ಹಿರಿಯಡ್ಕ: ಕ್ಲಿನಿಕ್ಗೆಂದು ತೆರಳಿದ ವ್ಯಕ್ತಿ ನಾಪತ್ತೆ
ಉಡುಪಿ: ಹಿರಿಯಡ್ಕ ಬೊಮ್ಮರಬೆಟ್ಟು ಗ್ರಾಮದ ಕೋಟ್ನಕಟ್ಟೆ ನಿವಾಸಿ ಬಿ. ಪ್ರಕಾಶ್ ಪೈ (67) ಎಂಬ ವ್ಯಕ್ತಿಯು ಜೂನ್ 13 ರಂದು ಬೆಳಗ್ಗೆ 11.30 ರ ಸುಮಾರಿಗೆ ನಗರದ ಸರ್ವೀಸ್ ಬಸ್ ನಿಲ್ದಾಣದ ಬಳಿ ಇರುವ ಕ್ಲಿನಿಕ್ಗೆ ಚಿಕಿತ್ಸೆಗೆಂದು ತೆರಳಿದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 10 ಇಂಚು ಎತ್ತರ, ಗೋಧಿ ಮೈಬಣ್ಣ, ದೃಢಕಾಯ ಮೈಕಟ್ಟು ಹೊಂದಿದ್ದು, ಕನ್ನಡ, ತುಳು ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು […]
5 ಕೋಟಿ ಯೂನಿಟ್ಗಳಷ್ಟು ರಕ್ತದ ಅವಶ್ಯಕತೆ ಇರುವ ಭಾರತದಲ್ಲಿ ಪೂರೈಕೆಯಾಗುವುದು 50% ಮಾತ್ರ
ಆರೋಗ್ಯ ಸೇವೆಯಲ್ಲಿ ರಕ್ತ ವರ್ಗಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ನಿರ್ದಿಷ್ಟವಾಗಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ತದ ಕೊರತೆ ಕಾಡುತ್ತದೆ. ಭಾರತಕ್ಕೆ ಹಲವಾರು ವೈದ್ಯಕೀಯ ಅಸ್ವಸ್ಥತೆಗಳ ಚಿಕಿತ್ಸೆಗಾಗಿ ಸುಮಾರು 5 ಕೋಟಿ ಯೂನಿಟ್ಗಳಷ್ಟು ರಕ್ತದ ಬೃಹತ್ ಅವಶ್ಯಕತೆ ಇರುತ್ತದೆ. ಪೂರೈಕೆ ಮತ್ತು ಬೇಡಿಕೆಗಳ ನಡುವಿನ ಅಂತರ ಬಹುತೇಕ ಅರ್ಧದಷ್ಟು ಇದೆ. ವಾಸ್ತವವಾಗಿ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ದೇಶದ ಯಾವುದೋ ಒಂದು ಸ್ಥಳದಲ್ಲಿ ರಕ್ತ ವರ್ಗಾವಣೆಯ ಅವಶ್ಯಕತೆ ಇರುತ್ತದೆ. ಅಂದರೆ ಪ್ರತಿ ದಿನ 35,000ಕ್ಕೂ ಹೆಚ್ಚಿನ ರಕ್ತದಾನಗಳ ಅಗತ್ಯವಿರುತ್ತದೆ ಎಂದು […]
ಕ್ರಿಯೇಟಿವ್ ಕಾಲೇಜಿನ ಮತ್ತೊಂದು ಹೊಸ ಹೆಜ್ಜೆ: ಉಡುಪಿಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಕಾಲೇಜು ಪ್ರಾರಂಭ
ಗುಣಮಟ್ಟದ ಶಿಕ್ಷಣ, ಹೈಟೆಕ್ ಸೌಲಭ್ಯದ ಸಂಸ್ಥೆ , ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಶಿಕ್ಷಣ, ತರಬೇತಿ ನೀಡುವ ಕರಾವಳಿಯ ಅತೀ ಹೆಚ್ಚು ಬೇಡಿಕೆಯ ಕಾಲೇಜು ಕರಾವಳಿ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿ. ಹತ್ತಾರು ಕಾಲೇಜುಗಳು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿ ಹೊಸ ಬದುಕನ್ನು ನೀಡಿವೆ. ಅಂತಹ ಶಿಕ್ಷಣ ಸಂಸ್ಥೆಗಳ ಸಾಲಿಗೆ ಇದೀಗ ಕಾರ್ಕಳದ ಕ್ರಿಯೇಟಿವ್ ಕಾಲೇಜು ಸೇರಿದೆ. ಕರಾವಳಿಯ ಬಹುತೇಕ ಟಾಪ್ ಕಾಲೇಜುಗಳಲ್ಲಿ ಹತ್ತಾರು ವರ್ಷ ಬೋಧನೆ ಮಾಡಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಉತ್ಸಾಹಿ, ನಾವಿನ್ಯತೆಯ ಅತ್ಯುತ್ತಮ […]
ಕಾಪು ಪ್ರಥಮ ದರ್ಜೆ ಕಾಲೇಜು: ವಿದ್ಯಾರ್ಥಿನಿಯರಿಗೆ ಸಾಫ್ಟ್ ಸ್ಕಿಲ್ಸ್ ಕುರಿತ ತರಬೇತಿ ಕಾರ್ಯಗಾರ
ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಇದರ ವತಿಯಿಂದ ನಾಂದಿ ಫೌಂಡೇಶನ್ ಮತ್ತು ಮಹೀಂದ್ರ ಫ್ರೆಂಡ್ ಕ್ಲಾಸ್ ರೂಮ್ ಇವರ ಸಹಯೋಗದೊಂದಿಗೆ ಕಾಪುವಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ನಡೆದ ಸಾಫ್ಟ್ ಸ್ಕಿಲ್ಸ್ ಕುರಿತ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಜಗದೀಶ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಬಿ, ಜಿಲ್ಲಾ ಸಲಹೆಗಾರ್ತಿ ಸಂಧ್ಯಾರಾಣಿ,ನಾಂದಿ ಫೌಂಡೇಶನ್ ತರಬೇತುದಾರ ಚಿನ್ನೀ ಅಜಯ್, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
‘ಮಿಷನ್ ಮೋಡ್’ನಲ್ಲಿ ಮೋದಿ ಸರ್ಕಾರ: 18 ತಿಂಗಳಲ್ಲಿ 10 ಲಕ್ಷ ಜನರ ನೇಮಕಾತಿಗೆ ಆದೇಶ ನೀಡಿದ ಪ್ರಧಾನಿ ಮೋದಿ
ನವದೆಹಲಿ: ಮುಂದಿನ 18 ತಿಂಗಳಲ್ಲಿ 10 ಲಕ್ಷ ಜನರನ್ನು “ಮಿಷನ್ ಮೋಡ್” ನಲ್ಲಿ ನೇಮಕ ಮಾಡಿಕೊಳ್ಳಲು ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳನ್ನು ಪ್ರಧಾನಿ ನರೇಂದ್ರ ಮೋದಿ ಕೇಳಿಕೊಂಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಮಂಗಳವಾರ ತಿಳಿಸಿದೆ. ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲಗಳ ಸ್ಥಿತಿಗತಿಯನ್ನು ಪರಿಶೀಲಿಸಿದ ನಂತರ ಪ್ರಧಾನಿಯಿಂದ ಈ ನಿರ್ದೇಶನ ಬಂದಿದೆ ಎಂದು ಪಿಎಂಒ ತಿಳಿಸಿದೆ. “ಪಿಎಂ ನರೇಂದ್ರ ಮೋದಿಯವರು ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿನ ಮಾನವ ಸಂಪನ್ಮೂಲಗಳ ಸ್ಥಿತಿಯನ್ನು ಪರಿಶೀಲಿಸಿದರು […]