ಇನ್ಮುಂದೆ ದಿನದ 24 ಗಂಟೆ ಹೋಟೆಲ್ ತೆರೆಯಲು ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ಬೆಂಗಳೂರಿನಲ್ಲಿ ಇನ್ಮುಂದೆ 24×7 ಹೋಟೆಲ್ಗಳು ತೆರೆದಿರಲು ಅವಕಾಶ ನೀಡಿ ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯ ರಾಜಧಾನಿಯಲ್ಲಿ ಇನ್ಮುಂದೆ ದಿನದ 24 ಗಂಟೆ, ವಾರದ 7 ದಿನಗಳು ಹೋಟೆಲ್ಗಳು ಕಾರ್ಯ ನಿರ್ವಹಿಸಲಿವೆ. ಸರ್ಕಾರ ಹೋಟೆಲ್, ಸ್ವೀಟ್ಸ್ಶಾಪ್, ಐಸ್ಕ್ರಿಂ ಶಾಪ್ಗೆ ಅನುಮತಿ ನೀಡಿದೆ. ಹಾಗೇಯೇ ಇನ್ಮುಂದೆ ರಾತ್ರಿಪೂರ್ತಿ ತೆರೆಯುವುದಕ್ಕೆ ಸರ್ಕಾರ ಒಪ್ಪಿಗೆಯನ್ನು ನೀಡಿದೆ.
ಹೆಬ್ರಿ: ಪ್ರಿಯಕರನಿಂದ ಪೋನ್ ಕರೆ ನಿರಾಕರಣೆ; ಪ್ರಿಯತಮೆ ವಿಷ ಸೇವಿಸಿ ಆತ್ಮಹತ್ಯೆ
ಕಾರ್ಕಳ: ಪ್ರಿಯಕರ ಪೋನ್ ಕರೆಯನ್ನು ಸ್ವೀಕರಿಸಿಲ್ಲವೆಂದು ಪ್ರಿಯತಮೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೆಬ್ರಿಯಲ್ಲಿ ನಡೆದಿದೆ. ಕುಸುಮಾ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಕುಸುಮಾರವರು ಸಂತೆಕಟ್ಟೆಯಲ್ಲಿ ಹೋಂ ನರ್ಸಿಂಗ್ ಕೆಲಸ ಮಾಡಿಕೊಂಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಯುವಕನನ್ನು ಪ್ರೀತಿಸುತ್ತಿದ್ದರು. ಆತನು ಆಕೆಯ ಪೋನ್ ಕರೆಯನ್ನು ಸ್ವೀಕರಿಸದ ಕಾರಣ ಹಾಗೂ ಇನ್ನು ಮುಂದೆ ಆತ ತನಗೆ ಸಿಕ್ಕುವುದಿಲ್ಲವೆಂದು ಬೇಸರದಿಂದ ಎ.11 ರಂದು ಬೆಳಿಗ್ಗೆ ವಿಷ ಪದಾರ್ಥವನ್ನು ಹಾಲಿನಲ್ಲಿ ಬೆರೆಸಿ ಕುಡಿದಿದ್ದಾರೆ. ಕುಸುಮಾ ಅವರನ್ನು ಅಜ್ಜರಕಾಡು ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ […]
ವಿಕಲಚೇತನರಿಗೆ ವಿಶೇಷ ಗುರುತು ಚೀಟಿ ವಿತರಣೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ವಿಕಲಚೇತನರು ಸರ್ಕಾರಿ ಮತ್ತು ಸರ್ಕಾರೇತರ ಸೌಲಭ್ಯ ಪಡೆಯಲು, ವಿಶೇಷ ಗುರುತು ಚೀಟಿ ವಿತರಿಸುವ ಕಾರ್ಯಕ್ರಮದ ಉದ್ಘಾಟನೆಯನ್ನು ಸೋಮವಾರ ನಗರಸಭಾ ಕಚೇರಿಯಲ್ಲಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ನೆರವೇರಿಸಿದರು. ಏ.20 ಮತ್ತು 21 ರಂದು ಬಡಗುಬೆಟ್ಟು ಉಪಕಚೇರಿ, ಏ.22 ಮತ್ತು 25 ರಂದು ಮಣಿಪಾಲ ಉಪಕಚೇರಿ, ಏ.26 ಮತ್ತು 27 ರಂದು ಹೆರ್ಗಾ ಉಪ ಕಚೇರಿ, ಏ.28 ಮತ್ತು 29 ರಂದು ಮಲ್ಪೆ ಉಪಕಚೇರಿ ಹಾಗೂ ಏ. 30 ಮತ್ತು ಮೇ. […]
ನಗದು, ಆಭರಣಗಳನ್ನು ಸುಲಿಗೆ ಮಾಡಿದ್ದ ಆರೋಪಿಗಳಿಗೆ ಶಿಕ್ಷೆ
ಉಡುಪಿ: ಮನೆ ಹಾಗೂ ಅಂಗಡಿಯಲ್ಲಿದ್ದ ನಗದು, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ಗಳನ್ನು ಸುಲಿಗೆ ಮಾಡಿದ್ದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2008 ಡಿಸೆಂಬರ್ 8 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಉಡುಪಿಯ ಮಾರಾಳಿ ಗ್ರಾಮದ ಉಮಾನಾಥ ಶೆಟ್ಟಿ, ಬೆಂಗಳೂರಿನ ಮಾರತ್ ಹಳ್ಳಿಯ ಶ್ರೀಧರ್ ಆಲಿಯಾಸ್ ಪ್ರಕಾಶ್, ಹಾಸನದ ಸುನೀಲ್ ಕುಮಾರ್ ಹಾಗೂ ಮಂಗಳೂರು ಕಂದಾವರ ಗ್ರಾಮದ ಸಂತೋಷ್ ಅಲಿಯಾಸ್ ಅಲ್ವಿನ್ ಪಿಂಟೋ ಎಂಬ ನಾಲ್ಕು […]
ಉಡುಪಿ: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ
ಉಡುಪಿ: ಮಲ್ಪೆ ಬಂದರಿನ ಮಂಜುಧಕ್ಕೆಯ ನೀರಿನಲ್ಲಿ ಏಪ್ರಿಲ್ 10 ರಂದು ಬೆಳಗ್ಗೆ 8.30 ರ ಸುಮಾರಿಗೆ, ಸುಮಾರು 50 ರಿಂದ 55 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿರುತ್ತದೆ. ಮೃತರ ವಾರಾಸುದಾರರು ಯಾರಾದರೂ ಇದ್ದಲ್ಲಿ ಮಲ್ಪೆ ಪೋಲೀಸ್ ಠಾಣೆಯ ಉಪನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.