ಪ್ರಾಣವನ್ನೂ ಲೆಕ್ಕಿಸದೆ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿಯ ಹೆಡೆ ಮುರಿ ಕಟ್ಟಿದ ಕೇರಳದ ಸಿಂಘಂ ಬಗ್ಗೆ ವ್ಯಾಪಕ ಮೆಚ್ಚುಗೆ
ತಿರುವನಂತಪುರಂ: ಇಲ್ಲಿನ ಆರೋಪಿಯೊಬ್ಬ ಪೋಲೀಸ್ ಸಬ್ ಇನ್ಸ್‌ಪೆಕ್ಟರ್ ಮೇಲೆ ತಲವಾರಿನಿಂದ ಹಲ್ಲೆ ಮಾಡುತ್ತಿದ್ದು, ಅದನ್ನು ಸಮರ್ಥವಾಗಿ ಎದುರಿಸಿ, ಆರೋಪಿಯನ್ನು ಹೆಡೆಮುರಿ ಕಟ್ಟಿ ಪೊಲೀಸ್ ಜೀಪಿನಲ್ಲಿ ತಳ್ಳುತ್ತಿರುವ ವಿಡಿಯೋ ದೃಶ್ಯವೊಂದು ವೈರಲ್ ಆಗಿದ್ದು, ವಿಡೀಯೋದಲ್ಲಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನ ಸಮಯೋಚಿತ ಕ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಆರೋಪಿ ಮಚ್ಚಿನಿಂದ ಹಲ್ಲೆ ನಡೆಸುತ್ತಿದ್ದರೂ ಪ್ರಾಣವನ್ನೂ ಲೆಕ್ಕಿಸದೆ ಆತನ ಕೈಯಿಂದ ಮಚ್ಚು ಕಸಿದು, ಆತನನ್ನು ಬಂಧಿಸಿದ ಸಬ್ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಕೇರಳ ಸಿಂಘಂ ಆಗಿ ಹೊರಹೊಮ್ಮಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸ್ […]
ಅಂತಾರಾಷ್ಟ್ರೀಯ ದಿನ ರೇಖೆಯಲ್ಲಿ ಭಾರತೀಯ ನೌಕಾ ಪಡೆಯ ಯೋಗ ದಿನಾಚರಣೆ
ನವದೆಹಲಿ: ಭಾರತದ ಪೂರ್ವದಲ್ಲಿ ನಿಯೋಜಿಸಲಾದ ಭಾರತೀಯ ನೌಕಾಪಡೆಯ ಯುದ್ಧನೌಕೆ, ಐ ಎನ್ ಎಸ್ ಸಾತ್ಪುರ, ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿ ಅಂತರಾಷ್ಟ್ರೀಯ ದಿನ ರೇಖೆಯ ಬಳಿ ಕಾರ್ಯನಿರ್ವಹಿಸುತ್ತಿದ್ದು, ಸಮುದ್ರದಲ್ಲಿ ಸಾಮಾನ್ಯ ಯೋಗ ಶಿಷ್ಟಾಚಾರವನ್ನು ನಡೆಸುವ ಮೂಲಕ ಭಾರತೀಯ ನೌಕಾಪಡೆಯ ಯೋಗ ಚಟುವಟಿಕೆಗಳ ಅಂತರರಾಷ್ಟ್ರೀಯ ದಿನವನ್ನು ಪ್ರಾರಂಭಿಸಿತು.
ಕೈಗಾರಿಕಾ ಕ್ಷೇತ್ರದಲ್ಲಿ ದೇಶ ಹಿಂದೆಂದೂ ಕಾಣದ ಪ್ರಗತಿಯನ್ನು ಸಾಧಿಸಿದೆ: ಲಾಲಾಜಿ ಆರ್ ಮೆಂಡನ್
ಉಡುಪಿ: ದೇಶದಲ್ಲಿ ಈ ಹಿಂದೆ ಶೇ. 70 ರಷ್ಟು ಯುದ್ಧ ಸಾಮಾಗ್ರಿಗಳ ಬಿಡಿ ಭಾಗಗಳನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ಸೇನಾ ಸಾಮಾಗ್ರಿಗಳು ಹಾಗೂ ಇತರ ಕೈಗಾರಿಕಾ ಬಿಡಿ ಭಾಗಗಳನ್ನು ಭಾರತೀಯ ಕೈಗಾರಿಕಾ ಸಂಸ್ಥೆಗಳೇ ತಯಾರಿಸುತ್ತಿರುವುದು ಕೈಗಾರಿಕಾ ಕ್ಷೇತ್ರದಲ್ಲಿ ದೇಶವು ಪ್ರಗತಿಯತ್ತ ಸಾಗುತ್ತಿರುವುದನ್ನು ತಿಳಿಸುತ್ತಿದೆ ಎಂದು ಶಾಸಕ ಲಾಲಾಜಿ ಆರ್ ಮೆಂಡನ್ ಹೇಳಿದರು. ಅವರು ಸೋಮವಾರ ತಂತ್ರಜ್ಞಾನ ಕೇಂದ್ರಗಳಾಗಿ ಉನ್ನತೀಕರಿಸಿರುವ 150 ಐ.ಟಿ.ಐ ಗಳ ಲೋಕಾರ್ಪಣೆ ಯೋಜನೆಯನ್ನು ಉದ್ಘಾಟಿಸಿದ ಪ್ರಧಾನ ಮಂತ್ರಿ ನರೇಂದ್ರ […]