ್ತ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಉಡುಪಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಮತ್ತಿತರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.