ಶಂಕರನಾರಾಯಣ: ತೆರೆದ ಬಾವಿಗೆ ಬಿದ್ದು ವ್ಯಕ್ತಿ ಸಾವು
ಶಂಕರನಾರಾಯಣ: ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹಾಲಾಡಿ ಶಂಕರನಾರಾಯಣ ಸಮೀಪ ಇಂದು ನಡೆದಿದೆ. ಮೃತರನ್ನು ಹಾಲಾಡಿ ನಿವಾಸಿ 35 ವರ್ಷದ ಉಮೇಶ್ ಎಂದು ಗುರುತಿಸಲಾಗಿದೆ. ಇವರು ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲುಜಾರಿ 40 ಅಡಿ ಆಳವಾದ ತೆರೆದ ಬಾವಿಗೆ ಬಿದ್ದು ಮುಳುಗಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಸ್ಥಳೀಯರ ಸಹಕಾರದೊಂದಿಗೆ ಮೃತದೇಹವನ್ನು ಮೇಲೆತ್ತಿದ್ದಾರೆ. ಮೃತದೇಹ 40 ಅಡಿ […]
ಕೋವಿಡ್-19 ಸಂಬಂಧಿತ ಆರೋಗ್ಯ ಸಮಸ್ಯೆ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು
ನವದೆಹಲಿ: ಭಾನುವಾರ, ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಕೋವಿಡ್-19 ಸಂಬಂಧಿತ ಸಮಸ್ಯೆಗಳಿಗಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. ಸೋನಿಯಾ ಗಾಂಧಿ ಈ ತಿಂಗಳ ಆರಂಭದಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದ್ದರು. ಸೋನಿಯಾ ಗಾಂಧಿಗೆ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ಜೂನ್ 23 ರಂದು ಹೊಸ ದಿನಾಂಕವನ್ನು ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಅವರ […]
ಪ್ರತಿ ಒಂದು ಕಿ.ಗ್ರಾಂ ತೂಕ ಇಳಿಕೆಗೆ 1000 ಕೋಟಿ ರೂ ಅಭಿವೃದ್ದಿ ಪ್ಯಾಕೇಜ್: ಗಡ್ಕರಿ ಚಾಲೆಂಜಿಗೆ 15 ಕಿಲೋ ತೂಕ ಇಳಿಸಿಕೊಂಡ ಉಜ್ಜಯನಿ ಸಂಸದ
ನವದೆಹಲಿ: ಕ್ಷೇತ್ರದ ಅಭಿವೃದ್ಧಿಗಾಗಿ ಬಜೆಟ್ ನೀಡುವಂತೆ ಉಜ್ಜಯನಿ ಸಂಸದ ಅನಿಲ್ ಫಿರೋಜಿಯಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ನಿರಂತರವಾಗಿ ಒತ್ತಾಯಿಸುತ್ತಿದ್ದರು. ಆಗ ಗಡ್ಕರಿ, ಅನಿಲ್ ತಮ್ಮ ತೂಕ ಇಳಿಸಿಕೊಂಡರೆ ಪ್ರತಿ ಕಿಲೋಗ್ರಾಂಗೆ ಬದಲಾಗಿ 1000 ಸಾವಿರ ಕೋಟಿ ರೂಗಳ ಬಜೆಟ್ ಅನ್ನು ಕ್ಷೇತ್ರದ ಅಭಿವೃದ್ಧಿಗಾಗಿ ಬಿಡುಗಡೆ ಮಾಡುವುದಾಗಿ ಷರತ್ತನ್ನು ಮುಂದಿಟ್ಟಿದ್ದರು. ಈ ಷರತ್ತನ್ನು ಸ್ವೀಕರಿಸಿರುವ ಅನಿಲ್, ಇದೀಗ 15 ಕಿಲೋ ತೂಕ ಇಳಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೀಗ ಅನಿಲ್ ಕೇಂದ್ರ ಸಾರಿಗೆ ಸಚಿವ ಗಡ್ಕರಿಯವರಿಂದ 15 ಸಾವಿರ […]
ದೇಶದ ಎರಡನೆ ಮತ್ತು ಕರ್ನಾಟಕದ ಮೊದಲನೆ ಕತ್ತೆ ಫಾರ್ಮ್ ದಕ್ಷಿಣ ಕನ್ನಡದಲ್ಲಿ ಆರಂಭ: ಟೆಕ್ಕಿ ಕೆಲಸ ಬಿಟ್ಟು ಕೃಷಿಕನಾದ ಶ್ರೀನಿವಾಸ್ ಗೌಡ ಸಾಧನೆ
ಬಂಟ್ವಾಳ: 42 ವರ್ಷದ ಶ್ರೀನಿವಾಸ್ ಗೌಡ, ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಕತ್ತೆ ಸಾಕಣೆ ಆರಂಭಿಸುವ ಮೂಲಕ ಇತಿಹಾಸ ಬರೆದಿದ್ದಾರೆ. ಜೂನ್ 8 ರಂದು ಪ್ರಾರಂಭವಾದ ಈ ಫಾರ್ಮ್ ಕರ್ನಾಟಕದಲ್ಲಿ ಮೊದಲನೆಯದು ಮತ್ತು ದೇಶದಲ್ಲೇ ಎರಡನೆಯದು. ಇಂತಹ ಕತ್ತೆ ಸಾಕಣೆ ಕೇಂದ್ರ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಮಾತ್ರ ಇದೆ. ತಿರಸ್ಕರಿಸಲಾದ ಮತ್ತು ಕಡಿಮೆ ಮೌಲ್ಯದ ಕತ್ತೆಗಳ ದುರವಸ್ಥೆ ನೋಡಿ ಮನನೊಂದು ಕತ್ತೆ ಸಾಕಣೆ ಫಾರ್ಮ್ ಪ್ರಾರಂಭಿಸಿದೆ ಎಂದು ತೋಟದ ಮಾಲೀಕ ಶ್ರೀನಿವಾಸ್ ಗೌಡ ಹೇಳುತ್ತಾರೆ. ಬಿಇ ಪದವೀಧರರಾಗಿರುವ […]
ಬಾಲ ಕಾರ್ಮಿಕ ಪದ್ದತಿ ಸಂಪೂರ್ಣವಾಗಿ ನಿರ್ಮೂಲವಾಗಲಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
ಉಡುಪಿ: ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಪತ್ತೆ ಹಚ್ಚಿ, ಅವರನ್ನು ದುಡಿಮೆಯಿಂದ ಮುಕ್ತಗೊಳಿಸಿ ಸೂಕ್ತ ಪುರ್ನವಸತಿ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಸಕಲ ವ್ಯವಸ್ಥೆಗಳನ್ನು ಒದಗಿಸುವ ಮೂಲಕ ಬಾಲ ಕಾರ್ಮಿಕ ಪದ್ದತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ […]