ಜಿಲ್ಲಾ ಮಟ್ಟದ ಉನ್ನತಿ-ಸಂಚಲನ ಮೆಗಾ ಸ್ಕಾಲರ್ ಶಿಪ್: 807 ಅಭ್ಯರ್ಥಿಗಳಿಗೆ ಸ್ಕಾಲರ್ ಶಿಪ್, ಜೂನ್ 20ರೊಳಗೆ ವಿತರಣೆ
ಉಡುಪಿ: ಕೌಶಲ್ಯಾಧಾರಿತ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಪಾಲುದಾರ ಸಂಸ್ಥೆಯಾದ ಉನ್ನತಿ ಕೆರಿಯರ್ ಅಕಾಡೆಮಿ ಹಾಗೂ ಸಂಚಲನ ಸ್ವಯಂ ಸೇವಾ ಸಂಘಟನೆಯ ಜಂಟಿ ಆಯೋಜನೆಯಲ್ಲಿ ಉಡುಪಿ ಜಿಲ್ಲಾ ಮಟ್ಟದ “ಉನ್ನತಿ ಸಂಚಲನ ಮೆಗಾ ಶಿಪ್ ಸ್ಪರ್ಧೆ”ಯು ಮುಕ್ತಾಯಗೊಂಡು ಫಲಿತಾಂಶ ಘೋಷಿಸಲಾಗಿದೆ. ಸ್ಪರ್ಧೆಯಲ್ಲಿ ಜಿಲ್ಲೆಯ 25 ಪದವಿ ಕಾಲೇಜಿನ 1144 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಸ್ಪರ್ಧೆಯಲ್ಲಿ 807 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿ ಎಫ್ ಎಸ್ ಐ ಕ್ಷೇತ್ರದ ಮೂರು ಕೋರ್ಸ್ ತರಬೇತಿಗಳಾದ […]
ಮಣಿಪಾಲ: ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ
ಮಣಿಪಾಲ: ಭಾರತದ ಆಧುನಿಕ ಕಲಾವಿದರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ, ಹೆಬ್ಬಾರ್ ಗ್ಯಾಲರಿ ಮತ್ತು ಆರ್ಟ್ ಸೆಂಟರ್ (ಎಚ್ಜಿಎಸಿ) ಜೂನ್ 15 ರಂದು ಬುಧವಾರ ಸಂಜೆ 6 ಗಂಟೆಗೆ ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟೀಸ್ ನ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ‘ಚಕ್ರವ್ಯೂಹ್’ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದೆ. ಉಡುಪಿಯ ಯಕ್ಷಗಾನ ಕೇಂದ್ರದ ಖ್ಯಾತ ಗುರು ಸಂಜೀವ್ ಸುವರ್ಣರವರು ಈ ಯಕ್ಷಗಾನವನ್ನು ನಿರ್ದೇಶಿಸಿದ್ದು, ಮಣಿಪಾಲದಲ್ಲಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಬಯಲಾಟ ನಡೆಯಲಿದೆ. ಬಹುತೇಕ ಕನ್ನಡ ಅಥವಾ ತುಳು ಭಾಷೆಯಲ್ಲಿ […]
ಹಿರಿಯ ರಾಜಕಾರಣಿ ರಾಜಕೀಯ ಮುತ್ಸದ್ದಿ ಎ ಜಿ ಕೊಡ್ಗಿ ನಿಧನ
ಕುಂದಾಪುರ: ಕನಿಷ್ಟ ಐದು ದಶಕಗಳಷ್ಟು ಕಾಲ ರಾಜಕಾರಣದಲ್ಲಿದ್ದು, ಕರಾವಳಿಯ ತುಂಬೆಲ್ಲಾ ತಮ್ಮ ಛಾಪು ಮೂಡಿಸಿದ್ದ, ಹಿರಿಯ ರಾಜಕಾರಣಿ ರಾಜಕೀಯ ಮುತ್ಸದ್ದಿ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ ಸೋಮವಾರದಂದು ನಿಧನರಾಗಿದ್ದಾರೆ. ಇವರು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದಲ್ಲಿ ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದರು. ತಮ್ಮ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದ ಜೊತೆ ಪ್ರಾರಂಭಿಸಿದ್ದ ಕೊಡ್ಗಿ, 1993 ರಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಿದ್ದರು. ಅಕ್ಟೋಬರ್ 1, 2013ರಲ್ಲಿ ತಮ್ಮ 84 ನೇ ಹುಟ್ಟುಹಬ್ಬದ ದಿನದಂದು 57 ವರ್ಷದ ತಮ್ಮ ಸುಧೀರ್ಘ ರಾಜಕೀಯ ಜೀವನಕ್ಕೆ […]
ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ಗೆ ಮೊದಲ ತಾಯ್ನಾಡ ಗೌರವ: ಸ್ಪಿನ್ ಮಾಂತ್ರಿಕನಿಗೆ ಮರಣೋತ್ತರ ಪ್ರಶಸ್ತಿ ನೀಡಿ ಗೌರವಿಸಿದ ಆಸ್ಟ್ರೇಲಿಯಾ
ರಾಣಿಯ ಜನ್ಮದಿನದ ಪಟ್ಟಿಯಲ್ಲಿ ಮಾಜಿ ಟೆನಿಸ್ ಆಟಗಾರ್ತಿ ಆಶ್ ಬಾರ್ಟಿ ಜೊತೆಗೆ ಆಫೀಸರ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಎಂದು ಹೆಸರಿಸಲ್ಪಟ್ಟ ನಂತರ ಶೇನ್ ವಾರ್ನ್ ತಮ್ಮ ಮೊದಲ ಆಸ್ಟ್ರೇಲಿಯಾದ ಗೌರವವನ್ನು ಮರಣೋತ್ತರವಾಗಿ ಪಡೆದರು. ಮಾರ್ಚ್ನಲ್ಲಿ ಥೈಲ್ಯಾಂಡ್ನಲ್ಲಿ ರಜಾದಿನಗಳಲ್ಲಿದ್ದಾಗ ಶಂಕಿತ ಹೃದಯಾಘಾತದಿಂದ 52 ನೇ ವಯಸ್ಸಿನಲ್ಲಿ ನಿಧನರಾದ ಸ್ಪಿನ್-ಬೌಲಿಂಗ್ ಮಾಂತ್ರಿಕನಿಗೆ ಕ್ರೀಡಾ ಜಗತ್ತೇ ಪ್ರಶಸ್ತಿಗಳ ಸುರಿಮಳೆಗೈದಿದ್ದರೂ ಅವರ ಸ್ವಂತ ದೇಶವು ಅವರನ್ನು ಔಪಚಾರಿಕವಾಗಿ ಗೌರವಿಸಿರಲಿಲ್ಲ. ಅದನ್ನೀಗ ಸರಿಪಡಿಸಲಾಗಿದ್ದು, ಭಾನುವಾರ ತಡರಾತ್ರಿ “ಒಬ್ಬ ಆಟಗಾರನಾಗಿ ಕ್ರಿಕೆಟ್ ಗೆ […]
ಹಾಲಾಡಿ: ನಿರುದ್ಯೋಗಿ ಯುವಕ ಬಾವಿಗೆ ಹಾರಿ ಆತ್ಮಹತ್ಯೆ
ಕುಂದಾಪುರ: ಕೆಲಸ ಇಲ್ಲದೆ ನಿರುದ್ಯೋಗಿಯಾಗಿ ಚಿಂತೆಯಲ್ಲಿದ್ದ ಯುವಕನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ 76 ಹಾಲಾಡಿ ಗ್ರಾಮದಲ್ಲಿ ಜೂ.12 ರಂದು ಬೆಳಿಗ್ಗೆ ನಡೆದಿದೆ. ಮೃತರನ್ನು 76 ಹಾಲಾಡಿ ಗ್ರಾಮದ ಗೋರಾಜೆ ನಿವಾಸಿ 33 ವರ್ಷ ಪ್ರಾಯದ ಉಮೇಶ ಮಡಿವಾಳ ಎಂದು ಗುರುತಿಸಲಾಗಿದೆ. ವ್ಯಕ್ತಿಯು ಮೊದಲು ಬೆಂಗಳೂರಿನಲ್ಲಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದು, ಊರಿಗೆ ಬಂದ ನಂತರ ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ ನೊಂದು ಮದ್ಯಪಾನ ಮಾಡುವ ಹವ್ಯಾಸ ಮೈಗೂಡಿಸಿಕೊಂಡಿದ್ದರು. ಇದೇ ಚಿಂತೆಯಲ್ಲಿ ಮನನೊಂದು ನಿನ್ನೆ […]