ಚಿನ್ನದ ಹುಡುಗ ನೀರಜ್ ಚೋಪ್ರಾ ಸ್ವಗ್ರಾಮದಲ್ಲಿ ಆತನ ಹೆಸರಿನ ಕ್ರೀಡಾಂಗಣ ನಿರ್ಮಾಣ
ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸ್ವಗ್ರಾಮದಲ್ಲಿ ಆತನದೇ ಹೆಸರಿನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಹರಿಯಾಣದ ಮುಖ್ಯ ಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಭಾನುವಾರ (ಮೇ 1)ದಂದು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಸ್ವಗ್ರಾಮವಾದ ಪಾಣಿಪತ್ನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಪಾಣಿಪತ್ನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿ, ಹರಿಯಾಣದ ನೀರಜ್ ಚೋಪ್ರಾ ಅವರು ಕಳೆದ ವರ್ಷ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶ […]
ನಾವೀನ್ಯತೆ ಮತ್ತು ಉದ್ಯಮಶೀಲತೆಯ ಗುರಿಗಳು- ನಾಯಕತ್ವ ಸರಣಿ
ಮಣಿಪಾಲ: 30 ಏಪ್ರಿಲ್ ಶನಿವಾರದಂದು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮತ್ತು ಬಯೋನೆಸ್ಟ್ ಮಣಿಪಾಲ,ಕರ್ನಾಟಕ ಸರಕಾರದ ಬಯೋಇನ್ಕ್ಯುಬೇಟರ್ ಜಂಟಿ ಆಶ್ರಯದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಗುರಿಗಳು ನಾಯಕತ್ವ ಸರಣಿಯನ್ನು ಆಯೋಜಿಸಲಾಗಿತ್ತು. ಎಂಟರ್ ಪ್ರೂನರ್ಶಿಪ್ ಡೆವೆಲಪ್ಮೆಂಟ್, ಬಿ.ಐ.ಆರ್.ಎ.ಸಿ, ಡಿಬಿಟಿ, ನವದೆಹಲಿ ಇದರ ಡಿಜಿಎಮ್ ಮತ್ತು ಮುಖ್ಯಸ್ಥ-ಡಾ. ಮನೀಶ್ ದಿವಾನ್ ಮುಖ್ಯ ಅತಿಥಿಯಾಗಿ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನೆ ಸಹಾಯ ಮಂಡಳಿ, ಭಾರತ ಸರಕಾರದ […]
ಕಾರ್ಕಳ: ರಿಕ್ಷಾ ಚಾಲಕರಿಂದ ಬಟ್ಟೆ ಅಂಗಡಿ ಸಿಬ್ಬಂದಿ ಮೇಲೆ ಹಲ್ಲೆ
ಕಾರ್ಕಳ: ರಿಕ್ಷಾ ಬಾಡಿಗೆ ವಿಚಾರಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬರ ಮೇಲೆ ರಿಕ್ಷಾ ಚಾಲಕರು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕುಕ್ಕುಂದೂರು ಯೋಗೀಶ ನಾಯಕ್ ಕಾರ್ಕಳ ಜೋಡು ರಸ್ತೆಯಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಎ.29 ರಂದು ತಮ್ಮ ಅಂಗಡಿಯ ಮಾಲೀಕರ ಮತ್ತೊಂದು ಅಂಗಡಿಯ ಕೆಲಸಗಾರರಿಗೆ ತಿಂಡಿ ಕೊಡಲು ಹೋಗುತ್ತಿರುವಾಗ ಆಪಾದಿತ ರಿಕ್ಷಾಚಾಲಕ ಪದ್ಮನಾಭ ಶೆಟ್ಟಿಗಾರ್, ಮನೋಜ್ ಮತ್ತು ಪ್ಯಾಸ್ಕಲ್ ಎಂಬುವರು ಯೋಗೀಶ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಮಾತ್ರವಲ್ಲದೆ ತಮಗೆ ರಿಕ್ಷಾ ಬಾಡಿಗೆ […]
ಕಾರ್ಮಿಕ ದಿನಾಚರಣೆ ಉಡುಗೊರೆ: ಕೆಎಸ್ಆರ್ಟಿಸಿಯ 7,200 ನೌಕರರ ವಿರುದ್ಧದ ಶಿಸ್ತು ಪ್ರಕರಣ ರದ್ದು
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಕಾರ್ಮಿಕ ದಿನದಂದು ತನ್ನ ಕಾರ್ಮಿಕರಿಗೆ ಉಡುಗೊರೆಯನ್ನು ನೀಡಿದೆ. ಸಂಸ್ಥೆಯ 7,200 ನೌಕರರ ವಿರುದ್ಧ ದಾಖಲಾಗಿದ್ದ ಶಿಸ್ತು ಪ್ರಕರಣಗಳನ್ನು ಒಂದೇ ಬಾರಿಗೆ ಅನ್ವಯಿಸುವಂತೆ ರದ್ದು ಮಾಡಿ ಆದೇಶ ಹೊರಡಿಸಿ ಇತಿಹಾಸ ನಿರ್ಮಿಸಿದೆ. ಕೆಎಸ್ಆರ್ಟಿಸಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಕಾರ್ಮಿಕ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬು ಕುಮಾರ್ ಈ ಆದೇಶವನ್ನು ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. 10 ತಿಂಗಳಿಗಿಂತ ಕಡಿಮೆ ಅವಧಿಯ ಒಳಗಿನ ಗೈರು ಹಾಜರಿಯನ್ನು […]
ಎಕ್ಸ್ಪರ್ಟ್ ಪಿಯು ಕಾಲೇಜು ವಳಚ್ಚಿಲ್ ಕ್ಯಾಂಪಸ್ಗೆ ಗ್ರೀನ್ ಅವಾರ್ಡ್
ಮಂಗಳೂರು: ಜಿಐಬಿ ಇಂಡಿಯಾ ನೀಡುವ ಗ್ರೀನ್ ಅವಾರ್ಡ್ ಅನ್ನು ಮಂಗಳೂರಿನ ವಳಚ್ಚಿಲ್ನಲ್ಲಿರುವ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಕ್ಯಾಂಪಸ್ ಪಡೆದುಕೊಂಡಿದೆ. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಹಾಗೂ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್.ನಾಯಕ್ ಅವರು ಪುರಸ್ಕಾರವನ್ನು ಪಡೆದುಕೊಂಡರು. ಪ್ರಶಸ್ತಿಗಾಗಿ ವಿಶ್ವದ ನಾನಾ ಭಾಗದ 1000ಕ್ಕೂ ಅಧಿಕ ಸಂಸ್ಥೆಗಳು ನಾಮನಿರ್ದೇಶನಗೊಂಡಿದ್ದವು. ಪರಿಣಿತ ತೀರ್ಪುಗಾರರ ತಂಡವು ಸಮಗ್ರ ಅಧ್ಯಯನ ನಡೆಸಿ ಅಂತಿಮ ಹಂತದಲ್ಲಿ 20 ಸಂಸ್ಥೆಗಳಿಗೆ ಗ್ರೀನ್ ಪುರಸ್ಕಾರ ನೀಡಿ ಗೌರವಿಸಿದೆ. ಇದರಲ್ಲಿ […]