ವಿಚ್ಛೇದಿತೆ ನಾಪತ್ತೆ
ಉಡುಪಿ: ವಿವಾಹ ವಿಚ್ಛೇದನ ಪಡೆದು ಮಾನಸಿಕವಾಗಿ ನೊಂದಿದ್ದ ಸಹನ (23) ಎಂಬ ಮಹಿಳೆಯು ಏಪ್ರಿಲ್ 19 ರಂದು ಮಧ್ಯಾಹ್ಮ 12 ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5.4 ಅಡಿ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಕೊಂಕಣಿ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ವೃತ್ತ ಕಚೇರಿ ದೂ.ಸಂಖ್ಯೆ: 08258-231083, ಮೊ.ನಂ: 9480805435, ಕಾರ್ಕಳ ಗ್ರಾಮಾಂತರ ಠಾಣೆ ದೂ.ಸಂಖ್ಯೆ: […]
ಮುಲ್ಲಡ್ಕ: ವೃದ್ಧ ನಾಪತ್ತೆ
ಉಡುಪಿ: ಕಾರ್ಕಳ ತಾಲೂಕು ಮುಲ್ಲಡ್ಕ ಗ್ರಾಮದ ನಿವಾಸಿ ದೂಜ (70) ಎಂಬ ವ್ಯಕ್ತಿಯು ಮೇ 9 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಮನೆಯಿಂದ ಮುಂಡ್ಕೂರು ಪೇಟೆಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5.5 ಅಡಿ ಎತ್ತರ, ಕಪ್ಪು ಮೈಬಣ್ಣ, ಸಪೂರ ಶರೀರ ಹೊಂದಿದ್ದು, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸ್ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.
ಬೆಳ್ಮಣ್: ಮಹಿಳೆ ನಾಪತ್ತೆ
ಉಡುಪಿ: ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಜಂತ್ರ ನಿವಾಸಿ ಆಶಾ (32) ಎಂಬ ಮಹಿಳೆಯು ಏಪ್ರಿಲ್ 25 ರಂದು ಮಧ್ಯಾಹ್ಮ 1 ಗಂಟೆಯ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ತುಳು, ಕೊಂಕಣಿ, ಹಿಂದಿ, ತಮಿಳು ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿಗಳ ಪ್ರಕಟಣೆ […]
ಮಸ್ಕ್ ಗೆ ಬೇಕು ಟ್ರಂಪ್? ಟ್ವಿಟರ್ ಗೆ ರೀ ಎಂಟ್ರಿ ಕೊಡಲಿದ್ದಾರೆ ಟ್ರಂಪ್! ಟ್ರಂಪ್ ಟ್ವಿಟರ್ ಬ್ಯಾನ್ ಗೆ ಮಸ್ಕ್ ವಿದಾಯ!!
ಇಬ್ಬರು ವ್ಯಾಪಾರ ದಿಗ್ಗಜರು, ತಮ್ಮ ನೇರ ನಡೆ ನುಡಿಗಳಿಗೆ ಹೆಸರುವಾಸಿಯಾದವರು, ಒಂದೆಡೆ ಸೇರಿದರೆ ಅದು ಹೇಗಿರುತ್ತೋ? ಸಾಮಾಜಿಕ ಜಾಲತಾಣ ಟ್ವಿಟರ್ ಅನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿರುವ ಟೆಸ್ಲಾ ಕಂಪನಿಯ ಮಾಲಕ ಏಲನ್ ಮಸ್ಕ್, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ಟ್ವಿಟರ್ ನಿಷೇಧವನ್ನು ಹಿಂತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಟ್ವಿಟ್ಟರ್ ತನ್ನನ್ನು ಬ್ಯಾನ್ ಮಾಡಿದ್ದಕ್ಕಾಗಿ ಆ ಸಂಸ್ಥೆಯನ್ನೇ ಖರೀದಿ ಮಾಡಿರುವ ಮಸ್ಕ್, ಇದೀಗ ಟ್ರಂಪ್ ಮೇಲಿರುವ ಟ್ವಿಟರ್ ಬ್ಯಾನ್ ಅನ್ನು ತೆರವುಗೊಳಿಸಲು ಉತ್ಸುಕರಾಗಿದ್ದಾರೆ. ನಿರಂಕುಶ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ […]
ಕೇರಳದಲ್ಲಿ ಟೊಮೇಟೊ ಜ್ವರ ಪತ್ತೆ: ಐದು ವರ್ಷ ಕೆಳಗಿನ ಮಕ್ಕಳಲ್ಲಿ ಹೆಚ್ಚಿದ ಸೋಂಕು
ಕೊಯಂಬತ್ತೂರು: ಕೇರಳದ ಹಲವಾರು ಭಾಗಗಳಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದೆ. ಟೊಮೆಟೊ ಜ್ವರ ಅಥವಾ ಟೊಮೆಟೋ ಫ್ಲೂ ಎಂದು ಗುರುತಿಸಲಾಗುವ ಈ ಅಪರೂಪದ ವೈರಲ್ ಕಾಯಿಲೆಯು ಮಕ್ಕಳಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ರಾಜ್ಯದಲ್ಲಿ ಇದುವರೆಗೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 80 ಕ್ಕೂ ಹೆಚ್ಚು ಮಕ್ಕಳಿಗೆ ಸೋಂಕು ತಗುಲಿಸಿದೆ ಎಂದು ಪಿಟಿಐ ವರದಿ ಮಾಡಿದೆ. ವರದಿಯ ಪ್ರಕಾರ, ಈ ಸಂಖ್ಯೆ ಮತ್ತಷ್ಟು ಏರುವ ಮುನ್ಸೂಚನೆಗಳಿವೆ. ರೋಗ ಲಕ್ಷಣಗಳು: # ಟೊಮೆಟೊ ಫ್ಲೂ ಪತ್ತೆ ಹಚ್ಚಲಾಗದ ಜ್ವರವಾಗಿದ್ದು, ಐದು ವರ್ಷಕ್ಕಿಂತ ಕಡಿಮೆ […]