ಮಂಗಳೂರು ಇನ್ಸ್ ಟಿಟ್ಯೂಟ್ ಆಫ್ ಆಂಕೋಲಜಿ: ಡೇ ಕೇರ್ ಸೆಂಟರ್ ಶುಭಾರಂಭ

ಮಂಗಳೂರು ಇನ್ಸ್ ಟಿಟ್ಯೂಟ್ ಆಫ್ ಆಂಕೋಲಜಿಯು ಉಡುಪಿಯಲ್ಲಿ ಡೇ ಕೇರ್ ಸೆಂಟರ್ ಅನ್ನು ಪ್ರಾರಂಭಿಸಿದ್ದು, ಶುಕ್ರವಾರ ಜುಲೈ 8 ರಂದು ಬೆಳಗ್ಗೆ 10 ಗಂಟೆಗೆ ಉಡುಪಿಯ ಕುಂಜಿಬೆಟ್ಟುವಿನಲ್ಲಿರುವ ಬುಸಿನೆಸ್ ಬೇ ಸೆಂಟರ್ ನ ಮೊದಲನೆ ಮಹಡಿಯಲ್ಲಿ ಉದ್ಘಾಟನಾ ಸಮಾರಂಭವು ನಡೆಯಿತು. ಹೈ-ಟೆಕ್ ಆಸ್ಪತ್ರೆಯ ನಿರ್ದೇಶಕ ಡಾ.ಟಿ.ಎಸ್.ರಾವ್ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿಯಲ್ಲಿ ಸಮಾಲೋಚನೆಗಾಗಿ ಲಭ್ಯವಿರುವ ಆನ್ಕೊಲೊಜಿಸ್ಟ್ ಗಳು ಡಾ.ಸುರೇಶ್ ರಾವ್ (ಬುಧವಾರ) ಡಾ.ಸನತ್ ಹೆಗ್ಡೆ(ಸೋಮವಾರ/ಶುಕ್ರವಾರ) ಡಾ.ದಿನೇಶ್ ಶೇಟ್(ಶುಕ್ರವಾರ) ಡಾ.ಹೇಮಂತ್ ಕುಮಾರ್(ಗುರುವಾರ) ಡಾ.ವೆಂಕಟರಾಮನ್ ಕಿಣಿ(ಮಂಗಳವಾರ) ಭೇಟಿ […]

ಅಜೀಮ್ ಪ್ರೇಮ್ ಜೀ ಫೌಂಡೇಶನ್ ನಲ್ಲಿ ಉದ್ಯೋಗಾವಕಾಶಗಳು

  ಹುದ್ದೆ: ಸಂಪನ್ಮೂಲ ವ್ಯಕ್ತಿ ಆಯ್ಕೆಯಾದ ಅಭ್ಯರ್ಥಿಗಳು ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಶಿಕ್ಷಕರೊಂದಿಗೆ ಕಾರ್ಯನಿರ್ವಹಿಸುತ್ತಾ ಅವರ ವೃತ್ತಿಪರತೆಯನ್ನು ಅಭಿವೃದ್ದಿ ಪಡಿಸುವ ಮೂಲಕ ಉನ್ನತ ಸಾಮರ್ಥ್ಯವುಳ್ಳ ಶಿಕ್ಷಕರನ್ನಾಗಿಸಲು ಸಹಾಯಮಾಡುವುದು. ವಿದ್ಯಾರ್ಹತೆ ಮತ್ತು ಅನುಭವ # ಸ್ನಾತಕೋತ್ತರ ಪದವಿ ಮತ್ತು ಕನಿಷ್ಠ ಎರಡು ವರ್ಷ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ ಅಥವಾ ಪದವಿ ಮತ್ತು ಕನಿಷ್ಠ ಐದು ವರ್ಷ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಬೋಧನೆ ಮಾಡಿದ ಅನುಭವ # ಶಿಕ್ಷಣ ಕ್ಷೇತ್ರದಲ್ಲಿ ಕೆಲಸ […]

ದೃಶ್ಯಕಲಾ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ: ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) ಪ್ರಥಮ ವರ್ಷದ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ https://puucms.karnataka.gov.in, https://www.cavamysore.karnataka.gov.in ಸಹಾಯವಾಣಿ 0821-2438931 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕಾಲೇಜಿನ ಶೈಕ್ಷಣಿಕ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗೋ ಹತ್ಯೆ ನಡೆಸುವವರ ವಿರುದ್ದ ಆಸ್ತಿ ಮುಟ್ಟುಗೋಲು ಅಸ್ತ್ರ: ಮಂಗಳೂರಿನಲ್ಲಿ ಪ್ರಥಮ ಪ್ರಯೋಗ

ಮಂಗಳೂರು: ಗೋ ಹತ್ಯೆ ನಡೆಸುವವರ ವಿರುದ್ದ ಆಸ್ತಿ ಮುಟ್ಟುಗೋಲು ಅಸ್ತ್ರ ಪ್ರಯೋಗಕ್ಕೆ ಸಿದ್ದತೆ ನಡೆದಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಥಮವಾಗಿ ಜಾರಿಗೆ ಬರಲಿದೆ. ಮಂಗಳೂರು ಪೊಲೀಸರು ‌ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆ ಶುರು ಮಾಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟ ಪ್ರಕರಣದಲ್ಲಿ ಈ ಪ್ರಕ್ರಿಯೆ ಶುರುವಾಗಿದೆ. ಕಳೆದ ಭಾನುವಾರ ಅರ್ಕುಳದಲ್ಲಿ ಕಸಾಯಿಖಾನೆಗೆ ದಾಳಿ ನಡೆಸಿ 95 ಕೆ.ಜಿ ಗೋ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಖಾಲಿದ್ […]

ಜಪಾನಿನ ಪೂರ್ವ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು: ತಲ್ಲಣಗೊಂಡ ಜಗತ್ತು

ಟೋಕಿಯೋ: ಜಪಾನ್‌ನ ನಾರಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪೈಪ್, ಟೇಪ್, ಮರ ಮತ್ತು ವಿದ್ಯುತ್ ಗುಂಡಿನ ಘಟಕಗಳಿಂದ ತಯಾರಿಸಿದ ಅತ್ಯಂತ ಸುಧಾರಿತ ಕಚ್ಚಾ ಡಬಲ್-ಬ್ಯಾರೆಲ್ ಆಯುಧದಿಂದ ಅಬೆ ಮೇಲೆ ಗುಂಡುಹಾರಿಸಲಾಗಿದೆ ಎನ್ನಲಾಗಿದೆ. ಘಟನೆಯ ನಂತರ 40 ರ ಹರೆಯದ ಯಮಗಾಮಿ ಎಂಬ ಪುರುಷ ಶಂಕಿತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಗುಂಡೇಟು ತಗಲಿರುವ ಅಬೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು ಅವರ ಸ್ಥಿತಿ […]