ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್:ನಾಳೆ ಶಾಲಾ-ಕಾಲೇಜುಗಳಿಗೆ ರಜೆ
ಉಡುಪಿ: ಜಿಲ್ಲೆಯಲ್ಲಿ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 7ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಸರಕಾರಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ.
ಬೆನ್ನು ಮೂಳೆ ಮುರಿತಕ್ಕೆ ಒಳಗಾದವರಿಗೆ ಸೇವಾಧಾಮದ ವತಿಯಿಂದ ಸಹಾಯ: ವಿಜಯ್ ಕೊಡವೂರು
ಉಡುಪಿ: ಸರಕಾರ ಮತ್ತು ಸೇವಾ ಭಾರತೀಯ ಅಂಗ ಸಂಸ್ಥೆಯಾಗಿರುವ ಸೇವಾಧಾಮ ಹೆರ್ಗ ಉಡುಪಿ ಜಿಲ್ಲೆ ಇದರ ವತಿಯಿಂದ ಜಿಲ್ಲೆಯಲ್ಲಿ 80 ರಿಂದ 90 ಜನ ಬೆನ್ನು ಮೂಳೆ ಮುರಿತಕ್ಕೆ ಒಳಗಾದವರನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ಸರಕಾರದ ವತಿಯಿಂದ ಸಿಗುವಂತಹ ಸವಲತ್ತುಗಳು, ಔಷಧಿ ಮತ್ತು ಮೆಡಿಕಲ್ ಕಿಟ್ ಗಳನ್ನು ಪ್ರತಿ ತಿಂಗಳಿಗೊಮ್ಮೆ ಅವರ ಮನೆಗೆ ತೆರಳಿ ನೀಡಿ, ಅವರಿಗೆ ಬೇಕಾಗುವಂತ ಚಿಕಿತ್ಸೆ ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದೆ. ಪ್ರತಿ ತಿಂಗಳು ಆರೋಗ್ಯ ಅಧಿಕಾರಿಯೊಂದಿಗೆ 108 ಆಂಬುಲೆನ್ಸ್ ಮುಖಾಂತರ ಮನೆಗಳಿಗೆ ತೆರಳಿ […]
ಈ ಮೂರು ವಿಧಾನಗಳನ್ನು ಅಳವಡಿಸಿ ವಿಳಂಬ ಪ್ರವೃತ್ತಿ ನಿಲ್ಲಿಸಿ
ವಿಳಂಬ ಪ್ರವೃತ್ತಿಯನ್ನು ನಿಲ್ಲಿಸಲು ಮೂರು ವಿಧಾನಗಳು # ಯೋಜನೆಗಳನ್ನು ಕಾರ್ಯಗತಗೊಳಿಸಬಹುದಾದ ಚಿಕ್ಕ ಕ್ರಿಯೆಗಳಾಗಿ ವಿಭಜಿಸಿಕೊಳ್ಳಿ # ನಿಮ್ಮ ಪ್ರಗತಿಯನ್ನು ಟ್ರ್ಯಾಕ್ ಮಾಡಲು ನೀವು ನಂಬಿಕೆ ಇಟ್ಟಿರುವ ಯಾರನ್ನಾದರೂ ನೇಮಿಸಿಕೊಳ್ಳಿ # ನೀವು ಕಾರ್ಯವನ್ನು ಯಾಕೆ ಪ್ರಾರಂಭಿಸಿದಿರಿ ಮತ್ತು ಎಲ್ಲಿ ಹೋಗಲು ಬಯಸಿದ್ದೀರಿ ಎನ್ನುವುದನ್ನು ಪ್ರತಿದಿನವೂ ನೆನಪಿಸಿಕೊಳ್ಳಿ ಈ ಮೂರು ವಿಧಾನಗಳನ್ನು ಅಳವಡಿಸಿ ವಿಳಂಬ ಪ್ರವೃತ್ತಿಗೆ ಮುಕ್ತಿ ಹಾಡಿ -ತನುಜಾ ಮಾಬೆನ್, ಪ್ರದರ್ಶನ ತರಬೇತುಗಾರ್ತಿ, ಮನಸ್ಸಿನ ತರಬೇತುಗಾರ್ತಿ ಮತ್ತು ಚಿಕಿತ್ಸಕಿ, ಫಾರ್ರೇಡರ್ ಅಕಾಡೆಮಿ ಮಾಹಿತಿಗಾಗಿ ಸಂಪರ್ಕಿಸಿ: ಮುನ್ಸಿಪಲ್ ಕಾಂಪ್ಲೆಕ್ಸ್, […]
ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಕ್ಲಾಸ್ ತೆಗೆದುಕೊಂಡ ಕಮಿಷನರ್ ಶಶಿಕುಮಾರ್
ಮಂಗಳೂರು: ಮಂಗಳೂರಿನ ಪೊಲೀಸ್-ರೌಡಿ ಪರೇಡ್ ನಲ್ಲಿ ಮಂಗಳೂರು ಕಮಿಷನರ್ ಶಶಿಕುಮಾರ್ ಕೊರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಜುಲೈ. 6 ರಂದು ಪೊಲೀಸ್ ಗ್ರೌಂಡ್ ನಲ್ಲಿ ರೌಡಿಗಳಿಗೆ ಮತ್ತು ಗಾಂಜಾ ಕಳಸಾಗಣಿಕೆ ಮಾಡುವವರಿಗೆ ಪರೇಡ್ ನಡೆದಿತ್ತು. ಪರೇಡ್ ನಲ್ಲಿ ಡ್ರಗ್ಸ್ ಪ್ರಕರಣದ ಆರೋಪಿ ಕೋರಿಯೋಗ್ರಾಫರ್ ಕಿಶೋರ್ ಅಮನ್ ಶೆಟ್ಟಿ ಅಂಗಿ ಬಿಚ್ಚಿಸಿ, ಮೈ ಮೆಲಿರುವ ಟ್ಯಾಟೂ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ತನ್ನಮ್ಮನ ಟ್ಯಾಟೂ ಹಾಕಿಸಿಕೊಂಡಿರುವುದಾಗಿ ಅಮನ್ ಉತ್ತರಿಸಿದಾಗ ಮಾಡೋದೆಲ್ಲಾ ಮಾಡಿ ತಾಯಿ ಟ್ಯಾಟೂ ಯಾಕೆ ಹಾಕಿಸಿಕೊಂಡಿದ್ದೀಯಾ, […]
ಉಡುಪಿ, ದ.ಕ ಮತ್ತು ಉ.ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ: ತ್ರಿವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ
ಉಡುಪಿ/ಮಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದ.ಕ ಮತ್ತು ಉ.ಕನ್ನಡದಲ್ಲಿ ಅತ್ಯಾಧಿಕ ಮಳೆ ಬೀಳುವ ಸಂಭವವಿರುವ ನಿಟ್ಟಿನಲ್ಲಿ ತ್ರಿವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ 115.6 ಮೀ.ಮೀ ನಿಂದ 204 ಮಿ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿಯ ಮಂಗಳೂರಿನಿಂದ ಕಾರವಾರದವರೆಗಿನ ವ್ಯಾಪ್ತಿಯಲ್ಲಿ 3.5 – 4.8 ಮೀಟರ್ ಎತ್ತರದ ಅಲೆಗಳನ್ನು ಊಹಿಸಲಾಗಿದೆ. ಪ್ರಸ್ತುತ ವೇಗವು 50 […]