ಮಂಜುನಾಥ ಭಂಡಾರಿ ಹೇಳಿಕೆ ದೆವ್ವದ ಬಾಯಲ್ಲಿ ಭಗವದ್ಗೀತೆ : ಕುಯಿಲಾಡಿ ಸುರೇಶ್ ನಾಯಕ್

  ಉಡುಪಿ: ಸ್ವಾತಂತ್ರ್ಯಾ ನಂತರ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷವು ಬ್ರಹ್ಮಾಂಡ ಭ್ರಷ್ಟಾಚಾರಗೈದಿರುವುದನ್ನು ಮರೆತು ಕಾಂಗ್ರೆಸ್ ಮುಖಂಡ ಮತ್ತು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಬಿಜೆಪಿ ಬಗ್ಗೆ ಲಘುವಾಗಿ ಮಾತನಾಡಿರುವುದು ದೆವ್ವದ ಬಾಯಲ್ಲಿ ಭಗವದ್ಗೀತೆ ಎಂಬಂತಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಉಡುಪಿ ಕೃಷ್ಣ ಮಠದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ

  ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಉಡುಪಿಯ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಮತ್ತು ಬಳಗದವರಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ” ಕಾರ್ಯಕ್ರಮವು ಉಡುಪಿಯ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ನಡೆಯಿತು.

ಉಡುಪಿ: ಬಾವಿಗೆ ಹಾರಿ ಮೇಸ್ತ್ರಿ ಆತ್ಮಹತ್ಯೆ

ಉಡುಪಿ: ಗಾರೆ ಮೇಸ್ತ್ರಿಯೊಬ್ಬರು ನೆರೆ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ 76 ಬಡಗುಬೆಟ್ಟು ಗ್ರಾಮದ ಚಂದು ಮೈದಾನದ ಬಳಿ ಶನಿವಾರ ನಡೆದಿದೆ. ಬಡಗುಬೆಟ್ಟು ಗ್ರಾಮದ ನಿವಾಸಿ 47 ವರ್ಷದ ಸದಾನಂದ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಮೇಸ್ತ್ರಿ. ಇವರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಜೀವನದಲ್ಲಿ ಮನನೊಂದು ಶನಿವಾರ ಬೆಳಿಗ್ಗೆ 11.15 ಸುಮಾರಿಗೆ ನೆರೆಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅಗ್ನಿಶಾಮಕ ದಳದವರ ಸಹಕಾರದಿಂದ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು […]

ಸೈಬರ್ ರೇಂಜ್ ಫಿಜಿಟಲ್ ಮತ್ತು ವರ್ಚುವಲ್ ಲ್ಯಾಬ್‌ ಗಾಗಿ ಐಸಾಕ್ ಜೊತೆ ಮಾಹೆ ಒಡಂಬಡಿಕೆ

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮುಂದಿನ ಪೀಳಿಗೆಯ ಫಿಜಿಟಲ್ ಅನ್ನು ಸ್ಥಾಪಿಸಲು ಐ.ಎಸ್.ಎ.ಸಿ (ಐಸಾಕ್) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೌಶಲ್ಯ-ನಿರ್ಮಾಣ ಮತ್ತು ಭವಿಷ್ಯದ ಡಿಜಿಟಲ್ ಉದ್ಯೋಗಗಳನ್ನು ಹೆಚ್ಚಿಸಲು ಮಣಿಪಾಲದಲ್ಲಿ ವರ್ಚುವಲ್ ಸೈಬರ್ ಸೆಕ್ಯುರಿಟಿ ಲ್ಯಾಬ್‌ಗಳನ್ನು ಸೃಷ್ಟಿಸುವುದು ಈ ಒಪ್ಪಂದದ ಉದ್ದೇಶ. ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಎರಡನೇ ಅತಿ ದೊಡ್ಡ ವ್ಯಾಪಾರ ಕೇಂದ್ರವಾದ ಮಂಗಳೂರಿನಲ್ಲಿ ಪ್ರಮುಖ ಬ್ಯಾಂಕ್ ಗಳು ಮತ್ತು ಸಾಫ್ಟ್ ವೇರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ತಂತ್ರಜ್ಞಾನಾಧಾರಿತ ಯುಗದಲ್ಲಿ […]

ಉಡುಪಿ ಕಲ್ಸಂಕ ಜಂಕ್ಷನ್ ವಾಹನ ದಟ್ಟಣೆ ತಪ್ಪಿಸಲು ಸರ್ಕಲ್ ನಿರ್ಮಾಣಕ್ಕೆ ಚಿಂತನೆ

ಉಡುಪಿ: ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಎ ಹಾದುಹೋಗುವ ಕಲ್ಸಂಕ ಜಂಕ್ಷನ್ ನಲ್ಲಿ ಅತಿಯಾದ ವಾಹನ ದಟ್ಟಣೆಯಿಂದ ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್ ನಲ್ಲಿ ಸರ್ಕಲ್ ರಚಿಸುವ ಬಗ್ಗೆ ಶನಿವಾರದಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳ ಜೊತೆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಚರ್ಚಿಸಿದರು. ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಎ ಹಾದು ಹೋಗುವ ಪರ್ಕಳ ಪೇಟೆಯಿಂದ ಮಣಿಪಾಲ, ಉಡುಪಿ ನಗರದವರೆಗೆ ನಗರ ಪ್ರದೇಶವಾಗಿದ್ದು, […]