ದೀರ್ಘಕಾಲದ ತಲೆ ನೋವು: ಕೆದೂರಿನಲ್ಲಿ ಗೇರು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ

ಕುಂದಾಪುರ: ದೀರ್ಘಕಾಲದ ತಲೆ ನೋವಿನಿಂದ ಬಳಲುತ್ತಿದ್ದ ಯುವಕನೋರ್ವ ಗೇರುಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಮೂಡುಕೆದೂರು ಎಂಬಲ್ಲಿ ಜೂ.17 ರಂದು ಮಧ್ಯಾಹ್ನ ನಡೆದಿದೆ. ಕೆದೂರು ನಿವಾಸಿ 34ವರ್ಷದ ಪ್ರವೀಣ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ.‌ ಈತ ಕುಂದಾಪುರದ ಅರವಿಂದ ಮೋಟಾರ್ಸ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಕಳೆದ 10 ತಿಂಗಳಿನಿಂದ ತಲೆ ನೋವಿನಿಂದ ಬಳಲುತ್ತಿದ್ದನು. ತಲೆ ನೋವಿನಿಂದಾಗಿ ರಾತ್ರಿ ನಿದ್ದೆ ಮಾಡುತ್ತಿರಲಿಲ್ಲ ಹಾಗೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದನು ಎನ್ನಲಾಗಿದೆ. ಇದೇ ಕಾರಣದಿಂದ […]

ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ ನಲ್ಲಿ10% ಖಾಲಿ ಹುದ್ದೆಗಳನ್ನು ಅಗ್ನಿವೀರರಿಗೆ ಕಾಯ್ದಿರಿಸಲಾಗುವುದು: ಅಮಿತ್ ಶಾ

ನವದೆಹಲಿ: ಅಗ್ನಿಪಥ್ ಯೋಜನೆಯಡಿಯಲ್ಲಿ ಭಾರತೀಯ ಸೇನೆಯಲ್ಲಿ ನಾಲ್ಕು ವರ್ಷಗಳ ಅಗ್ನಿವೀರ್ ಸೇವೆ ಸಲ್ಲಿಸಿ ವಾಪಾಸಾಗುವವರ ಉದ್ಯೋಗ ಭದ್ರತೆಯ ದೃಷ್ಟಿಯಿಂದ ಸಿಎಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ ನೇಮಕಾತಿಯಲ್ಲಿ 10% ಖಾಲಿ ಹುದ್ದೆಗಳನ್ನು ಕಾಯ್ದಿರಿಸಲು ಕೇಂದ್ರ ಗೃಹ ಸಚಿವಾಲಯವು ನಿರ್ಧರಿಸಿದೆ. ಈ ಎರಡು ಪಡೆಗಳಲ್ಲಿನ ನೇಮಕಾತಿಗಾಗಿ ಅಗ್ನಿವೀರ್‌ಗಳ ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅಗ್ನಿವೀರ್‌ನ ಮೊದಲನೆ ಬ್ಯಾಚ್‌ಗೆ, ಗರಿಷ್ಠ ವಯಸ್ಸಿನ ಮಿತಿಯನ್ನು ಮೀರಿ 5 ವರ್ಷಗಳವರೆಗೆ ವಯಸ್ಸಿನ ಸಡಿಲಿಕೆ ಇರುತ್ತದೆ ಎಂದು ಕೇಂದ್ರ […]

ತಾಯಿಯ 100ನೇ ವರ್ಷದ ಹುಟ್ಟು ಹಬ್ಬದಂದು ಪ್ರಧಾನಿ ಮೋದಿಯಿಂದ ಪಾದಪೂಜೆ

ಗಾಂಧಿನಗರ: ಜೂನ್ 18 ರಂದು ತಾಯಿ ಹೀರಾ ಬಾ 100 ನೇ ವರ್ಷದ ಹುಟ್ಟುಹಬ್ಬದಂದು ತನ್ನ ತಾಯಿಯನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ತಾಯಿಯ ಪಾದಪೂಜೆ ನಡೆಸಿ ಅವರ ಆಶೀರ್ವಾದ ಪಡೆದುಕೊಂಡರು. ಮೋದಿ ಶನಿವಾರದಂದು ಬೆಳ್ಳಂಬೆಳಗ್ಗೆ ಗುಜರಾತಿನಲ್ಲಿರುವ ತಮ್ಮ ತಾಯಿಯ ಮನೆಗೆ ಭೇಟಿ ನೀಡಿ ಅವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ, ಆಶೀರ್ವಾದ ಪಡೆದುಕೊಂಡರು. “ನನ್ನ ತಾಯಿ ಎಷ್ಟು ಸರಳವಾಗಿದ್ದಾಳೆಯೋ ಅಷ್ಟೇ ಅಸಾಧಾರಣವಾಗಿದ್ದಾಳೆ. ಎಲ್ಲಾ ತಾಯಂದಿರಂತೆಯೆ…ಅಮ್ಮ ಎನ್ನುವುದು ಬರೀ ಶಬ್ದವಲ್ಲ, ಇದರಲ್ಲಿ ಪ್ರೀತಿ, ತಾಳ್ಮೆ, ನಂಬಿಕೆ ಎಷ್ಟೊಂದೆಲ್ಲಾ […]

ಇಂದು ಸಂಜೆ ಪುರಭವನದಲ್ಲಿ ‘ಜಾನಪದ ಉತ್ಸವ 2022’ ಕಾರ್ಯಕ್ರಮ

ಉಡುಪಿ: ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ಜಿಲ್ಲಾ ಘಟಕ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಾಡಿನ ಜಾನಪದ ಕಲೆ ಮತ್ತು ಸಂಸ್ಕೃತಿಗಳನ್ನು ಅನಾವರಣಗೊಳಿಸುವ ‘ಜಾನಪದ ಉತ್ಸವ 2022’ ಕಾರ್ಯಕ್ರಮ ಶನಿವಾರ, ಜೂನ್ 18 ರಂದು ಸಂಜೆ 3:30 ರಿಂದ 1 ಗಂಟೆವರೆಗೆ ಅಜ್ಜರಕಾಡಿನ ಪುರಭವನದಲ್ಲಿ ಜರುಗಲಿದೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ಜಾನಪದ ಪ್ರಶಸ್ತಿ ಪ್ರದಾನ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಉಡುಪಿ ಮತ್ತು ಬ್ರಹ್ಮಾವರ ತಾಲೂಕು ಘಟಕಗಳ ಪದಗ್ರಹಣ ಮತ್ತು ಶ್ರೀಮತಿ […]