ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ: ಇಂದು ಸಂಜೆ ಹೊರಕಾಣಿಕೆ ಮೆರವಣಿಗೆ
ಉಡುಪಿ: ಉಡುಪಿ ಕುಂಜಿಬೆಟ್ಟು ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನ ನವೀಕೃತ ನಾಗಸನ್ನಿದಾನ ಸಮರ್ಪಣೆ ಅಷ್ಟಬಂದ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಪ್ರಯುಕ್ತ ಎ.7 ರಂದು ಸಂಜೆ 5.30 ಕ್ಕೆ ಹೊರೆಕಾಣಿಕೆ ಮೆರವಣಿಗೆ ಉಡುಪಿಯ ಶ್ರೀಕೃಷ್ಣಮಠದ ರಾಜಾಂಗಣದ ಬಳಿ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥಶ್ರೀಪಾದರು ಚಾಲನೆ ನೀಡುವರು. ಹೊರೆಕಾಣಿಕೆ ಮೆರವಣಿಗೆಯು ಕಲ್ಸಂಕ, ಕಡಿಯಾಳಿ ಮೂಲಕ ಸಗ್ರಿ ದೇವಸ್ಥಾನಕ್ಕೆ ತಲುಪಲಿದೆ.
ಏ.12 ರಂದು ಪಿಂಚಣಿ ಅದಾಲತ್
ಉಡುಪಿ: ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮೈತ್ರಿ ಯೋಜನೆ ಹಾಗೂ ಮನಸ್ವಿನಿ ಯೋಜನೆಗಳಿಗೆ ಸಂಬಂಧಿಸಿದಂತೆ, ಉಡುಪಿ ತಾಲೂಕು ಹೋಬಳಿಯ ಕಂದಾಯ ಗ್ರಾಮಗಳ ಪಿಂಚಣಿ ಅದಾಲತ್ ಕಾರ್ಯಕ್ರಮವು ಏಪ್ರಿಲ್ 12 ರಂದು ಬೆಳಗ್ಗೆ 11.30 ಕ್ಕೆ ಉಡುಪಿ ತಾಲೂಕು ಕಚೇರಿಯಲ್ಲಿ, ಕುಂದಾಪುರ ಸಹಾಯಕ ಕಮೀಷನರ್ ಕೆ. ರಾಜು ಇವರ ಉಪಸ್ಥಿತಿಯಲ್ಲಿ ನಡೆಯಲಿದೆ. ಪಿಂಚಣಿ ಸೌಲಭ್ಯ ಪಡೆಯಲು ಇಚ್ಛಿಸುವವರು ಅಥವಾ […]
ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇಗುಲದ ಬ್ರಹ್ಮಕುಂಭಾಭಿಷೇಕ
ಉಡುಪಿ: ಕನ್ನರ್ಪಾಡಿಯ ಜಯದುರ್ಗಾ ಪರಮೇಶ್ವರಿ ಸಮಸ್ತ ಸಜ್ಜನರ ದುಃಖ, ದುರಿತಗಳನ್ನು ಪರಿಹಾರ ಮಾಡುವ ಶಕ್ತಿ ದೇವತೆ ಎಂದು ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ಸ್ವಾಮೀಜಿ ಹೇಳಿದರು. ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರೀ ದೇಗುಲದ ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ದೇಗುಲದ ಶ್ರೀ ಜಯದುರ್ಗಾ ಮಂಟಪದಲ್ಲಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. ಜೀವನದಲ್ಲಿ ಆಧ್ಯಾತ್ಮಿಕತೆ ಅಳವಡಿಸಿಕೊಂಡಲ್ಲಿ ನೆಮ್ಮದಿ ಸಾಧಿಸಲು ಸಾಧ್ಯ. ಆಧ್ಯಾತ್ಮಿಕತೆಯ ಚಿಂತನೆ ಬಹಳಷ್ಟು ಆಗಬೇಕಿದೆ. ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ಕ್ಷೇತ್ರವು ಕೋವಿಡ್ ಸಂದರ್ಭದಲ್ಲಿಯೂ ಬಡವರ ಹಸಿವನ್ನು […]
ಎ.8-11: ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇವರ ವತಿಯಿಂದ ‘ರಂಗೋತ್ಸವ’ ಕಾರ್ಯಕ್ರಮ
ಬ್ರಹ್ಮಾವರ: ಮಂದಾರ(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ-ಗಾಂಧಿನಗರ ಇವರು ಆಯೋಜಿಸಿರುವ “ರಂಗೋತ್ಸವ” ಕಾರ್ಯಕ್ರಮವು ನಾಲ್ಕು ದಿನಗಳ ಕಾಲ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆಯಲಿದೆ. ‘ನಾದ ಮಣಿನಾಲ್ಕೂರ’ ಅವರ ಅರಿವಿನ ಹಾಡುಗಳೊಂದಿಗೆ ಎ.8 ರಂದು ಸಂಜೆ 6:30 ಕ್ಕೆ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದ್ದು, ಮಂದಾರ ತಂಡದ ಕಲಾವಿದರು ಪ್ರಸ್ತುತಪಡಿಸುವ ಜಿ.ಎಸ್.ಭಟ್ಟ ಸಾಗರ ಅವರ ರಚನೆಯ ರೋಹಿತ್.ಎಸ್ ಬೈಕಾಡಿ ನಿರ್ದೇಶಿಸಿರುವ “ಕೊಳ್ಳಿ” ನಾಟಕವು ಪ್ರದರ್ಶನಗೊಳ್ಳಲಿದೆ. ಎ.9 ರಂದು ಅರೆಹೊಳೆ ಪ್ರತಿಷ್ಠಾನ ಇವರು ಪ್ರಸ್ತುತ ಪಡಿಸುವ ರೋಹಿತ್ […]
ಏ.11: ಜಿಲ್ಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಪ್ರವಾಸ
ಉಡುಪಿ: ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್ 11 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಕಾಪು ತಾಲೂಕು ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು. 3 ಗಂಟೆಗೆ ಬನ್ನಂಜೆಯಲ್ಲಿ ಡಾ. ಬನ್ನಂಜೆ ಗೋವಿಂದ ಆಚಾರ್ಯ ಸ್ಮಾರಕ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, 3.30 ಕ್ಕೆ ಬನ್ನಂಜೆಯ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಉದ್ಘಾಟನೆ ಮತ್ತು ಸಾರ್ವಜನಿಕ ಕಾರ್ಯಕ್ರಮ, ಸಂಜೆ 5.30 ಕ್ಕೆ ಕುಂಜಿಬೆಟ್ಟುವಿನಲ್ಲಿ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ […]