ನನ್ನನ್ನು ಅಫೋರ್ಡ್ ಮಾಡಲು ಬಾಲಿವುಡ್ ಗೆ ಸಾಧ್ಯವಿಲ್ಲ ಎಂದ ತೆಲುಗಿನ ಸೂಪರ್ ಸ್ಟಾರ್!! ಬಾಲಿವುಡ್ ಗೆ ನೋ ಎಂದ ಮಹೇಶ್ ಬಾಬು!

ನವದೆಹಲಿ: ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು, ತಮ್ಮ ನಿರ್ಮಾಣ ಸಂಸ್ಥೆ ನಿರ್ಮಿಸಿರುವ ‘ಮೇಜರ್’ ಚಿತ್ರದ ಟ್ರೇಲರ್ ಲಾಂಚ್‌ನಲ್ಲಿ ‘ಬಾಲಿವುಡ್‌ಗೆ ನನ್ನನ್ನು ಅಫೋರ್ಡ್ ಮಾಡಲು ಸಾಧ್ಯವಿಲ್ಲ, ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ’ ಎಂದು ಹೇಳಿದ್ದಾರೆ. ಹಿಂದಿ ಚಿತ್ರರಂಗದಿಂದ ಹಲವಾರು ಆಫರ್ ಗಳು ಬರುತ್ತಿದ್ದರೂ ತಾನದನ್ನು ತಿರಸ್ಕರಿಸುತ್ತಿದ್ದೇನೆ ಎಂದ ಬಾಬು, ತೆಲುಗು ನಟನಾಗಿ ತಾನು ಅನುಭವಿಸುವ ಸ್ಟಾರ್‌ಡಮ್ ಮತ್ತು ಪ್ರೀತಿ ಅಪಾರವಾಗಿರುವುದರಿಂದ ಇತರ ಚಲನಚಿತ್ರೋದ್ಯಮಗಳಲ್ಲಿ ಸಾಹಸ ಮಾಡುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದಿದ್ದಾರೆ. ಪಿಟಿಐಗೆ ನೀಡಿದ ಸಂದರ್ಶನವೊಂದರಲ್ಲಿ ಅವರು […]
ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆ: ಅರ್ಜಿ ಆಹ್ವಾನ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಗೆ ಹಾಗೂ ನೀಲಿಕ್ರಾಂತಿ ಯೋಜನೆಯಡಿ 2018-19 ಮತ್ತು 2019-20 ರಲ್ಲಿ ಬಾಕಿ ಉಳಿದಿರುವ ಘಟಕಗಳಿಗಾಗಿ ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಒಳನಾಡು ಮೀನುಗಾರಿಕೆ ಮತ್ತು ಜಲಕೃಷಿ ಅಭಿವೃದ್ಧಿ, ಕಡಲ ಕೃಷಿ ಮತ್ತು ಕಡಲ ಕಳೆ ಕೃಷಿಗೆ ಸೇರಿದಂತೆ ಸಮುದ್ರ ಮೀನುಗಾರಿಕೆ ಅಭಿವೃದ್ಧಿ, ಅಲಂಕಾರಿಕ ಮತ್ತು ಮನೋರಂಜನೆ ಮೀನುಗಾರಿಕಾ ಅಭಿವೃದ್ಧಿ, ಆಳಸಮುದ್ರದ ಮೀನುಗಾರಿಕೆಗೆ ಅಭಿವೃದ್ಧಿ ಮತ್ತು ಮೀನುಗಾರಿಕೆ ನಿರ್ವಹಣೆ ಹಾಗೂ ನಿಯಂತ್ರಣ ವಿಧಿಗಳ ಅಭಿವೃದ್ಧಿ […]
ಉಡುಪಿಯ ಯುವತಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ನಿವಾಸಿ ಭಾರತಿ ಲಮಾಣಿ (19) ಎಂಬ ಯುವತಿಯು ಮೇ 8 ರಂದು ಮಧ್ಯಾಹ್ನ 3.30 ರ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಲಂಬಾಣಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಅನಾಥ ಬಾಲಕನ ವಾರಸುದಾರರಿಗಾಗಿ ಅನ್ವೇಷಣೆ

ಉಡುಪಿ: ಬಾರ್ಕೂರು ರೈಲ್ವೇ ನಿಲ್ದಾಣದ ಬಳಿ ಏಪ್ರಿಲ್ 8 ರಂದು ಅನಾಥವಾಗಿ ಸಿಕ್ಕಿದ್ದ ಬಿಕ್ರಂ ರಾಯ್ (15) ಎಂಬ ಬಾಲಕನನ್ನು ರಕ್ಷಣೆ ಮಾಡಿ, ಪುನರ್ವಸತಿ ಕಲ್ಪಿಸಲಾಗಿದ್ದು, ಪೋಷಕರು ಅಥವಾ ವಾರಸುದಾರರು ಯಾರಾದರೂ ಇದ್ದಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ದೂರವಾಣಿ ಸಂಖ್ಯೆ: 0820-2574964 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಮನೆ ಮಂಜೂರಾತಿ :ಅರ್ಜಿ ಆಹ್ವಾನ

ಉಡುಪಿ: ಉಡುಪಿ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಬಸವ ವಸತಿ ಯೋಜನೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಹೊಸಮನೆ ನಿರ್ಮಿಸಲು ಅರ್ಹ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಾಮಾನ್ಯ ಹಾಗೂ ಅಲ್ಪಸಂಖ್ಯಾತ ವರ್ಗದ ಸ್ವಂತ ನಿವೇಶನ ಹೊಂದಿದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಮನೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ಮೇ 20 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸುವಂತೆ ಉಡುಪಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.