ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣ: ಆಡಿಯೋ ಟೇಪ್ ತನಿಖೆ: ಬೊಮ್ಮಾಯಿ
ಬೆಂಗಳೂರು : ಪಿಎಸ್ ಐ ನೇಮಕಾತಿ ಪರೀಕ್ಷೆ ಹಗರಣ ಸಂಬಂಧ ಮಾಜಿ ಸಚಿವ ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಹೊಸ ಆಡಿಯೋ ಟೇಪ್ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಬಿಡುಗಡೆ ಮಾಡಿರುವ ಹೊಸ ಆಡಿಯೋ ಟೇಪ್ ಬಗ್ಗೆಯೂ ತನಿಖೆ ನಡೆಸಲಾಗುವುದು. ನಾನು ಆ ಆಡಿಯೋ ಕೇಳಿಲ್ಲ. ಆಡಿಯೋದಲ್ಲಿ ಇಬ್ಬರ ನಡುವೆ ಮಾತುಕತೆ ನಡೆದಿದೆ. ಆ ಇಬ್ಬರು ಯಾರು? ಎಲ್ಲವೂ ತನಿಖೆ ಆಗುತ್ತದೆ. ತಪ್ಪಿತಸ್ಥರು ಯಾರಾಗಿದ್ದರೂ […]
ಉದ್ಯೋಗಾವಕಾಶ: ಏ 26 ರಂದು ಖಾಸಗಿ ಕಂಪನಿಗಳ ನೇರ ಸಂದರ್ಶನ
ಮಂಗಳೂರು: ಏಪ್ರಿಲ್ 26 ರ ಬೆಳಗ್ಗೆ 10 ಘಂಟೆಗೆ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪನಿಗಳ ನೇರ ಸಂದರ್ಶನವು ನಡೆಯಲಿದೆ. ಪಿಯುಸಿ, ಡಿಪ್ಲೋಮಾ ಹಾಗೂ ಯಾವುದೇ ಪದವಿಯಲ್ಲಿ (ಬಿಇ ಮತ್ತು ಬಿಸಿಎ ಹೊರತುಪಡಿಸಿ) ತೇರ್ಗಡೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಸ್ವವಿವರವುಳ್ಳ ಮಾಹಿತಿಯೊಂದಿಗೆ ನಗರದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಾಜರಾಗಬಹುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಮಾಹೆ ಮಣಿಪಾಲ: ಮಧುಮೇಹ ಪಾದದ ಆರೈಕೆ ಕಾರ್ಯಾಗಾರ ಉದ್ಘಾಟನೆ
ಉಡುಪಿ: ಡಯಾಬಿಟಿಕ್ ಫೂಟ್ ಕೇರ್ & ರಿಸರ್ಚ್ ಸೆಂಟರ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಸರ್ಜರಿ ಡಿಪಾರ್ಟ್ ಮೆಂಟ್, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲ ಮತ್ತು ಇಂಡಿಯನ್ ಪೊಡಿಯಾಟ್ರಿ ಅಸೋಸಿಯೇಷನ್, ಕರ್ನಾಟಕ ಚಾಪ್ಟರ್ ಸಹಯೋಗದೊಂದಿಗೆ, ಏಪ್ರಿಲ್ 23 ರಂದು ಟಿ.ಎಮ್.ಎ ಪೈ ಸಭಾಂಗಣ ಮಾಹೆ ಮಣಿಪಾಲದಲ್ಲಿ, “ಅಪ್ ಡೇಟ್ ಆನ್ ಡಯಾಬೆಟಿಕ್ ಫೂಟ್ ಮಣಿಪಾಲ- 2022” ಎಂಬ ಮಧುಮೇಹ ಪಾದದ ಆರೈಕೆ ಕಾರ್ಯಾಗಾರದ ಉದ್ಘಾಟನೆ ನಡೆಯಿತು. ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ […]
ಜಿಲ್ಲೆಯ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡಿನ ಪ್ರಯೋಜನ ಒದಗಿಸಿ: ಕೂರ್ಮಾರಾವ್
ಉಡುಪಿ ಜಿಲ್ಲೆಯ ಎಲ್ಲಾ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಸದುಪಯೋಗದ ಬಗ್ಗೆ ಅರಿವು ಮೂಡಿಸಿ ಈ ಕಾರ್ಡ್ ನಿಂದ ಪಡೆಯಬಹುದಾದ ಸೌಲಭ್ಯಗಳನ್ನು ಎಲ್ಲಾ ಅರ್ಹ ರೈತರಿಗೂ ಆದ್ಯತೆಯ ಮೇರೆಯಲ್ಲಿ ವಿತರಿಸುವ ಬಗ್ಗೆ ಜಿಲ್ಲೆಯ ಎಲ್ಲಾ ಬ್ಯಾಂಕ್ಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್ ನಲ್ಲಿ “ಕಿಸಾನ್ ಭಾಗೀದಾರಿ-ಪ್ರಾಥಮಿಕತಾ ಹಮಾರಿ” ವಿಶೇಷ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಿಸಾನ್ ಕ್ರೆಡಿಟ್ ಕಾರ್ಡ್ […]