ಮಾಹೆ: ಕ್ಯಾನ್ಸರ್‌ಗೆ ಬಹು-ಶಿಸ್ತಿನ ಚಿಕಿತ್ಸಾ ವಿಧಾನದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ

ಮಣಿಪಾಲ: ಮೇ 18 ರಂದು ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಮಾಹೆ ಮಣಿಪಾಲದ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗವು ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಸಪೋರ್ಟ್ ಗ್ರೂಪ್ ನ ಉದ್ಘಾಟನೆ ಮತ್ತು ಮೇದೋಜ್ಜೀರಕ ಗ್ರಂಥಿಗೆ ಸಂಬಂಧಿಸಿದ ಕ್ಯಾನ್ಸರ್‌ಗೆ ಬಹು-ಶಿಸ್ತಿನ ಚಿಕಿತ್ಸಾ ವಿಧಾನದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮ ಆಯೋಜಿಸಿತ್ತು. ಮುಖ್ಯ ಅತಿಥಿಗಳಾದ ವಿಶಾಖಪಟ್ಟಣದ ಹೋಮಿಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಉಮೇಶ್ ಮಹಾಂತಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ”ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವು ಕರಾವಳಿ ಕರ್ನಾಟಕ ಭಾಗದಲ್ಲಿ […]
ಧಾರಾಕಾರ ಮಳೆ: ದ.ಕ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ

ಮಂಗಳೂರು:- ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯ ಕಾರಣ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮೇ.19ರ ಗುರುವಾರ ಒಂದು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆದೇಶಿಸಿದ್ದಾರೆ.
ಮಲ್ಪೆ: ಚಲಿಸುತ್ತಿರುವ ಸ್ಕೂಟರ್ ನಲ್ಲೇ ಉಸಿರು ನಿಲ್ಲಿಸಿದ ಮೀನುಗಾರ

ಮಲ್ಪೆ: ಮೀನುಗಾರಿಕೆ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ತೆರಳುತ್ತಿದ್ದ ವೇಳೆ ಹೃದಯಾಘಾತವಾಗಿ ಮೀನುಗಾರನೋರ್ವ ಮೃತಪಟ್ಟ ಘಟನೆ ಮಲ್ಪೆ ಕಂಬಳತೋಟ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಮಲ್ಪೆ ಕಂಬಳತೋಟ ನಿವಾಸಿ 32 ವರ್ಷದ ಪ್ರತಾಪ್ ಮೃತಪಟ್ಟ ಮೀನುಗಾರ. ಇವರು ಇಂದು ಬೆಳಿಗ್ಗೆ ಮೀನುಗಾರಿಕೆ ಮುಗಿಸಿಕೊಂಡು ಅಕ್ಕನ ಮಗ ಕಿರಣ್ ಎಂಬಾತನ ಸ್ಕೂಟರ್ ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೋಗುತ್ತಿದ್ದರು. ಈ ವೇಳೆ ಪ್ರತಾಪ್ ದಿಢೀರ್ ಅಸ್ವಸ್ಥಗೊಂಡು ಕಿರಣ್ ಮೈಮೇಲೆ ಬಿದಿದ್ದರು. ತಕ್ಷಣವೇ ಕಲ್ಯಾಣಪುರ ಗೊರಾಠಿ ಅಸ್ಪತ್ರೆಗೆ ಕರೆದುಕೊಂಡು […]