ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲೂ ಗುಡುಗು ಸಹಿತ ಮಿಂಚಿನ ಸಾಧ್ಯತೆ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಏಪ್ರಿಲ್ 23 ಮತ್ತು 24 ರಂದು ಕರಾವಳಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ ಮಿಂಚು ಸಂಭವಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಕಟನೆಯು ಎಚ್ಚರಿಸಿರುತ್ತದೆ. ಉಳಿದಂತೆ ಏಪ್ರಿಲ್ 25, 26, 27 ರಂದು ಹವಾಮಾನದಲ್ಲಿ ಯಾವುದೇ ರೀತಿಯ ಬದಲಾವಣೆಯು ಇರುವುದಿಲ್ಲ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಏ.23 ರಂದು ಆರೋಗ್ಯ ಮೇಳ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆಯುಷ್ ವಿಭಾಗ, ತಾಲೂಕು ಆರೋಗ್ಯಾಧಿಕಾರಿ ಕಚೇರಿ ಹಾಗೂ ರೋಟರಿ ಮಿಡ್ ಟೌನ್ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ, 75 ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಉಡುಪಿ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳವು ಏಪ್ರಿಲ್ 23 ರಂದು ಬೆಳಗ್ಗೆ 10.30 ಕ್ಕೆ ನಗರದ ಅಜ್ಜರಕಾಡು ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ, […]
ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ
ಉಡುಪಿ: ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ 2021- 22 ನೇ ಸಾಲಿನಲ್ಲಿ ಆದಿವಾಸಿ ಜನಾಂಗದ ಕೊರಗ ವಿದ್ಯಾರ್ಥಿಗಳು ಏಳನೇ ತರಗತಿಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದವರಿಗೆ 2500 ರೂ. ವಿಶೇಷ ಪ್ರೋತ್ಸಾಹ ಧನ ಮಂಜೂರು ಮಾಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ರಜತಾದ್ರಿ, ಮಣಿಪಾಲ ದೂರವಾಣಿ ಸಂಖ್ಯೆ: 0820- 2574814, 2950198 ಅನ್ನು ಸಂಪರ್ಕಿಸುವಂತೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ […]
ಪಿಯುಸಿ ಪರೀಕ್ಷೆ ಹಿಜಾಬ್ ವಿಚಾರದಲ್ಲಿ ಗೊಂದಲಕ್ಕೆ ಅವಕಾಶ ಇಲ್ಲ: ನಗರದಲ್ಲಿ ಯಶ್ಪಾಲ್ ಸುವರ್ಣ ಹೇಳಿಕೆ
ಉಡುಪಿ: ದ್ವಿತೀಯ ಪಿಯು ಪರೀಕ್ಷೆ ಇಂದಿನಿಂದಲೇ ಆರಂಭವಾಗಲಿದ್ದು, ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದರು. ಅವರು ಗುರುವಾರ ಮಾಧ್ಯಮದವರ ಜೊತೆ ಮಾತನಾಡಿ ಹಿಜಬ್ ವಿಚಾರದಲ್ಲಿ ಬಹಳ ಗೊಂದಲ ಅಡೆತಡೆ ಸೃಷ್ಟಿಯಾಗಿದೆ. ಎಲ್ಲರೂ ಸರಕಾರದ ಸುತ್ತೋಲೆ ಸೂಚನೆ ಪಾಲಿಸಬೇಕು, ಹಿಜಾಬ್ ಗಾಗಿ ಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳು ಕೋರ್ಟ್ ಆದೇಶ ಧಿಕ್ಕರಿಸಿದ್ದಾರೆ. ಆದರೆ ಭವಿಷ್ಯದ ಚಿಂತನೆ ಮಾಡಿ, ನಿಯಮ ಉಲ್ಲಂಘನೆ […]
ಬ್ರಹ್ಮಾವರ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಶ್ರೀ ಮನ್ಮಹಾರಥೋತ್ಸವ
ಬ್ರಹ್ಮಾವರ: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇಂದು ಎಪ್ರಿಲ್ 22ರಂದು ಪೂರ್ವಾಹ್ನ ಶತ ರುದ್ರಾಭಿಷೇಕ, ಮಧ್ಯಾಹ್ನ ಶ್ರಿ ಮನ್ಮಹಾರಥಾರೋಹಣ, ಅನ್ನಸಂತರ್ಪಣೆ, ಸಂಜೆ ರಥೋತ್ಸವ, ಡಮರು ಸೇವೆ, ಕೆರೆ ಉತ್ಸವ, ಗಿರಿಜಾ ಕಲ್ಯಾಣ, ಭೂತ ಬಲಿ, ಎಪ್ರಿಲ್ 23ರಂದು ಬೆಳಗ್ಗೆ ತುಲಾಭಾರ, ರಾತ್ರಿ ಓಕುಳಿ ಸೇವೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.