ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದು ಗೂಡಂಗಡಿಯ ಕ್ಯಾಶ್‌ ನಲ್ಲಿಟ್ಟಿದ್ದ ಬ್ಯಾಗ್ ಕಳವು

ಉಡುಪಿ: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಗೂಡಂಗಡಿಯಲ್ಲಿದ್ದ ಬ್ಯಾಗ್ ಕಳವು ಮಾಡಿರುವ ಘಟನೆ ಕುಂಜಿಬೆಟ್ಟು ಎಂಜಿಎಂ ಕಾಲೇಜಿನ ಬಳಿ ಕೆ.ಇ.ಬಿ ಕ್ವಾಟ್ರಸ್ ಎದುರು ಮೇ 10 ರಂದು ಸಂಜೆ ನಡೆದಿದೆ. ಅರ್ಚನಾ ಎಂಬವರ ಗೂಡಂಗಡಿಗೆ ಇಬ್ಬರು ಅಪರಿಚಿತರು ಗಿರಾಕಿಗಳಾಗಿ ಬಂದು ಕ್ಯಾಶ್‌ ನಲ್ಲಿಟ್ಟಿದ್ದ ಬ್ಯಾಗ್‌ನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಬ್ಯಾಗ್‌ನಲ್ಲಿ 13 ಸಾವಿರ ರೂ. ನಗದು, ಪಾನ್‌ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಚೆಕ್‌ಬುಕ್, ಆರ್‌ಸಿ, ಡಿಎಲ್, ವಿಮೆಪತ್ರ ಹಾಗೂ ಎಫ್.ಡಿ ಬಾಂಡ್ ಇರುವುದಾಗಿದೆ ಎಂದು ತಿಳಿದು […]