ಗ್ರಾಮಾಭಿವೃದ್ದಿಯಿಂದ ದೇಶಾಭಿವೃದ್ದಿಯತ್ತ: ಧರ್ಮಸ್ಥಳದಿಂದ ದೆಹಲಿಯತ್ತ ಪಯಣಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ
ನವೆಂಬರ್ 25, 1948 ರಂದು ಪ್ರಕೃತಿಯ ಒಡಲಲ್ಲಿ ಧರ್ಮದೇವತೆ ಶ್ರೀ ಮಂಜುನಾಥ ನೆಲೆಯಾದ ಪವಿತ್ರ ಭೂಮಿಯಲ್ಲಿ ಜನನ. ಕಡು ಕುಗ್ರಾಮವಾದ ಹಳ್ಳಿಯಲ್ಲಿ ಸೌಕರ್ಯಗಳೇ ಇಲ್ಲದಿದ್ದ ಕಾಲವದು. ಕುಡುಮ ಎಂಬ ಪುಟ್ಟ ಹಳ್ಳಿಯನ್ನು ಧರ್ಮಸ್ಥಳವಾಗಿಸಿ ದೇಶ ವಿದೇಶದ ಭಕ್ತ ಸಾಗರ ಶ್ರೀ ಕ್ಷೇತ್ರಕ್ಕೆ ಹರಿದು ಬರುವಂತೆ ಮಾಡಿದ ಕೀರ್ತಿ ಶ್ರೀಯುತ ವೀರೇಂದ್ರ ಹೆಗ್ಗಡಿಯವರಿಗಲ್ಲದೆ ಬೇರಾರಿಗೂ ಸಲ್ಲುವುದಿಲ್ಲ. ತಂದೆ ರತ್ನವರ್ಮ ಹೆಗ್ಗಡೆಯವರು ನಿಧನರಾದಾಗ ವೀರೇಂದ್ರ ಹೆಗ್ಗಡೆಯವರು ಇನ್ನೂ ಹದಿಹರೆಯದ ಹುಡುಗ. ಎಳವೆಯಲ್ಲೇ ಕ್ಷೇತ್ರದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಇವರು […]
18 ವರ್ಷ ಮೇಲ್ಪಟ್ಟವರಿಗೆ ಜುಲೈ 15 ರಿಂದ 75 ದಿನಗಳವರೆಗೆ ಉಚಿತ ಕೋವಿಡ್-19 ಬೂಸ್ಟರ್ ಡೋಸ್
ಮುಂಬೈ: 18 ವರ್ಷ ಮೇಲ್ಪಟ್ಟ ನಾಗರಿಕರಿಗೆ ಶುಕ್ರವಾರದಿಂದ ಮುಂದಿನ 75 ದಿನಗಳವರೆಗೆ ಉಚಿತ ಕೋವಿಡ್-19 ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಬುಧವಾರ ಪ್ರಕಟಿಸಿದ್ದಾರೆ. ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ‘ಆಜಾದಿ ಕಾ ಅಮೃತ್ ಮಹೋತ್ಸವ’ ಅಂಗವಾಗಿ ಬೂಸ್ಟರ್ ಡೋಸ್ ಅಭಿಯಾನ ಅನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ. ವಿಶೇಷ 75 ದಿನಗಳ ಅಭಿಯಾನದಡಿಯಲ್ಲಿ, 18 ರಿಂದ 59 ವಯಸ್ಸಿನ ಎಲ್ಲಾ ವಯಸ್ಕರಿಗೆ ಜುಲೈ 15 […]
ನೀಟ್-ಯುಜಿ ಪರೀಕ್ಷೆ ಮುಂದೂಡಿಕೆ: ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್; ಜುಲೈ 17 ರಂದೇ ಪರೀಕ್ಷೆ
ನವದೆಹಲಿ: ದೆಹಲಿ ಹೈಕೋರ್ಟ್ ಇಂದು (ಜುಲೈ 14, 2022) ಹಲವಾರು ಆಕಾಂಕ್ಷಿಗಳು ಜುಲೈ 17 ರಂದು ನಡೆಸಲು ಉದ್ದೇಶಿಸಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ-ಪದವಿಪೂರ್ವ (ನೀಟ್-ಯುಜಿ 2022) ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿತು. ಹದಿನೈದು ನೀಟ್-ಯುಜಿ ಆಕಾಂಕ್ಷಿಗಳು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಸಂಜೀವ್ ನರುಲಾ ವಜಾಗೊಳಿಸಿದ್ದಾರೆ. ನೀಟ್-ಯುಜಿ ಅತ್ಯಂತ ಸವಾಲಿನ ಪರೀಕ್ಷೆಯಾಗಿದ್ದು, ಪ್ರಸ್ತುತ ವೇಳಾಪಟ್ಟಿಯಂತೆ ನಡೆಸಿದರೆ, ಇದು ಒಂದು ವರ್ಷದ ಶಿಕ್ಷಣವನ್ನು ಸರಿಪಡಿಸಲಾಗದ ನಷ್ಟವನ್ನು ಉಂಟುಮಾಡುತ್ತದೆ ಮತ್ತು ಲಕ್ಷಾಂತರ ವಿದ್ಯಾರ್ಥಿಗಳಿಗೆ ಗಮನಾರ್ಹ […]
ಕರ್ನಾಟಕ ಜಾನಪದ ಅಕಾಡೆಮಿ: ಪುಸ್ತಕ ಬಹುಮಾನಕ್ಕೆ ಜಾನಪದ ಕೃತಿಗಳ ಆಹ್ವಾನ
ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ 2021 ರ ಜನವರಿ 1 ರಿಂದ ಡಿಸೆಂಬರ್ 31 ರ ವರೆಗೆ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ ಹಾಗೂ ಜನಪದ ಸಂಕೀರ್ಣ ಪ್ರಕಾರಗಳ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿ ಲೇಖಕರು, ಪ್ರಕಾಶಕರು ಹಾಗೂ ಸಂಪಾದಕರಿಂದ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಪುಸ್ತಕಗಳನ್ನು ಸಲ್ಲಿಸಲು ಜುಲೈ 31 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, […]
ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ: ಘನ ವಾಹನ ಸಂಚಾರ ನಿಷೇಧ
ಸಕಲೇಶಪುರ: ಭಾರೀ ಮಳೆಯಿಂದಾಗಿ ಪಶ್ಚಿಮ ಘಟ್ಟದ ಘಾಟಿಗಳು ಕುಸಿಯುತ್ತಿದ್ದು, ಶಿರಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ ಉಂಟಾಗಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ಮಾರ್ಗದಲ್ಲಿ ಘನ ವಾಹನಗಳ ಸಂಚಾರವನ್ನು ನಿಸೇಧಿಸಲಾಗಿದೆ ಎಂದು ಉಪವಿಭಾಗಾಧಿಕಾರಿ ಪ್ರತೀಕ್ ಬಯಾಲ್ ತಿಳಿಸಿದ್ದಾರೆ. ಸಕಲೇಶಪುರ ತಾಲೂಕಿನ ದೋಣಿಗಲ್ ಸಮೀಪ ಒಂದು ವಾರದ ಹಿಂದೆ ರಸ್ತೆ ಸ್ವಲ್ಪ ಕುಸಿದಿತ್ತು. ವಿಚಾರ ತಿಳಿದ ಲೋಕೋಪಯೋಗಿ ಇಲಾಖೆ ಸಚಿವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದಾದ ನಾಲ್ಕನೇ ದಿನಕ್ಕೆ ಭೂಕುಸಿತವಾಗಿದೆ.