ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ತೇಲುವ ಸೇತುವೆ

ಉಡುಪಿ: ಮಲ್ಪೆ ಬೀಚ್ ನಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ವಿನೂತನ ಮಾದರಿಯ ತೇಲುವ ಸೇತುವೆ ಅಳಡಿಸಲಾಗಿದ್ದು, ಮೇ.6 ರಿಂದ ಪ್ರವಾಸಿಗರಿಗೆ ಮುಕ್ತಗೊಳ್ಳಲಿದೆ. 100 ಮೀಟರ್‌ ಉದ್ದ ಮತ್ತು 3.5 ಮೀಟರ್‌ ಅಗಲ ವಿಸ್ತೀರ್ಣದ ತೇಲುವ ಸೇತುವೆ ಇದಾಗಿದ್ದು, ಸೇತುವೆಯ ಎರಡು ಇಕ್ಕೆಲಗಳಲ್ಲಿ ರೇಲಿಂಗ್‌ ಸಿಸ್ಟಮ್‌ ಅಳವಡಿಕೆ ಮಾಡಲಾಗಿದೆ. ಕೇರಳದ ಬೇಪೂರ್‌ ಬೀಚ್‌ ಬಳಿಕ ಕರ್ನಾಟಕದ ಮಲ್ಪೆ ಬೀಚ್‌ ನಲ್ಲಿ ಪ್ರಥಮ ಬಾರಿಗೆ ಪ್ರಯೋಗ ಮಾಡಲಾಗುತ್ತಿದೆ. ಇದು ಪ್ರವಾಸಿಗರಿಗೆ ಹೊಸ ಅನುಭವ ನೀಡಲಿದ್ದು, ಮಲ್ಪೆ ಪ್ರವಾಸೋದ್ಯಮಕ್ಕೆ ಹೊಸ ಮೆರಗು ನೀಡಲಿದೆ. […]

ಜಿಪಂ ಸಿಇಒ ಡಾ. ನವೀನ್‌ ಭಟ್‌ ವರ್ಗಾವಣೆ

ಉಡುಪಿ: ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್‌ ಭಟ್‌ ಅವರನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ ನಿರ್ದೇಶಕರನ್ನಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಗುರುವಾರ ಆದೇಶ ಹೊರಡಿಸಿದೆ. ಕರ್ನಾಟಕ ಭವನ ನವದೆಹಲಿ ಇದರ ಸಹಾಯಕ ಕಮೀಷನರ್‌ ಆಗಿದ್ದ ಪ್ರಸನ್ನ ಎಚ್‌. ಅವರನ್ನು ಉಡುಪಿ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಕಗೊಳಿಸಲಾಗಿದೆ.