ಡಾ. ಟಿಎಂಎ ಪೈ ಅವರ 124ನೇ ಜನ್ಮದಿನೋತ್ಸವ ಆಚರಣೆ

ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯು ಸ್ಥಾಪಕರಾದ ಡಾ. ಟಿ. ಎಂ. ಎ. ಪೈ ಅವರ 124 ನೆಯ ಜನ್ಮದಿನವನ್ನು ಎಪ್ರಿಲ್ 30, ಶನಿವಾರದಂದು ಆಚರಿಸಿತು. ಸ್ಥಾಪಕರ ದಿನಾಚರಣೆಯನ್ನು ಮಣಿಪಾಲ ಸಮೂಹ ಸಂಸ್ಥೆಗಳಾದ ಡಾ. ಟಿ. ಎಂ. ಎ. ಪೈ ಫೌಂಡೇಶನ್, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಲಿ., ಮತ್ತು ಮಣಿಪಾಲ್ ಎಜುಕೇಶನ್ ಹಾಗೂ ಮಣಿಪಾಲ್ ಗ್ರೂಪ್ ಗಳಲ್ಲಿಯೂ ಆಚರಿಸಲಾಯಿತು. ಡಾ. ಟಿಎಂಪೈಯವರ ಚಿತ್ರಕೃತಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ […]
ಹೆಡ್ ಕಾನ್ ಸ್ಟೇಬಲ್ ಆತ್ಮಹತ್ಯೆಗೆ ಎಸಿಪಿ ಮತ್ತು ಪಿಎಸ್ ಐ ಕಾರಣ? ಡೆತ್ ನೋಟಿನಲ್ಲಿ ನಾಲ್ವರ ಹೆಸರು ಬಹಿರಂಗ!

ಉಡುಪಿ: ಆದಿ ಉಡುಪಿ ಶಾಲೆಯಲ್ಲಿ ಹತ್ತನೇ ತರಗತಿ ಪ್ರಶ್ನೆ ಪತ್ರಿಕೆಗಳ ಕೊಠಡಿಯ ಕಾವಲು ಕಾಯುತ್ತಿದ್ದ ಮೀಸಲು ಪಡೆಯ ಹೆಡ್ ಕಾನ್ ಸ್ಟೇಬಲ್ ರಾಜೇಶ್ ಕುಂದರ್, ಗುರುವಾರ ತಡರಾತ್ರಿಯಂದು ತನ್ನದೇ ಸರ್ವಿಸ್ ರೈಫಲಿನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದೆ. ಮೃತ ರಾಜೇಶ್ ಕುಂದರ್ ಬರೆದಿದ್ದಾರೆ ಎಂದೆನ್ನಲಾಗುವ ಡೆತ್ ನೋಟ್ ಒಂದು ಹೊರಬಂದಿದ್ದು, ಈತನ ಸಹೋದ್ಯೋಗಿ ಗಣೇಶ್ ಎಂಬುವವರಿಗೆ ಈ ಡೆತ್ ನೋಟ್ ಲಭ್ಯವಾಗಿದೆ. ಡೆತ್ ನೋಟ್‌ನಲ್ಲಿ ತನ್ನ ಸಾವಿಗೆ ಡಿಎಆರ್ ಎಸಿಪಿ ಉಮೇಶ್, ಅಶ್ಫಾಕ್ […]
ಶ್ರೀಕೃಷ್ಣಮಠದಲ್ಲಿ ಸಂಗೀತ ಕಾರ್ಯಕ್ರಮ

ಉಡುಪಿ: ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ, ವಿದುಷಿ ವೈಷ್ಣವಿ ಆನಂದ್ ಸಿಂಗಾಪುರ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಮಕ್ಕಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದ ಉಡುಪಿ ಜಿಲ್ಲಾಧಿಕಾರಿ

ಉಡುಪಿ: ಉಡುಪಿ ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಮಾದರಿ ಜಿಲ್ಲೆಯನ್ನಾಗಿಸಲು ಸಂಬಂಧಪಟ್ಟ ಎಲ್ಲಾಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕ್ರಿಯಾ ಯೋಜನೆ ರೂಪಿಸಿ, ಅದರಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಶನಿವಾರ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕನ್ ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್ ಕುಂದಾಪುರ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ, ಮಕ್ಕಳೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯ […]
ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಪೋಷಕ ಸದಸ್ಯತ್ವ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದಲ್ಲಿ ಪ್ರಸಕ್ತ ಸಾಲಿಗೆ ಮಣಿಪಾಲದ ಹೆಚ್.ಪಿ.ಆರ್ ಕಾಲೇಜು ಆಫ್ ಪ್ಯಾರಾಮೆಡಿಕಲ್ ಸೈನ್ಸ್ ನ ಮ್ಯಾನೇಜಿಂಗ್ ಡೈರಕ್ಟರ್ ಹಾಗೂ ಪ್ರಾಂಶುಪಾಲ ಹರಿಪ್ರಸಾದ್ ರೈ ಅವರು, ಪೋಷಕ ಸದಸ್ಯತ್ವವನ್ನು ನೋಂದಾಯಿಸಿದ್ದು, ಇತ್ತೀಚೆಗೆ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷರಾದ ಕೂರ್ಮಾರಾವ್ ಎಂ. ಅವರು ಹರಿಪ್ರಸಾದ್ ರೈ ಅವರನ್ನು ಪುಷ್ಪ ನೀಡುವ ಮೂಲಕ ಸಂಸ್ಥೆಗೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ರಾಜ್ಯ […]