ಅಜೆಕಾರು; ಪತಿಯ ಆಪರೇಷನ್ ಗೆ ಹಣವಿಲ್ಲದ ಕಾರಣಕ್ಕಾಗಿ ಮನನೊಂದ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ

ಅಜೆಕಾರು; ಪತಿಯ ಆಪರೇಷನ್ ಗೆ ಹಣ ಹೊಂದಿಸಲು ಆಗದ ಕಾರಣ ಮಹಿಳೆಯೊಬ್ಬರು ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಅಂಡಾರು ಗ್ರಾಮದ ಬಾಳೆಹಿತ್ಲು ಎಂಬಲ್ಲಿ ನಡೆದಿದೆ. ಮೃತರನ್ನು ಅಂಡಾರು ಗ್ರಾಮದ ಬಾಳೆಹಿತ್ಲು ನಿವಾಸಿ 45 ವರ್ಷದ ವನಿತಾ ಎಂದು ಗುರುತಿಸಲಾಗಿದೆ. ವನಿತಾ ಅವರ ಪತಿ ಸತೀಶ್ ಎನ್. ರಾವ್ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಆಪರೇಷನ್ ಮಾಡಬೇಕೆಂದು ವೈದ್ಯರು ತಿಳಿಸಿದ್ದಾರೆ. ಅದರಂತೆ ಆಪರೇಷನ್ ಗೆ ಹಣದ ವ್ಯವಸ್ಥೆ ಮಾಡಲು […]

ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆ ಘೋಷಣೆ

ಶಿವಮೊಗ್ಗ: ಕೊನೆಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿಪಕ್ಷಗಳ ಒತ್ತಡಕ್ಕೆ ಮಣಿದು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನ ಘೋಷಣೆ ಮಾಡಿದ್ದಾರೆ. ಇಂದು ಸಂಜೆ ದಿಢೀರ್ ತುರ್ತು ಸುದ್ದಿಗೋಷ್ಟಿ ನಡೆಸಿ, ರಾಜೀನಾಮೆ ನಿರ್ಧಾರವನ್ನು ಪ್ರಕಟಿಸಿದ್ದಾರೆ. ನಾಳೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಜೆ ವೇಳೆಗೆ ರಾಜೀನಾಮೆ ನೀಡೋದಾಗಿ ತಿಳಿಸಿದ್ದಾರೆ.

ಆಚಾರ್ಯಾಸ್ ಏಸ್: ಹತ್ತನೇ ತರಗತಿ ವಕೇಷನ ಬ್ಯಾಚ್ ಶುಭಾರಂಭ

ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶವನ್ನು ಗಳಿಸುತ್ತಿರುವ ಉಡುಪಿಯ ಆಚಾರ್ಯಾಸ್ ಏಸ್ ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ರಜಾ ದಿನದ ಶೈಕ್ಷಣಿಕ ತರಬೇತಿಯು ಶುಭಾರಂಭಗೊಂಡಿತು. ಒಂಬತ್ತನೇ ತರಗತಿ ಪೂರೈಸಿ ಹತ್ತನೇ ತರಗತಿಗೆ ಪಾದಾರ್ಪಣೆಗೈಯುತ್ತಿರುವ ವಿದ್ಯಾರ್ಥಿಗಳಿಗೆ ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಹಾಗೂ ಮ್ಯಾತ್ಸ್ ವಿಷಯವಾಗಿ ನಿರಂತರ ಒಂದು ವರ್ಷಗಳ ಕಾಲ ಜರಗಲಿರುವ ತರಬೇತಿಯನ್ನು ದೀಪ ಬೆಳಗಿಸಿ ಏಸ್ ಸಂಸ್ಥೆಯ ಪ್ರಾಂಗಣದಲ್ಲಿ ಶುಭಾರಂಭಗೊಳಿಸಲಾಯಿತು. ಸಂಸ್ಥೆಯ ಶ್ರೀ ಪ್ರಹ್ಲಾದ ಆಚಾರ್ಯರು ಶ್ರೀಮತಿ ಗೀತಾ ಆಚಾರ್ಯರು ಶ್ರೀ […]

ಅಂಬೇಡ್ಕರ್ ಅವರಿಂದ ಎಲ್ಲಾ ಕಾಲಕ್ಕೂ, ಎಲ್ಲರಿಗೂ ಸೌಲಭ್ಯ ನೀಡುವ ಸಂವಿಧಾನ ರಚನೆ: ಉಸ್ತುವಾರಿ ಸಚಿವ ಅಂಗಾರ

ಉಡುಪಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ಅವರು ತಾನು ಅನುಭವಿಸಿದ ಬಡತನ, ಅಸಮಾನತೆಯ ನೋವುಗಳನ್ನು ಅರಿತು, ಸಂವಿಧಾನ ರಚನಾ ಸಮಯದಲ್ಲಿ, ದೇಶದಲ್ಲಿ ಎಲ್ಲಾ ಕಾಲಕ್ಕೂ ಪ್ರತಿಯೊಬ್ಬರಿಗೂ ಅನುಕೂಲವಾಗುವಂತಹ ಸೌಲಭ್ಯಗಳು ದೊರೆಯುವ ರೀತಿಯಲ್ಲಿ ಸಂವಿಧಾನವನ್ನು ರಚನೆ ಮಾಡಿದ್ದಾರೆ ಎಂದು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ  ಸಚಿವ ಎಸ್. ಅಂಗಾರ ಹೇಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಆವರಣದಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಅಟಲ್ ಬಿಹಾರಿ […]

ಸಹನಾ ಗುಣಗಳಿದ್ದರೆ ಶಾಂತಿಯುತ ಸಮಾಜ ನಿರ್ಮಾಣ: ಉಸ್ತುವಾರಿ ಸಚಿವ ಅಂಗಾರ

ಉಡುಪಿ: ಯಾವುದೇ ಮತ, ಪಂಗಡ, ಸಮುದಾಯ, ಪಂಥಗಳ ಆಚರಣೆಯಲ್ಲಿ ಭಗವಾನ್ ಮಹಾವೀರರು ತಿಳಿಸಿದ ಅಹಿಂಸೆ ಮತ್ತು ಸಹನಾ ಗುಣಗಳನ್ನೂ ಪ್ರತಿಯೊಬ್ಬರೂ ಪಾಲಿಸಿದ್ದಲ್ಲಿ ಸಮಾಜ ಹಾಗೂ ದೇಶದಲ್ಲಿ ಶಾಂತಿಯುತ ವಾತಾವರಣ ಇರಲಿದೆ ಎಂದು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಕೋರ್ಟ್ ಹಾಲ್ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ವತಿಯಿಂದ ಆಯೋಜಿಸಲಾದ ಭಗವಾನ್ ಮಹಾವೀರ […]