ಬ್ರಹ್ಮಾವರ: ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ಪ್ರವೇಶಾತಿ ಆರಂಭ

ಬ್ರಹ್ಮಾವರ: ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ, ಕರ್ನಾಟಕ ಸರ್ಕಾರದಿಂದ ಗುರುತಿಸಲ್ಪಟ್ಟಿರುವ ISO 9001:2015 ಪ್ರಮಾಣೀಕೃತ ಸಂಸ್ಥೆ ವಿದ್ಯಾಲಕ್ಷ್ಮಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ 2022-23 ಸಾಲಿನ ಪ್ರವೇಶಾತಿಗಳು ಆರಂಭಗೊಂಡಿದೆ. BSc FT, BSc BT, BHS, BSc FD, BCA, BBA, BCOM, BSc, PCM ಮುಂತಾದ ವಿಭಾಗಗಳು ಲಭ್ಯವಿದೆ. ಕಾಲೇಜಿನಲ್ಲಿ ಪ್ರವೇಶಾತಿ ಪಡೆಯಲು ಬಯಸುವವರು vidyalaxmiedu09@gmail.com/www.vidyalaxmiedu.com ಅನ್ನು ಅಥವಾ ದೂರವಾಣಿ ಸಂಖ್ಯೆ: 8197480919 ,9901250431 ಅನ್ನು ಸಂಪರ್ಕಿಸಬಹುದು ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.

ಉಜಿರೆ ಎಸ್‌ ಡಿ ಎಂ ಕಾಲೇಜಿನ ಮಾಜಿ ಪ್ರಿನ್ಸಿಪಾಲ್ ಡಾ.ಬಿ.ಯಶೋವರ್ಮ ಇನ್ನಿಲ್ಲ!

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ತಮ್ಮ ದೂರದರ್ಶಿ ಕಾರ್ಯಕ್ರಮಗಳ ಮೂಲಕ ಎಸ್ ಡಿಎಂ ಶಿಕ್ಷಣ ಸಂಸ್ಥೆಗಳ ಯಶಸ್ಸಿನಲ್ಲಿ ಪ್ರಮಖ ಪಾತ್ರ ವಹಿಸಿದ್ದ ಡಾ.ಬಿ.ಯಶೋವರ್ಮ ದೀರ್ಘಕಾಲದ ಅನಾರೋಗ್ಯದಿಂದಾಗಿ ಸೋಮವಾರ ನಿಧನರಾಗಿದ್ದಾರೆ. ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದರು. ಕಳೆದ ಕೆಲವು ತಿಂಗಳಿನಿಂದ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 66 ವರ್ಷದ ಯಶೋವರ್ಮ ಅವರು ಭಾನುವಾರ ಮಧ್ಯರಾತ್ರಿ ಚಿಕಿತ್ಸೆ ಫಲಿಸದೆ ನಿಧರಾಗಿದ್ದಾರೆ. ಡಾ. ಬಿ.ಯಶೋವರ್ಮ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ […]

ಅಲೆವೂರು ಉಪಚುನಾವಣೆಯಲ್ಲಿ ಬಿಜೆಪಿ ಜಯ; ಮತದಾರ ಬಿಜೆಪಿ ಪರವೆಂದು ಮತ್ತೊಮ್ಮೆ ಸಾಬೀತು: ಶ್ರೀಕಾಂತ್ ನಾಯಕ್

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ಕೊರಂಗ್ರಪಾಡಿ 3ನೇ ವಾರ್ಡಿನ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಂಕರ್ ಪಾಲನ್ ಎದುರಾಳಿ ಅಭ್ಯರ್ಥಿಯ ಎದುರು 67 ಮತಗಳಿಂದ ಜಯಗಳಿಸಿದ್ದು, ಮತದಾರರು ಬಿಜೆಪಿ ಪರವಾಗಿದ್ದರೆನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್ ಹೇಳಿದ್ದಾರೆ. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹಾಗೂ ನೂರಾರು ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ಶತಪ್ರಯತ್ನ ಮಾಡಿದರೂ ಯಶಸ್ಸು ಸಿಗಲಿಲ್ಲ. […]

ಕೊಡವೂರು: ಮನೆ- ಮನೆಗೆ ತೆರಳಿ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಕೆ

ಕೊಡವೂರು ವಾರ್ಡಿನಲ್ಲಿ ಮನೆ – ಮನೆಗೆ ತೆರಳಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯ ಮೇ 20 ರಂದು ನಡೆಯಿತು. ಕೊಡವೂರು ವಾರ್ಡಿನಲ್ಲಿ ಅನೇಕ ಸಮಿತಿ ರಚನೆ ಮಾಡಲಾಗಿದ್ದು, ಅದರಲ್ಲಿ ವಿದ್ಯಾರ್ಥಿ ಸಮಿತಿಯೂ ಒಂದಾಗಿದೆ. ವಿದ್ಯಾರ್ಥಿ ಸಮಿತಿಯ ಮುಖಾಂತರ ಅನೇಕ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್ ನೀಡಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಕೊಡವೂರು ವಾರ್ಡಿಗೆ ಹೆಸರು ತಂದಿರುವ ವಿದ್ಯಾರ್ಥಿಗಳ ಮನೆಗೆ ತೆರಳಿ ಅವರನ್ನು ಗೌರವಿಸುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ನಗರ ಸಭಾ […]

ಮಂದಾರ್ತಿ: ಕಾರಿಗೆ ಬೆಂಕಿ ಹಚ್ಚಿಕೊಂಡು ಯುವ ಜೋಡಿ ಆತ್ಮಹತ್ಯೆ ಪ್ರಕರಣ; ಮಕ್ಕಳ ಪ್ರೀತಿಯ ವಿಷಯ ಗೊತ್ತಿಲ್ಲವೆಂದ ಪೋಷಕರು

ಮಂದಾರ್ತಿ: ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದ ಬೆಂಗಳೂರಿನ ಯುವ ಜೋಡಿ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಬಾಡಿಗೆ ಕಾರಿಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ಮಕ್ಕಳ ಹೆತ್ತವರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಮಕ್ಕಳು ಪ್ರೀತಿಸುತ್ತಿದ್ದ ವಿಷಯ ತಿಳಿದಿರಲಿಲ್ಲ, ಗೊತ್ತಿದ್ದಿದ್ದರೆ ಅವರಿಬ್ಬರಿಗೂ ಮದುವೆ ಮಾಡಿಸುತ್ತಿದ್ದೆವು ಎಂದು ಹೇಳಿದ್ದಾರೆ. 23 ವರ್ಷದ ಯಶವಂತ್ ಯಾದವ್ ವಿ ಮತ್ತು ಜ್ಯೋತಿ ಎಂ ಅವರ ಮೃತದೇಹಗಳು ಭಾನುವಾರ ಮುಂಜಾನೆ ಸುಟ್ಟ ಕಾರಿನೊಳಗೆ ಪತ್ತೆಯಾಗಿತ್ತು. ಬೆಂಗಳೂರಿನ ನಿವಾಸಿಗಳಾದ ಈ ಯುವ ಜೋಡಿ, ಮೇ 18 ರಂದು […]