ಸಾಮಾಜಿಕ ಮಾಧ್ಯಮಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣ ತೀವ್ರ ಏರಿಕೆ: ರಟ್ಜರ್ಸ್ ವಿಶ್ವವಿದ್ಯಾಲಯದ ವಿಶ್ಲೇಷಣೆ
ಇತ್ತೀಚೆಗೆ, ಅಮೇರಿಕಾದ ರಟ್ಜರ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷ ಭಾಷಣ ಪ್ರಕರಣಗಳಲ್ಲಿ ತೀವ್ರ ಏರಿಕೆಯ ಪುರಾವೆಗಳನ್ನು ಕಂಡುಕೊಂಡಿದ್ದಾರೆ. ಅವರ 1 ಮಿಲಿಯನ್ ಟ್ವೀಟ್‌ಗಳ ವಿಶ್ಲೇಷಣೆಯ ಪ್ರಕಾರ, ಇರಾನಿನ ಟ್ರೋಲ್‌ಗಳು ಹಿಂದೂ ಸಮುದಾಯವು ಅಲ್ಪಸಂಖ್ಯಾತರ ಜನಾಂಗೀಯ ಹತ್ಯೆ ಮಾಡುತ್ತಿದೆ ಎಂದು ಆರೋಪಿಸುವ ಅಭಿಯಾನದ ಭಾಗವಾಗಿ ವಿಭಜನೆಯನ್ನು ಸೃಷ್ಟಿಸಲು ಮೀಮ್‌ಗಳು, ಹಿಂದೂ ವಿರೋಧಿ ರೂಢಿಬದ್ದ ಧಾರಣೆಗಳನ್ನು ಹರಡುತ್ತಿದೆ. “ದುರದೃಷ್ಟವಶಾತ್, ಹಿಂದೂ ಜನಸಂಖ್ಯೆಯು ಎದುರಿಸುತ್ತಿರುವ ಮತಾಂಧತೆ ಮತ್ತು ಹಿಂಸಾಚಾರದಲ್ಲಿ ಹೊಸದೇನೂ ಇಲ್ಲ. ಹೊಸದೇನೆಂದರೆ ಸಾಮಾಜಿಕ ಮಾಧ್ಯಮದಲ್ಲಿ […]
ಮಳೆಹಾನಿಯಿಂದಾದ ಮೂಲಸೌಕರ್ಯ ದುರಸ್ತಿಗೆ ತಕ್ಷಣವೇ 500 ಕೋಟಿ ರೂ.ಗಳ ಅನುದಾನ ಬಿಡುಗಡೆ: ಬಸವರಾಜ ಬೊಮ್ಮಾಯಿ
ಉಡುಪಿ: ಅತಿವೃಷ್ಟಿ, ಪ್ರವಾಹದಿಂದ ಸಂಭವಿಸಿದ ಹಾನಿಯ ಕುರಿತು ಎಲ್ಲಾ ಜಿಲ್ಲೆಗಳಿಂದ ವರದಿ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣವೇ ಹಾನಿಯಾದ ಮೂಲಸೌಕರ್ಯಗಳಿಗೆ ಅಂದರೆ ಆರ್.ಡಿ.ಪಿ.ಆರ್/ ಲೋಕೋಪಯೋಗಿ ರಸ್ತೆಗಳು , ವಿದ್ಯುತ್, ಸೇತುವೆ ದುರಸ್ತಿಗಾಗಿ 500 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ರಜತಾದ್ರಿಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಪರಿಶೀಲನೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಆಗಸ್ಟ್ ತಿಂಗಳಿನಲ್ಲಿ ಪುನಃ ಪರಿಶೀಲನೆ ಮಾಡಿ ಅಗತ್ಯಕ್ಕೆ ಅನುಸಾರವಾಗಿ ಹಣ ಬಿಡುಗಡೆ […]
ಲಾರಿ ಹಾರ್ನ್ ಗೆ ಬೈಕರ್ ಗಳಿಂದ ರಸ್ತೆಯಲ್ಲಿ ನಾಗಿನ್ ಡಾನ್ಸ್! ವೈರಲ್ ಆಯ್ತು ಹುಡುಗರ ನೃತ್ಯ!
ಟ್ವಿಟರ್ ಬಳಕೆದಾರ ಕಿರಣ್ ಅರುಣ್ ಕಡುಪಾಟೀಲ್ ಶೇರ್ ಮಾಡಿರುವ ವೈರಲ್ ವಿಡಿಯೋ ಒಂದರಲ್ಲಿ ಬೈಕರ್ ಗಳು ಲಾರಿಯ ಪುಂಗಿಯ ನಾದದ ಹಾರ್ನಿಗೆ ನಾಗಿನ್ ಡಾನ್ಸ್ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. 12 ಸಾವಿರಕ್ಕು ಹೆಚ್ಚು ವೀಕ್ಷಣೆ ಪಡೆದಿರುವ ಈ ವೀಡಿಯೋ ನೆಟ್ಟಿಗರ ಗಮನಸೆಳೆದಿದ್ದು, ಎಲ್ಲೆಲ್ಲೂ ಪಡ್ಡೆ ಹೈಕಳ ನಾಗಿನ್ ಡಾನ್ಸ್ ಸುದ್ದಿಯೇ ಮಿಂಚುತ್ತಿದೆ. ಈ ವೀಡಿಯೋ ನಿಖರವಾಗಿ ಯಾವ ಪ್ರದೇಶದ್ದೆಂದು ತಿಳಿದು ಬಂದಿಲ್ಲ. #WATCH A group of bikers broke into the 'Nagin' dance on […]
ಕಾಸರಗೋಡಿನ ಕಲಾವಿದ ಕರಣ್ ಆಚಾರ್ಯ ಕಮಾಲಿಗೆ ಫಿದಾ ಆದ ನೆಟ್ಟಿಗರು!
ಕಾಸರಗೋಡು: ಜಿಲ್ಲೆಯ ಕೂಡ್ಲು ನಿವಾಸಿ ಆಂಗ್ರಿ ಹನುಮಾನ್ ಖ್ಯಾತಿಯ ಗ್ರಾಫಿಕ್ ಡಿಸೈನರ್ ಕರಣ್ ಆಚಾರ್ಯ ಅವರ ಬಾಲಕೃಷ್ಣ ಮತ್ತು ಬಾಲರಾಧೆಯ ಕಲಾಕೃತಿಯೊಂದು ನೆಟ್ಟಿಗರ ಮನ ಸೂರೆಗೊಂಡಿದೆ. ತಮಿಳುನಾಡಿನ ಇನ್ಸ್ಟಾಗ್ರಾಂ ಬಳಕೆದಾರ ನವೀನ್ ಎಂಬವರೊಬ್ಬರು, ಮಕ್ಕಳ ಚಿತ್ರವೊಂದನ್ನು ಹಂಚಿಕೊಂಡಿದ್ದು ಕರಣ್ ಅವರನ್ನು ಟ್ಯಾಗ್ ಮಾಡಿ ಇದನ್ನು ಎಡಿಟ್ ಮಾಡಬಹುದೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕರಣ್ ಆಚಾರ್ಯ ಆ ಇಬ್ಬರು ಮಕ್ಕಳ ಚಿತ್ರವನ್ನು ಬಾಲರಾಧೆ ಮತ್ತು ಬಾಲಕೃಷ್ಣ ರೀತಿ ಎಡಿಟ್ ಮಾಡಿ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಇದನ್ನು […]
ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಆಯ್ಕೆ ಕುರಿತು ಸಭೆ: ವೈಯಕ್ತಿಕ ಭೇಟಿಗಾಗಿ ವಿದೇಶಕ್ಕೆ ತೆರಳಿದ ರಾಹುಲ್ ಗಾಂಧಿ
ನವದೆಹಲಿ: ಮಂಗಳವಾರದಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ‘ಸಣ್ಣ ವೈಯಕ್ತಿಕ ಭೇಟಿಗೆ’ ವಿದೇಶಕ್ಕೆ ತೆರಳಿದ್ದು, ರಾಷ್ಟ್ರಪತಿ ಚುನಾವಣೆ ಮತ್ತು ಜುಲೈ 18 ರಂದು ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನದ ಮುನ್ನ ಭಾನುವಾರದ ವೇಳೆಗೆ ಹಿಂತಿರುಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಪಕ್ಷವು ಅವರ ಭೇಟಿಯ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ ಮತ್ತು ಅದನ್ನು ವೈಯಕ್ತಿಕ ಭೇಟಿ ಎಂದಷ್ಟೆ ಹೇಳಿದೆ. ಪದೇ ಪದೇ ವಿದೇಶಕ್ಕೆ ಭೇಟಿ ನೀಡುತ್ತಿರುವುದಕ್ಕಾಗಿ ಬಿಜೆಪಿಯಿಂದ ಆಗಾಗ್ಗೆ ಟೀಕೆಗೆ ಒಳಗಾಗಿರುವ ರಾಹುಲ್, ಗುರುವಾರ ನಡೆಯಲಿರುವ ‘ಭಾರತ್ […]