ತ್ಯಾಜ್ಯದಿಂದ ಐಶ್ವರ್ಯ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಜಾಥಾ
ಉಡುಪಿ: ನಗರಸಭೆ ಉಡುಪಿ ಹಾಗೂ ಸರ್ವೋದಯ ಇಂಟಿಗ್ರೇಟೆಡ್ ಟ್ರೈನಿಂಗ್ ಅಂಡ್ ರೂರಲ್ ಅಸೋಸಿಯೇಷನ್ ದಾವಣಗೆರೆ ಇವರ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಜೂನ್ 5 ರಂದು ಬೆಳಗ್ಗೆ 7.30 ಕ್ಕೆ ತ್ಯಾಜ್ಯದಿಂದ ಐಶ್ವರ್ಯ ಎಂಬ ಘೋಷವಾಕ್ಯದೊಂದಿಗೆ ಉಡುಪಿ ನಗರಸಭೆ ಕಾರ್ಯಾಲಯದಿಂದ ಸಿಟಿ ಬಸ್ ನಿಲ್ದಾಣ ಮಾರ್ಗವಾಗಿ ಭುಜಂಗ ಪಾರ್ಕ್ ವರೆಗೆ ಸ್ವಚ್ಛತಾ ಜಾಥಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.
ಒಂದೇ ರಂಗಸ್ಥಳ; 153 ಯಕ್ಷಗಾನ ವೇಷಗಳು: ಯಕ್ಷರಂಗದಲ್ಲಿ ಪ್ರಪ್ರಥಮ ಪ್ರಯೋಗ
ಮಂಗಳೂರು: ಮಂಗಳೂರಿನ ಇತಿಹಾಸ ಪ್ರಸಿದ್ದ ಕದ್ರಿ ದೇವಸ್ಥಾನದಲ್ಲಿ ಭಾನುವಾರ ಸನಾತನ ಯಕ್ಷಾಲಯದ 13ನೇ ವಾರ್ಷಿಕೋತ್ಸವದ ಪ್ರಯುಕ್ತ ಶೀದೇವಿ ಲಲಿತೋಪಾಖ್ಯಾನ ಪ್ರಸಂಗ ನಡೆಯಲಿದ್ದು, ಇದೇ ಮೊದಲ ಬಾರಿಗೆ ಒಂದೇ ರಂಗಸ್ಥಳದಲ್ಲಿ 153 ವೇಷಗಳು ಮೇಳೈಸಿ ಇತಿಹಾಸ ಸೃಷ್ಟಿಯಾಗಲಿದೆ. ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕದ್ರಿ ದೇವಸ್ಥಾನದಲ್ಲಿ ಯಕ್ಷಗಾನ ಪ್ರಸಂಗ ನಡೆಯಲಿದೆ. ಸಂಜೆ 5 ರಿಂದ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಯಕ್ಷಗುರು ರಾಕೇಶ್ ರೈ ಅಡ್ಕ ಈ ಯಕ್ಷಗಾನವನ್ನು […]
ಮಾಹೆ: ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ವಾರ್ಷಿಕೋತ್ಸವ ಸಮಾರಂಭ
ಮಣಿಪಾಲ: ಮುಂಬರುವ ದಿನಗಳಲ್ಲಿ ವಿಜ್ಞಾನ ಮತ್ತು ಕಲೆಗಳ ಸಮ್ಮಿಲನದಿಂದ ಶಿಕ್ಷಣವು ಹೆಚ್ಚು ಹೆಚ್ಚು ಅಂತರಶಿಸ್ತಿಯವಾಗಲಿದೆ ಎಂದು ಮಾಹೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್.ವಿನೋದ್ ಭಟ್ ಹೇಳಿದರು. ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ನ ವಾರ್ಷಿಕೋತ್ಸವ ‘ಸರ್ವೋದಯ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಕ್ತ ಕಲೆ ಮತ್ತು ಸಮಾಜಶಾಸ್ತ್ರೀಯ ವಿಷಯಗಳು ಮುಂದಿನ ದಿನಗಳಲ್ಲಿ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದಲ್ಲೂ ಹೆಚ್ಚಿನ ಮಹತ್ವವನ್ನು ಕಂಡುಕೊಳ್ಳಲಿದೆ. ಇಂತಹ ಸನ್ನಿವೇಶದಲ್ಲಿ ಮಾಹೆಯ ಜಿಸಿಪಿಎಎಸ್ ಒದಗಿಸುತ್ತಿರುವ ಕೋರ್ಸ್ಗಳು ಬಹಳಷ್ಟು ಮಹತ್ವವನ್ನು ಪಡೆಯುತ್ತವೆ ಮತ್ತು ವಿಶ್ವವಿದ್ಯಾನಿಲಯವು ಇಂತಹ […]
ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ: ಎರಡು ಚಿನ್ನ, ಒಂದು ಬೆಳ್ಳಿ ಪದಕ ವಿಜೇತ ಅಶ್ವಿನ್ ಸನಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ
ಉಡುಪಿ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯಿಂದ ಭಾಗವಹಿಸಿದ ಅಶ್ವಿನ್ ಸನಿಲ್ ಇವರು ಪವರ್ ಲಿಫ್ಟಿಂಗ್ ಮತ್ತು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಹಾಗೂ 100 ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕೇರಳ: ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ ಹಜ್ ಯಾತ್ರಾರ್ಥಿಗಳ ಮೊದಲನೆ ತಂಡ
ಕೇರಳ : ಸೌದಿ ಅರೇಬಿಯಾದ ಮದೀನಾಕ್ಕೆ ಹಜ್ ಯಾತ್ರಾರ್ಥಿಗಳ ಮೊದಲನೆ ಬ್ಯಾಚ್ ನ ಮೊದಲ ವಿಮಾನ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಿಂದ ನಿರ್ಗಮಿಸಿತು. ಕೇರಳದ ವಕ್ಫ್ ಮತ್ತು ಹಜ್ ಯಾತ್ರೆಯ ಸಚಿವರಾದ ವಿ ಅಬ್ದುರಹಿಮಾನ್ ಅವರು ಧ್ವಜಾರೋಹಣ ಮಾಡುವ ಮೂಲಕ ಮೊದಲನೆ ಬ್ಯಾಚ್ ಅನ್ನು ಬೀಳ್ಕೊಟ್ಟರು. ಸೌದಿ ಅರೇಬಿಯ ಏರ್ಲೈನ್ಸ್ನ ಎಸ್ ವಿ 5747 ವಿಮಾನದಲ್ಲಿ 377 ಪ್ರಯಾಣಿಕರು ಹಜ್ ಯಾತ್ರೆಗೆ ಹೊರಟಿದ್ದಾರೆ. “ಭಾರತೀಯ ಹಜ್ ಯಾತ್ರಿಕರ ಮೊದಲ ಬ್ಯಾಚ್ ಇಂದು ಹೊರಟಿದೆ ಮತ್ತು ಕೊನೆಯ ವಿಮಾನ […]