ಮಣ್ಣು ಉಳಿಸಿ ಜಾಗೃತಿ ಅಭಿಯಾನ

12 ಏಪ್ರಿಲ್ 2022 ರಂದು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಮಣ್ಣು ಉಳಿಸಿ ಅಭಿಯಾನ ಪ್ರಾರಂಭವಾಗಿದ್ದು, ಅಂದಿನಿಂದ ಹಲವಾರು ಕಡೆಗಳಲ್ಲಿ ಸಾಕಷ್ಟು ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. 22 ಏಪ್ರಿಲ್ 2022 ರ, ವಿಶ್ವ ಭೂಮಿ ದಿನದಂದು ಉಡುಪಿಯ ಅಜ್ಜರಕಾಡು ಪಾರ್ಕ್‌ನಲ್ಲಿ ಬರಿಗಾಲಿನಲ್ಲಿ ನಡೆಯುವ ಮೂಲಕ ಪ್ರತಿಯೊಬ್ಬರೂ ಮಣ್ಣನ್ನು ಸ್ಪರ್ಶಿಸುವ ಅನುಭವವನ್ನು ಪಡೆದರು ಮತ್ತು ಮಣ್ಣಿನಿಂದ ಮೂರ್ತಿ ಮಾಡುವ ಸ್ಪರ್ಧೆಗಳು ಕೂಡಾ ನಡೆದವು. ಅಂದು ಭಾಗವಹಿಸಿದ ಪ್ರತಿಯೊಬ್ಬರ ಮಣ್ಣಿನ ಕೈಮುದ್ರೆಗಳನ್ನು ಬಿಳಿ ಬಟ್ಟೆಯಲ್ಲಿ ತೆಗೆದುಕೊಳ್ಳಲಾಗಿದ್ದು, […]

ಮಣಿಪಾಲದಲ್ಲಿ ವಿಶ್ವದರ್ಜೆಯ ಬಯೋನೆಸ್ಟ್ ಇನ್ಕ್ಯುಬೇಶನ್ ಸೌಲಭ್ಯ ಉದ್ಘಾಟನೆ

ಮಣಿಪಾಲ: ಬಯೋಟೆಕ್ನಾಲಜಿ ಇಲಾಖೆಯ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (BIRAC) ಬೆಂಬಲಿತ ಬಯೋನೆಸ್ಟ್ ಸೌಲಭ್ಯ- ಕರ್ನಾಟಕ ಸರ್ಕಾರ ಬಯೋಇನ್‌ಕ್ಯುಬೇಟರ್ (ಮಣಿಪಾಲದ ತಂತ್ರಜ್ಞಾನ ವ್ಯಾಪಾರ ಇನ್ಕ್ಯುಬೇಟರ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ) ಇದನ್ನು ಶನಿವಾರದಂದು ಮಣಿಪಾಲದಲ್ಲಿ ಉದ್ಘಾಟಿಸಲಾಯಿತು. ಬೆಂಗಳೂರಿನ ಮಣಿಪಾಲ ಶಿಕ್ಷಣ ಸಂಸ್ಥೆ ಮತ್ತು ಮೆಡಿಕಲ್ ಗ್ರೂಪ್ ಅಧ್ಯಕ್ಷ ಡಾ. ರಂಜನ್ ಆರ್ ಪೈ, ಡಾ. ಮನೀಶ್ ದಿವಾನ್, ಡಿಜಿಎಮ್ ಮತ್ತು ಮುಖ್ಯಸ್ಥ- ಸ್ಟ್ರಾಟಜಿ ಪಾರ್ಟನರ್ ಶಿಪ್ ಮತ್ತು ಎಂಟರ್ ಪ್ರೂನರ್ ಶಿಪ್ ಡೆವೆಲಪ್ ಮೆಂಟ್, […]

ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆಗೆ ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಅಸ್ಪೃಶ್ಯತಾ ನಿವಾರಣೆ, ಎಸ್.ಸಿ, ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಮತ್ತು ಇಲಾಖಾ ಕಾರ್ಯಕ್ರಮ ಹಾಗೂ ಸೌಲಭ್ಯಗಳ ಕುರಿತು ಅರಿವು ಮೂಡಿಸಲು ವಿಚಾರಗೋಷ್ಠಿ, ಕಾರ್ಯಾಗಾರ ಮತ್ತು ಬೀದಿ ನಾಟಕಗಳನ್ನು ನಡೆಸಲು ಅರ್ಹ ಎಸ್.ಸಿ ಹಾಗೂ ಎಸ್.ಟಿ ಸಂಘ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವಿದೇಶಿ ಉದ್ಯೋಗಗಳ ವಲಸೆ ಮಾಹಿತಿ ಕೇಂದ್ರ ಆರಂಭ

ಉಡುಪಿ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಜಿಲ್ಲೆಯ ಯುವಜನತೆಗೆ ವಿದೇಶಿ ಉದ್ಯೋಗಗಳ ಕುರಿತು ಮಾಹಿತಿ ಒದಗಿಸಲು ಮಣಿಪಾಲ ಜಿಲ್ಲಾಧಿಕಾರಿ ಕಛೇರಿಯ ಸಂಕೀರ್ಣದಲ್ಲಿರುವ ಕೌಶಲ್ಯಾಭಿವೃದ್ಧಿ ಕಛೇರಿಯಲ್ಲಿ ವಲಸೆ ಮಾಹಿತಿ ಕೇಂದ್ರ ಆರಂಭಿಸಲಾಗಿದ್ದು, ಆಸಕ್ತರು ಕಛೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಮೊ.ನಂ:7022832166, ದೂ.ಸಂಖ್ಯೆ:0820-2574869 ನ್ನು ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಡೆಕಾರು ಗ್ರಾ.ಪಂ: 100% ಆಸ್ತಿ ತೆರಿಗೆ ಸಂಗ್ರಹಣೆ

ಉಡುಪಿ: ಉಡುಪಿ ತಾಲೂಕು ಕಡೆಕಾರು ಗ್ರಾಮ ಪಂಚಾಯತಿಯು 2021-22 ನೇ ಸಾಲಿನಲ್ಲಿ 42,05,604 ರೂ. ಆಸ್ತಿ ತೆರಿಗೆ ಸಂಗ್ರಹಣೆ ಮಾಡಿ, ಪ್ರತಿಶತ ನೂರರಷ್ಟು ಸಾಧನೆ ಮಾಡಿದ್ದು, ತೆರಿಗೆ ಸಂಗ್ರಹಕ್ಕೆ ಶ್ರಮಿಸಿದ ಕಡೆಕಾರು ಗ್ರಾಮ ಪಂಚಾಯತ್‌ನ ಬಿಲ್ ಕಲೆಕ್ಟರ್ ಶ್ರೀಧರ್ ಅವರನ್ನು ಇತ್ತೀಚೆಗೆ ಪಂಚಾಯತ್ ಆಡಳಿತ ಮಂಡಳಿ ಮತ್ತು ಅಧಿಕಾರಿ ವರ್ಗದವರು ಸನ್ಮಾನಿಸಿದರು.