ರೋಗ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
ಉಡುಪಿ: ಯಾವುದೇ ರೋಗ ಬಂದು ಚಿಕಿತ್ಸೆ ಪಡೆಯುವ ಬದಲು ರೋಗ ಬಾರದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ರೋಗಗಳಿಂದ ದೂರವಿರಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ನಗರದ ಜಿಲ್ಲಾ ಪಂಚಾಯತ್ನ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಡೆಂಗ್ಯೂ ಮತ್ತು ಮಲೇರಿಯಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೆಚ್ಚು ರೋಗಗಳು ಬರುವ ಸಾಧ್ಯತೆ ಹೆಚ್ಚಿದ್ದು, ಮಳೆ ನೀರು ಎಲ್ಲೆಂದರಲ್ಲಿ ನಿಲ್ಲುವುದರಿಂದ ಸೊಳ್ಳೆಗಳು ಸಂತಾನೋತ್ಪತ್ತಿಗೊಳ್ಳುವುದರೊಂದಿಗೆ […]
ದಟ್ಟ ಕಾಡಿನಲ್ಲಿ “ಗೊರಂಕ್’ ಎಂಬ ಶಬ್ಧ ಕೇಳಿದಾಗ: ಸಂದೇಶ್ ಸಾಲ್ಯಾನ್ ಬರೆದ ಹಂಟಿಂಗ್ ಪ್ರಸಂಗ
ಶಿಕಾರಿಗೆ ಹೊರಟವರನ್ನು ನೋಡುವಾಗ ನನಗೆ ಅದೆಂಥದೋ ಖುಷಿ-ಕುತೂಹಲ. ಕೇಪಿನ ಕೋವಿಯ ನಳಿಕೆಗೆ ತೆಂಗಿನ ಒಣಸಿಪ್ಪೆಯ ನಾರಿನ ಜತೆಗೆ ಗುಂಡುಗಳನ್ನು ತುಂಬಿ ಕಬ್ಬಿಣದ ಸರಳಿನಿಂದ ಒಳಗೆ ತಳ್ಳುವ ಪ್ರಕ್ರಿಯೆಯಲ್ಲಿ ಬೇಟೆಗಾರನಲ್ಲಿ ಕಂಡುಬರುವ ತನ್ಮಯತೆ ಬಹಳ ಸುಂದರವಾಗಿರುತ್ತದೆ. ಭರ್ಜರಿ ಊಟದ ಬಳಿಕ ತಾಂಬೂಲ ಹಾಕಿಕೊಳ್ಳುವವರ ಹಾಗೆ. ಸಾಮಾನ್ಯವಾಗಿ ಬೇಟೆಗಾರರು ಬೇರೆಯವರ ಕೈಗೆ ತಮ್ಮ ಕೋವಿಯನ್ನು ಕೊಡುವುದಿಲ್ಲ. ಆದರೂ ನನ್ನ ಕುತೂಹಲ ನೋಡಿ ನನ್ನ ಪರಿಚಯಸ್ಥರೊಬ್ಬರು ನನ್ನ ಕೈಗೆ ಖಾಲಿ ಕೋವಿ ಕೊಟ್ಟಿದ್ದರು. ಬಹಳ ಖುಷಿಯಿಂದ ಎತ್ತಿಕೊಂಡು, ಸುಮ್ಮನೆ ಒಂದೆಡೆ ಗುರಿ […]
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಈಶ್ವರಪ್ಪ
ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವುದಿಲ್ಲ’ ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಅವರು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದರಲ್ಲಿ ಷಡ್ಯಂತ್ರವಿದ್ದು, ಈ ಬಗ್ಗೆ ತನಿಖೆ ನಡೆಯಬೇಕು. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಮಗ್ರ ತನಿಖೆ ನಡೆಸಲು ಮನವಿ ಮಾಡಿದ್ದೇನೆ. ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮಾತನಾಡುವೆ ಎಂದು ಅವರು ಹೇಳಿದರು. ಕಾನೂನು ಬಾಹಿರವಾಗಿ […]
ಎ.15-19: ಕಚ್ಚೂರು ಶ್ರೀ ಮಲ್ತಿ ದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ವಾರ್ಷಿಕ ಜಾತ್ರೆ
ಬ್ರಹ್ಮಾವರ: ಕಾರಣಿಕ ಕ್ಷೇತ್ರ ಕಚ್ಚೂರು ಶ್ರೀ ಮಲ್ತಿ ದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದ ವಾರ್ಷಿಕ ಜಾತ್ರೆ ಎ. 15ರಿಂದ 19ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹರಕೆ ಸಮರ್ಪಣೆ ಮಾಡುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಎ.15 ರಂದು ಅಪರಾಹ್ನ 3ಕ್ಕೆ ಹೊರ ಕಾಣಿಕೆ ನಡೆಯಲಿದ್ದು, ವಿವಿಧ ಕಡೆಗಳಿಂದ ಬಂದ ಹಸಿರು ಹೊರ ಕಾಣಿಕೆಯನ್ನು ಬಾರ್ಕೂರು ಪೇಟೆಯಿಂದ ಮೆರವಣಿಗೆ ಮೂಲಕ ಶ್ರೀಕ್ಷೇತ್ರಕ್ಕೆ ಸಮರ್ಪಿಸಲಾಗುವುದು. ಸಂಜೆ ವಿವಿಧ ಭಜನ ತಂಡಗಳಿಂದ ಭಕ್ತಿ ಹೆಜ್ಜೆ […]
ಯು.ಡಿ.ಐ.ಡಿ ಕಾರ್ಡ್ ಪಡೆಯಲು ನೋಂದಣಿ ಶಿಬಿರ
ಉಡುಪಿ: ವಿಕಲಚೇತನರು ಸರ್ಕಾರಿ ಮತ್ತು ಸರ್ಕಾರೇತರ ಸೌಲಭ್ಯ ಪಡೆಯಲು ವಿಶೇಷ ಗುರುತು ಚೀಟಿ (ಯು.ಡಿ.ಐ.ಡಿ ಕಾರ್ಡ್) ಗಾಗಿ ಏ.18 ಮತ್ತು 19 ರಂದು ಉಡುಪಿ ನಗರಸಭಾ ಕಚೇರಿ, 20 ಮತ್ತು 21 ರಂದು ಬಡಗುಬೆಟ್ಟು ನಗರಸಭಾ ಉಪಕಚೇರಿ, 22 ಮತ್ತು 25 ರಂದು ಮಣಿಪಾಲ ನಗರಸಭಾ ಉಪಕಚೇರಿ, 26 ಮತ್ತು 27 ರಂದು ಹೆರ್ಗಾ ನಗರಸಭಾ ಉಪ ಕಚೇರಿ, 28 ಮತ್ತು 29 ರಂದು ಮಲ್ಪೆ ನಗರಸಭಾ ಕಚೇರಿ ಹಾಗೂ ಏ. 30 ಮತ್ತು ಮೇ.2 ರಂದು […]