ಅರ್ಜಿ ಆಹ್ವಾನ

ಉಡುಪಿ: ಜಿಲ್ಲೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಖಾಲಿ ಇರುವ ಕೌಟುಂಬಿಕ ಸಲಹೆಗಾರರ-1 ಹುದ್ದೆ (ಎಮ್.ಎಸ್.ಡಬ್ಲ್ಯೂ) ಹಾಗೂ ಸಾಮಾಜಿಕ ಕಾರ್ಯಕರ್ತರ- 3 ಹುದ್ದೆಗಳಿಗೆ (ಬಿ.ಎಸ್.ಡಬ್ಲ್ಯೂ / ಬಿ.ಎ ಸೈಕಾಲಜಿ) ಗೌರವಧನ ಆಧಾರದಲ್ಲಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 23 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ, ಬನ್ನಂಜೆ, ಉಡುಪಿ ಕಚೇರಿ ದೂರವಾಣಿ ಸಂಖ್ಯೆ: 0820-2526394 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಹೆಬ್ರಿ: ಮೀನು ಹಿಡಿಯಲು ಹೋದ ವ್ಯಕ್ತಿ ಹೊಳೆಯಲ್ಲಿ ಮುಳುಗಿ ಸಾವು

ಹೆಬ್ರಿ: ಹೊಳೆಗೆ ಬಲೆ ಹಾಕಿ ಮೀನು ಹಿಡಿಯಲು ಹೋದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಹೊಳೆ ನೀರಿಗೆ ಬಿದ್ದು ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ವರಂಗ ಗ್ರಾಮದ ಬೈದಡಪು ಹೊಳೆಯಲ್ಲಿ ಮೇ.12ರಂದು ಸಂಜೆ ನಡೆದಿದೆ. ವರಂಗ ಗ್ರಾಮದ ಬೈದಡಪು ನಿವಾಸಿ 69 ವರ್ಷದ ಶ್ರೀಧರ ಪೂಜಾರಿ ಮೃತದುರ್ದೈವಿ. ಇವರು ಮೇ.12ರಂದು ಸಂಜೆ ಬೈದಡಪು ಹೊಳೆಗೆ ಮೀನು ಹಿಡಿಯಲು ಹೋಗಿದ್ದು, ದಡದಲ್ಲಿ ನಿಂತು ಬಲೆ ಹಾಕಿ ಮೀನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದಿದ್ದಾರೆ. ಹೊಳೆಯಲ್ಲಿ […]

ಕಲಾವಿದರ ದತ್ತಾಂಶ ಸಂಗ್ರಹ: ಅವಧಿ ವಿಸ್ತರಣೆ

ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ ಸಾಹಿತಿ ಹಾಗೂ ಕಲಾವಿದರುಗಳು ಸೇವಾಸಿಂಧು ಪೋರ್ಟಲ್. www.sevasindhu.karnataka.gov.in ರಲ್ಲಿ ತಮ್ಮ ಮಾಹಿತಿಯನ್ನು ನೋಂದಾಯಿಸಿಕೊಳ್ಳುವ ಅವಧಿಯನ್ನು ಮೇ 30 ರ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ದೂರವಾಣಿ ಸಂಖ್ಯೆ 0820-2986168 ಅನ್ನು ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಟೆಂಪಲ್ ಸಿಟಿ ಲಿಜನ್ ಮತ್ತು ಗಿರಿಜಾ ಹೆಲ್ತ್ ಕೇರ್ ಉಡುಪಿ ಇದರ ಜಂಟಿ ಸಹಯೋಗದಿಂದ ವಿಶ್ವ ದಾದಿಯರ ದಿನ‌ ಆಚರಣೆ

ಉಡುಪಿ: ಉಡುಪಿ ಟೆಂಪಲ್ ಸಿಟಿ ಲಿಜನ್ ಮತ್ತು ಗಿರಿಜಾ ಹೆಲ್ತ್ ಕೇರ್ ಉಡುಪಿ ಇದರ ಜಂಟಿ ಸಹಯೋಗದೊಂದಿಗೆ ಮೇ 13ರಂದು ವಿಶ್ವ ದಾದಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಿರಿಜಾ ಶಿವರಾಮ್ ಶೆಟ್ಟಿ, ಡಾಕ್ಟರ್ ವಿರೂಪಾಕ್ಷ ದೇವರ ಮನೆ, ನಮ್ಮ ಲಿಜನಿನ ಅಧ್ಯಕ್ಷರಾದ ಜಗದೀಶ ಕೆಮಣ್ಣು, ರಾಷ್ಟ್ರೀಯ ಅಧಿಕಾರಿಗಳಾದ ಚಿತ್ರ ಕುಮಾರ್, ವಿಜಯ್ ಕುಮಾರ್ ಉದ್ಯಾವರ, ಕಾರ್ಯದರ್ಶಿ ಸಂತೋಷ್ ಕುಮಾರ್, ಗಿರಿಜಾ ಹೆಲ್ತ್ ಕೇರ್ ನ ಮಾಲಕರಾದ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ […]