ಕೋವಿಡ್ -19 ಮೂಗಿನ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪೂರ್ಣ: ಭಾರತ್ ಬಯೋಟೆಕ್

ನವದೆಹಲಿ: ಕೋವಿಡ್ -19 ಕ್ಕಾಗಿ ಮೂಗಿನ ನಾಳದ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳು ಪೂರ್ಣಗೊಂಡಿವೆ ಮತ್ತು ಕಂಪನಿಯು ಮುಂದಿನ ತಿಂಗಳು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ತನ್ನ ಡೇಟಾವನ್ನು ಸಲ್ಲಿಸಲಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ಶನಿವಾರ ತಿಳಿಸಿದೆ. ಭಾರತ್ ಬಯೋಟೆಕ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಕೃಷ್ಣ ಎಲಾ ಮಾತನಾಡಿ, “ನಾವು ಕ್ಲಿನಿಕಲ್ ಪ್ರಯೋಗವನ್ನು ಪೂರ್ಣಗೊಳಿಸಿದ್ದೇವೆ, ಡೇಟಾ ವಿಶ್ಲೇಷಣೆ ನಡೆಯುತ್ತಿದೆ. ಮುಂದಿನ ತಿಂಗಳು, ನಾವು ನಿಯಂತ್ರಕ ಏಜೆನ್ಸಿಗೆ ಡೇಟಾವನ್ನು ಸಲ್ಲಿಸುತ್ತೇವೆ. […]

ಕಾರ್ಕಳ: ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಉಡುಪಿ: ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಉಡುಪಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಜೂನ್ 21 ರಂದು ಬೆಳಗ್ಗೆ 6.45 ಕ್ಕೆ ಕಾರ್ಕಳ ದಾನಶಾಲೆಯ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ […]

ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿದ ಪ್ರಕರಣ: ಆರೋಪಿಗಳಿಗೆ 2 ವರ್ಷ ಕಾರಾಗೃಹ, 10000 ರೂ. ದಂಡ

ಉಡುಪಿ: ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿದ ಆರೋಪಿಗಳಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2015 ಜೂನ್ 24 ರಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ವಾರಂಬಳ್ಳಿಯ ಶಂಕರ್ ಪೂಜಾರಿ ಬಿ.ಎಸ್, ಕುಕ್ಕೆಹಳ್ಳಿಯ ಸುನೀಲ್ ಶೆಟ್ಟಿ, ಹೇರೂರು ಗ್ರಾಮದ ರಿತೇಶ್ ಕುಂದರ್, ಪೆರ್ಡೂರಿನ ಸುರೇಶ್ ಶೆಟ್ಟಿ ಹಾಗೂ ಹಾವಂಜೆಯ ಅಜಿತ್ ಶೆಟ್ಟಿ ಇವರುಗಳು ಉಡುಪಿ ತಾಲೂಕು ಹೇರೂರು ಗ್ರಾಮದ ನಿವಾಸಿ ರಾಮದಾಸ್ ಹೆಗ್ಡೆ […]

ರಾ.ಹೆ-169 ರಸ್ತೆ ಕಾಮಗಾರಿಗೆ ಅಡಚಣೆಯಾಗುವ ಮರಗಳ ತೆರವು: ಜೂನ್ 30 ರಂದು ಸಾರ್ವಜನಿಕ ಅಹವಾಲು ಸಭೆ

ಉಡುಪಿ: ಸಾಣೂರು ಜಂಕ್ಷನ್‌ನಿಂದ ಬಿರ್ಕನಕಟ್ಟೆ ರಸ್ತೆ ಅಭಿವೃದ್ಧಿ ರಾ.ಹೆ-169 ಅಡಿಯಲ್ಲಿ ಬರುವ ರಸ್ತೆ ಕಾಮಗಾರಿಗೆ ಅಡಚಣೆಯಾಗಿರುವ ಮೂಡಬಿದ್ರೆ ವಲಯ ವ್ಯಾಪ್ತಿಗೆ ಒಳಪಡುವ ಸಾಣೂರು ಗ್ರಾಮದ ಸರಕಾರಿ ಸ್ಥಳದಲ್ಲಿರುವ 537 ಮರಗಳನ್ನು ಹಾಗೂ ಕಾರ್ಕಳ ವ್ಯಾಪ್ತಿಗೆ ಒಳಪಡುವ ಪುಲ್ಕೇರಿ ಜಂಕ್ಷನ್‌ನಿಂದ ಸಾಣೂರುವರೆಗೆ ಸರಕಾರಿ ಸ್ಥಳದಲ್ಲಿರುವ 341 ಮರಗಳನ್ನು ಗುರುತಿಸಲಾಗಿದ್ದು, ಸದ್ರಿ ಮರಗಳಲ್ಲಿ ಕಾಮಗಾರಿಗೆ ಅಡಚಣೆಯಾದ ಮರಗಳನ್ನು ತೆರವುಗೊಳಿಸುವ ಕುರಿತು ಜೂನ್ 30 ರಂದು ಮಧ್ಯಾಹ್ನ 3 ಗಂಟೆಗೆ ಮೂಡಬಿದ್ರೆ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಏರ್ಪಡಿಸಲಾಗಿದೆ. […]

ವಿದ್ಯಾ ಟ್ಯುಟೋರಿಯಲ್ ಕಾಲೇಜು: ವಿದ್ಯಾರ್ಥಿನಿ ಆಫಿಯ 600 ರಲ್ಲಿ 570 ಅಂಕ ಗಳಿಸಿ ದಾಖಲೆ

ಉಡುಪಿ:  ವಿದ್ಯಾ ಟ್ಯುಟೋರಿಯಲ್ ಕಾಲೇಜು ಇಲ್ಲಿನ ವಿದ್ಯಾರ್ಥಿನಿ ಆಫಿಯ ದ್ವಿತೀಯ ಪಿಯುಸಿ ಯಲ್ಲಿ 600 ರಲ್ಲಿ 570 ಅಂಕವನ್ನು ಗಳಿಸಿ ಖಾಸಗಿ ವಿಭಾಗದಲ್ಲಿ ರಾಜ್ಯ ದಾಖಲೆಯನ್ನು ಮಾಡಿರುತ್ತಾರೆ.