‘ಪುಷ್ಪ 2’ ಚಿತ್ರದ ಚಿತ್ರಕಥೆ ಬರೆಯಲು ಆರಂಭ: ಆಗಸ್ಟ್ ನಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜು!
ಹೈದರಾಬಾದ್: ಅಲ್ಲು ಅರ್ಜುನ್, ಫಹಾದ್ ಫಾಸಿಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪುಷ್ಪ: ದಿ ರೈಸ್’ ಚಿತ್ರದ ಯಶಸ್ಸಿನ ನಂತರ, ಎಲ್ಲರ ಕಣ್ಣುಗಳು ಈಗ ಅದರ ಭಾಗ ಎರಡರ ಮೇಲೆ ನೆಟ್ಟಿದೆ. ಮೂಲಗಳ ಪ್ರಕಾರ ‘ಪುಷ್ಪಾ: ದಿ ರೂಲ್’ನ ಚಿತ್ರಕಥೆ ಇನ್ನೂ ಬರವಣಿಗೆಯ ಹಂತದಲ್ಲಿದೆ. ಸುಕುಮಾರ್ ಮತ್ತು ಅವರ ಸಿಬ್ಬಂದಿ ಆಗಸ್ಟ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದ್ದಾರೆ. ಕಥಾ ಲೇಖಕ ಸುಕುಮಾರ್ ಆರೋಗ್ಯ ಸ್ಥಿತಿಯ ಕಾರಣದಿಂದಾಗಿ ಚಿತ್ರ ಕಥೆ ಬರೆಯಲು ಸಾಕಷ್ಟು ಸಮಯ ತೆಗೆದುಕೊಂಡಿರುವುದರಿಂದಾಗಿ ಚಿತ್ರೀಕರಣ ಪ್ರಾರಂಭಿಸುವ […]
ಜೂನ್ 18 ರಂದು ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ
ಉಡುಪಿ: ಎಸ್.ಬಿ.ಐ ಲೈಫ್ ಇನ್ಸೂರೆನ್ಸ್ ಪ್ರೈ.ಲಿ, ಬಾಳಿಗ ಫಿಶ್‌ನೆಟ್ ಪ್ರೈ.ಲಿ, ಪ್ರಕಾಶ ರಿಟೈಲ್ ಪ್ರೈ.ಲಿ ಮತ್ತು ಮೆಡ್ ಪ್ಲಸ್ ಪ್ರೈ.ಲಿ ಕಂಪನಿಗಳ ವತಿಯಿಂದ ಜೂನ್ 18 ರಂದು ಬೆಳಗ್ಗೆ 10.30 ರಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿರುತ್ತದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಬಿ.ಸಿ.ಎ, ಬಿ.ಸಿ.ಎಸ್, ಎಮ್.ಸಿ.ಎ, ಬಿ.ಕಾಂ ಬಿ.ಎಸ್ಸಿ, ಎಮ್.ಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಡಿಪ್ಲೋಮಾ ಇನ್ ಮೆಕ್ಯಾನಿಕಲ್, ಬಿ.ಇ ಇಂಜಿನಿಯರಿಂಗ್, ಡಿ.ಫಾರ್ಮ ಮತ್ತು ಬಿ.ಫಾರ್ಮ […]
ಭಾರತ್ ಗೌರವ್ ಯೋಜನೆ: ಕೊಯಮತ್ತೂರಿನಿಂದ ಶಿರಡಿಗೆ ಪ್ರಯಾಣ ಬೆಳೆಸಿದೆ ದೇಶದ ಮೊದಲನೆ ಖಾಸಗಿ ರೈಲು
ನವದೆಹಲಿ: ಭಾರತೀಯ ರೈಲ್ವೆಯ ದಕ್ಷಿಣ ರೈಲ್ವೇ ವಲಯವು ತಮಿಳುನಾಡಿನ ಕೊಯಮತ್ತೂರಿನಿಂದ ಮಹಾರಾಷ್ಟ್ರದ ಶಿರಡಿಗೆ ಖಾಸಗಿಯಾಗಿ ನಡೆಸುವ ‘ಭಾರತ್ ಗೌರವ್’ ರೈಲುಗಳ ಮೊದಲ ಸೇವೆಯನ್ನು ಪ್ರಾರಂಭಿಸಿತು. ಭಾರತ್ ಗೌರವ್ ರೈಲು ಕೊಯಮತ್ತೂರು ಉತ್ತರದಿಂದ 14 ಜೂನ್ ಸಂಜೆ 6 ಗಂಟೆಗೆ ಹೊರಟು ಜೂನ್ 16 ರಂದು ಬೆಳಗ್ಗೆ 07:25 ಗಂಟೆಗೆ ಸಾಯಿನಗರ ಶಿರಡಿಯನ್ನು ತಲುಪುತ್ತದೆ. ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿಯಲ್ಲಿ ರೈಲು ನಿಲುಗಡೆಯಾಗಲಿದೆ ಎಂದು ರೈಲ್ವೆ ಸಚಿವಾಲಯವು ಮಂಗಳವಾರ ತಿಳಿಸಿದೆ. ಮಂಗಳವಾರ […]
ಕಾಪು ವ್ಯಾಪ್ತಿ ಪ್ರದೇಶದಲ್ಲಿ ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ: 26 ಪ್ರಕರಣ ದಾಖಲು
ಉಡುಪಿ: ಜಿಲ್ಲೆಯಲ್ಲಿ ಕೋಟ್ಪಾ ಕಾಯಿದೆಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಕಾಪು ವ್ಯಾಪ್ತಿ ಪ್ರದೇಶಗಳ ತಂಬಾಕು ಮಾರಾಟದ ಅಂಗಡಿ, ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ, ಸೆಕ್ಷನ್ 4 ಅಡಿಯಲ್ಲಿ 14 ಹಾಗೂ ಸೆಕ್ಷನ್ 6(ಎ) ಅಡಿಯಲ್ಲಿ 12 ಪ್ರಕರಣ ಸೇರಿದಂತೆ ಒಟ್ಟು 26 ಪ್ರಕರಣ ದಾಖಲಿಸಿ, ಹೋಟೆಲ್ ಮತ್ತು ಅಂಗಡಿಗಳಲ್ಲಿ ಆಹಾರ ಪರವಾನಿಗೆಯನ್ನು ಪರಿಶೀಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ […]
ಉನ್ನತಿ ಕೆರಿಯರ್ ಅಕಾಡೆಮಿಗೆ ಉಡುಪಿ ಜಿಲ್ಲಾಧಿಕಾರಿ ಭೇಟಿ
ಉಡುಪಿ: ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ ಬುಧವಾರದಂದು ಭೇಟಿ ನೀಡಿ ಅಲ್ಲಿನ ಕೌಶಲ್ಯ ಅಭಿವೃದ್ಧಿ ಕೇಂದ್ರದ ಮೂಲಭೂತ ಸೌಕರ್ಯಗಳು ಹಾಗೂ ತರಬೇತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ತರಬೇತುದಾರ ನವೀನ್ ನಾಯಕ್ ಉಪಸ್ಥಿತರಿದ್ದರು.