ಸಗ್ರಿ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ; ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪುತ್ತಿಗೆ ಶ್ರೀ ಚಾಲನೆ
ಉಡುಪಿ: ಸಗ್ರಿ ಶ್ರೀ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಅಷ್ಟಬಂದ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವದ ಅಂಗವಾಗಿ ಆಯೋಜಿಸಿರುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಶುಕ್ರವಾರ ಚಾಲನೆ ನೀಡಿದರು. ಶಾಸಕ ಕೆ. ರಘುಪತಿ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಆನೆಗುಡ್ಡೆ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸೂರ್ಯನಾರಾಯಣ ಉಪಾಧ್ಯ, ಸಗ್ರಿ ಶ್ರೀ ವಾಸುಕಿ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗೋಪಾಲಕೃಷ್ಣ ಸಾಮಗ, ಉಡುಪಿ ನಗರ ಸಭೆಯ […]
ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಎಂದೂ ದೇಶಕ್ಕೆ ಅಪಾಯಕಾರಿ: ಕುಯಿಲಾಡಿ
ಉಡುಪಿ: ಕೇವಲ ಒಂದೇ ವರ್ಗದ ಓಲೈಕೆ ರಾಜಕಾರಣ ಮಾಡುತ್ತಾ ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಎಂದೂ ದೇಶಕ್ಕೆ ಅಪಾಯಕಾರಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಎರಡೆರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್, ಅವರ ಸಾಧನೆ, ಘನತೆ, ಅರ್ಹತೆಗೆ ಭಾರತ ರತ್ನ ಗೌರವವನ್ನೂ ನೀಡದೆ. ಕನಿಷ್ಠ ಅವರ ಅಂತಿಮ ಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ನೀಡದೇ ಅವಮಾನಿಸಿರುವುದು ಕರಾಳ ಇತಿಹಾಸವಾಗಿದೆ. ಮಾಜಿ […]
ಎ.9: ನೀರೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ 42ನೇ ವರ್ಷದ ಭಜನಾ ಮಂಗಲೋತ್ಸವ
ಬೈಲೂರು: ಕಾರ್ಕಳ ತಾಲೂಕಿನ ನೀರೆ ಜಡ್ಡಿನಂಗಡಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯ 42ನೇ ವರ್ಷದ ಭಜನಾ ಮಂಗಲೋತ್ಸವ ಎ.9 ಶನಿವಾರ ಸಂಜೆ ಗಂಟೆ 6 ಗೋಧೂಳಿ ಮುಹೂರ್ತದಲ್ಲಿ ನೀರೆ ಜಡ್ಡಿನಂಗಡಿಯಲ್ಲಿ ನಡೆಯಲಿದೆ. ಸಂಜೆ 6 ರಿಂದ ಭಜನೆ ಪ್ರಾರಂಭವಾಗಿ ಭಾನುವಾರ ಮುಂಜಾನೆ ಗಂಟೆ 4:30 ರ ತನಕ ಭಜನಾ ಮಂಗಲೋತ್ಸವ ವಿವಿಧ ಮಂಡಳಿಗಳಿಂದ ನಡೆಯಲಿದ್ದು, ಸರ್ವರಿಗೂ ಆದರದ ಸ್ವಾಗತ ಕೋರಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾಗಿ ಹಿರಿಯ ರಂಗಕರ್ಮಿ ಜೀವನ್ ರಾಂ ಸುಳ್ಯ ಅಧಿಕಾರ ಸ್ವೀಕಾರ
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕಾರ್ಕಳ ಯಕ್ಷರಂಗಾಯಣದ ನಿರ್ದೇಶಕರಾಗಿ ಹಿರಿಯ ರಂಗಕರ್ಮಿ ಜೀವನ್ ರಾಂ ಸುಳ್ಯ ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರಿಂದ ಅಧಿಕಾರ ಸ್ವೀಕರಿಸಿದರು. ಜೀವನ್ ರಾಂ ಅವರು ಹಲವು ಬಾರಿ ರಾಷ್ಟ್ರೀಯ ಮಟ್ಟದ ನಾಟಕಗಳಲ್ಲಿ ಪ್ರಶಸ್ತಿ ಪಡೆದಿದ್ದು, ಅವರ ನಿರ್ದೇಶನದ ಮಹಾಮಾಯಿ, ಪಂಜರ ಶಾಲೆ, ಧೂತವಾಕ್ಯ ಹಾಗೂ ಇನ್ನಿತರ ಹಲವು ನಾಟಕಗಳು ಜನಪ್ರಿಯವಾಗಿದೆ. ಮೂಲತ: ಯಕ್ಷಗಾನ ಕುಟುಂಬದಿಂದ ಬಂದ ಜೀವನ್ ರಾಂ ನಾಟಕಗಳಲ್ಲಿ ಯಕ್ಷಗಾನ, […]
ಎಪ್ರಿಲ್ 11 ರಿಂದ ಮಣಿಪಾಲ ಶ್ರೀ ಶಾರದಾ ಇನ್ಸ್ಟಿಟ್ಯೂಟ್‍ನಲ್ಲಿ ಮಕ್ಕಳಿಗೆ “ಚಿಣ್ಣರ ಜಾಗರ” ಬೇಸಿಗೆ ಶಿಬಿರ
ಮಣಿಪಾಲ: ಇತ್ತೀಚಿನ ಟಿ.ವಿ, ಮೊಬೈಲ್ ಹಾಗೂ ಇಂಟರ್‍ನೆಟ್ ಆಕರ್ಷಣೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮಕ್ಕಳಲ್ಲಿ ಶಾರೀರಿಕ ಶ್ರಮದ ಬಗ್ಗೆ ಅರಿವೇ ಇಲ್ಲದಂತಾಗಿದೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿ ಮಣಿಪಾಲದ ಶ್ರೀ ಶಾರದಾ ಇನ್ಸ್ಟಿಟ್ಯೂಟ್‍ನಲ್ಲಿ ಎಪ್ರಿಲ್ 11 ರಿಂದ ಎಪ್ರಿಲ್ 23ರ ವರೆಗೆ 8 ರಿಂದ 13 ವರ್ಷದ ಒಳಗಿನ ಮಕ್ಕಳಿಗೆ ಚಿಣ್ಣರ ಜಾಗರ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಈ ಶಿಬಿರವು ಕಥೆ, ಪ್ರಹಸನ, ಡಾನ್ಸ್, ಮುಖವಾಡ ಹಾಗೂ ಕ್ರಾಫ್ಟ್ ತಯಾರಿಕೆ, ಚಿತ್ರಕಲೆ, ಬ್ರೈನ್ ಟ್ರೈನ್, ಆಟೋಟ […]