ಜ್ಞಾನಸುಧಾ ಕಾಲೇಜಿನಲ್ಲಿ ಮಾಸಿಕ ಮೌಲಿಕ ಸರಣಿ ‘ಮೌಲ್ಯಸುಧಾ’ ಉಪನ್ಯಾಸ ಕಾರ್ಯಕ್ರಮ ಉದ್ಘಾಟನೆ

ಗಣಿತ ನಗರ: ಇಡೀ ವಿಶ್ವವೇ ಭಾರತದ ಕಡೆ ತಿರುಗುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ. ಬದುಕಿದ್ದು ಮೂವತ್ತೊಂಬತ್ತು ವರ್ಷವಾದರೂ, ಅವರು ಮನುಕುಲಕ್ಕೆ ನೀಡಿದ ಸಂದೇಶ ಸಾರ್ವಕಾಲಿಕವಾದುದು ಎಂದು ಶ್ರೀ ಮುನಿರಾಜ ರೆಂಜಾಳ ಹೇಳಿದರು. ಅವರು ಗಣಿತ ನಗರದ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್‌ಎಜ್ಯುಕೇಶನ್‌ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾದ ಮಾಸಿಕ ಕಾರ್ಯಕ್ರಮ ಸರಣಿ ಮಾಲಿಕೆ ‘ಮೌಲ್ಯ ಸುಧಾ’ವನ್ನು ಉದ್ಘಾಟಿಸಿ, ‘ಸ್ವಾಮಿ ವಿವೇಕಾನಂದರ ಜೀವನಾದರ್ಶಗಳು’ಎಂಬ ವಿಷಯದ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು. ರಾಷ್ಟ್ರಪಿತ ಗಾಂಧೀಜಿ ಕೂಡಾ ಸ್ವಾಮಿ […]

ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗದಿನಾಚರಣೆ

ಕಾರ್ಕಳ: ಹಿರ್ಗಾನದಲ್ಲಿರುವ ಕ್ರಿಯೇಟಿವ್ ಪ.ಪೂ .ಕಾಲೇಜಿನಲ್ಲಿ ‘ಆರೋಗ್ಯಕ್ಕಾಗಿ ಯೋಗ’ ಎಂಬ ಘೋಷವಾಕ್ಯದಡಿಯಲ್ಲಿ ವಿಶ್ವ ಯೋಗದಿನವನ್ನು ಆಚರಿಸಲಾಯಿತು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ರಾಘವೇಂದ್ರ ರಾವ್ ಮಾತನಾಡಿ ಯೋಗ ಮತ್ತು ವ್ಯಾಯಾಮ ಮಾಡುವುದರಿಂದ ದೈಹಿಕ ದೃಢತೆ ಮತ್ತು ಮಾನಸಿಕ ಏಕಾಗ್ರತೆ ಗಳಿಸಲು ಸಾಧ್ಯ. ಪ್ರತಿದಿನ ಯೋಗಾಭ್ಯಾಸ ಮಾಡಿದಾಗ ಆರೋಗ್ಯವಂತ ಜೀವನ ನಡೆಸಬಹುದು ಎಂದರು. ವಿದ್ಯಾ ಸಂಸ್ಥೆಯ ಉಪನ್ಯಾಸಕ ಡಾ.ಆದಂ ಶೇಕ್, ರಾಜೇಶ್ ಶೆಟ್ಟಿ, ಶಿವಕುಮಾರ್ ಉಪಸ್ಥಿತರಿದ್ದರು. ಸಂಸ್ಥೆಯ ಸುಮಾರು 425 ವಿದ್ಯಾರ್ಥಿಗಳು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಮಾ. ಸುಚಾಂಕ್ಷ್ ಯೋಗಾಸನ […]

ಯಶ್ಪಾಲ್ ಸುವರ್ಣಗೆ ಜೀವ ಬೆದರಿಕೆ ಪ್ರಕರಣ: ಅಪರಾಧಿಯನ್ನು ಬಂಧಿಸಿದ ಠಾಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ಬಿಜೆಪಿ ಯುವಮೋರ್ಚಾ

ಕಾಪು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವಬೆದರಿಕೆ ಒಡ್ಡಿದ ಆರೋಪಿಯನ್ನು ಬಂಧಿಸುವಂತೆ ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಕಾಪು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಮಂಡಲದ ವತಿಯಿಂದ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರವಾಗಿ ಆರೋಪಿಯನ್ನು ಬಂಧಿಸುವ ಮೂಲಕ ತಮ್ಮ ಕರ್ತವ್ಯ ಪ್ರಜ್ಞೆಯನ್ನು ತೋರ್ಪಡಿಸಿದ ಕಾಪು ವೃತ್ತ ನೀರಿಕ್ಷಕ ಹಾಗೂ ಠಾಣಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.

ಅಗ್ನಿಪಥ್ ನೇಮಕಾತಿ: ಜೂನ್ 24 ರಿಂದ ಭಾರತೀಯ ವಾಯುಪಡೆಯ ನೋಂದಣಿ ಪ್ರಕ್ರಿಯೆ ಆರಂಭ

ನವದೆಹಲಿ: ಭಾರತೀಯ ವಾಯುಪಡೆಯ ಅಗ್ನಿಪಥ್ ನೇಮಕಾತಿ ಯೋಜನೆಗೆ ನೋಂದಣಿಯು ಜೂನ್ 24 ರಿಂದ ಪ್ರಾರಂಭವಾಗಿ ಜುಲೈ 5ಕ್ಕೆ ಕೊನೆಗೊಳ್ಳಲಿದೆ. ಆನ್‌ಲೈನ್ ಪರೀಕ್ಷೆಯು ಜುಲೈ 24ರಂದು ಪ್ರಾರಂಭವಾಗಲಿದೆ. ಹೆಚ್ಚಿನ ವಿವರಗಳಿಗಾಗಿ ಆಕಾಂಕ್ಷಿಗಳು careerindianairforce.cdac.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅರ್ಹತೆ: 17.5 ವರ್ಷದಿಂದ 21 ವರ್ಷ ವಯಸ್ಸಿನ ಅಭ್ಯರ್ಥಿಗಳು ನೋಂದಣಿ ಮಾಡಬಹುದು. ಈ ವರ್ಷಕ್ಕೆ ವಯಸ್ಸಿನ ಮಿತಿಯನ್ನು 23 ವರ್ಷಗಳಿಗೆ ಏರಿಸಲಾಗಿದೆ. ಹೆಚ್ಚುವರಿ ಶೈಕ್ಷಣಿಕ ಅರ್ಹತೆಗಳು ಮತ್ತು ದೈಹಿಕ ಮಾನದಂಡಗಳು ಇದ್ದಲ್ಲಿ ಭಾರತೀಯ ವಾಯುಪಡೆಯು ಸೂಚಿಸಲಿದೆ. ಅಗ್ನಿವೀರ್‌ ಅಭ್ಯರ್ಥಿಗಳು […]

ಪಾಳೆಕಟ್ಟೆ ಪರಿಸರದಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ವತಿಯಿಂದ ಶ್ರಮದಾನ

ಉಡುಪಿ: ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಸಹಯೋಗದೊಂದಿಗೆ 143 ನೆಯ ಶ್ರಮದಾನ ಪಾಳೆಕಟ್ಟೆ ಪರಿಸರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ನಗರಸಭಾ ಸಧಸ್ಯ ಕೆ ವಿಜಯ್ ಕೊಡವೂರು, ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಜಯ ಸಾಲ್ಯಾನ್, ಗೌರವಾಧ್ಯಕ್ಷ ಮಾಧವ ಕರ್ಕೇರ,ಕೋಶಧಿಕಾರಿ ವಾದಿರಾಜ್ ಕಾಂಚನ್, ಮಹೇಶ್ ಕರ್ಕೇರ, ವಿಕಾಸ್ ಜೆ ಸಾಲ್ಯಾನ್, ಪ್ರವೀಣ್, ಮಾಲತಿ, ಸುದರ್ಶನ್, ಪುಟಾಣಿಗಳಾದ ಚಿಂಟು, ಕೌಶಿಕ್ ಉಪಸ್ಥಿತರಿದ್ದರು.