ಮಣಿಪಾಲ: ಪಾದಚಾರಿಗೆ ಕಾರು ಡಿಕ್ಕಿ; ಮೂರು ಕಾರುಗಳು ಜಖಂ

ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆ ಬದಿ ನಿಲ್ಲಿಸಿದ್ದ ಮೂರು ಕಾರುಗಳಿಗೆ ಹಾನಿ ಮಾಡಿರುವ ಘಟನೆ ಮಣಿಪಾಲ ಬಬ್ಬುಸ್ವಾಮಿ‌ ದೈವಸ್ಥಾನದ ಬಳಿ ಇಂದು ಮಧ್ಯಾಹ್ನ ನಡೆದಿದೆ. ಹುಂಡೈ ಗ್ರಾಂಡ್ ಐ10 ಕಾರು ಮಣಿಪಾಲದಿಂದ ಪರ್ಕಳದ ಕಡೆಗೆ ಹೋಗುತ್ತಿದ್ದು, ಮಣಿಪಾಲ ಬಬ್ಬುಸ್ವಾಮಿ ದೈವಸ್ಥಾನದ ಬಳಿ ಸಮೀಪಿಸುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಡಿಕ್ಕಿಯಾಗಿದೆ. ಬಳಿಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರೊಂದಕ್ಕೆ […]

ನಿವೃತ್ತ ಪೊಲೀಸರ ಆರೋಗ್ಯ ಯೋಜನೆ ಸಪರ್ಮಕವಾಗಿ ಜಾರಿಯಾಗಲಿ

ಉಡುಪಿ: ನಿವೃತ್ತ ಪೊಲೀಸರಿಗೆ ಸರಕಾರ ಜಾರಿಗೊಳಿಸಿರುವ ಆರೋಗ್ಯ ಭಾಗ್ಯ ಯೋಜನೆಯು ಇನ್ನಷ್ಟು ಪರಿಣಾಮಕಾರಿಯಾಗಿ, ಸಮರ್ಪಕವಾಗಿ ಜಾರಿಗೊಳ್ಳುವಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಿ.ಎಸ್.ಪಿ ನಿವೃತ್ತ ಸಹಾಯಕ ಪೊಲೀಸ್ ಉಪನಿರೀಕ್ಷಕ ಮ್ಯಾಥ್ಯೂ ಅರ್ಚಿಬಾಲ್ ಡಿ ಸೋಜಾ ಹೇಳಿದರು. ಅವರು ಶನಿವಾರ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ, ಉಡುಪಿಯ ಪೊಲೀಸ್ ಕವಾಯತು ಮೈದಾನ (ಚಂದು ಮೈದಾನ) ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ನಿವೃತ್ತ […]

ಕಾರ್ಕಳದಲ್ಲಿ ಮತ್ತೆ ಗೋ ಕಳ್ಳತನ: ದುಷ್ಕರ್ಮಿಗಳು ಕಾರಿನಲ್ಲಿ ದನ ಕದ್ದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕಾರ್ಕಳ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದ ಗೋಕಳ್ಳರು ಇದೀಗ ಮತ್ತೆ ಆ್ಯಕ್ಟಿವ್ ಆಗಿದ್ದಾರೆ. ಯುಗಾದಿ ಹಬ್ಬದ ದಿನದಂದೇ ಗೋಕಳ್ಳರು ಅಟ್ಟಹಾಸ ಮೆರೆದಿದ್ದಾರೆ. ಹೌದು, ಕಾರ್ಕಳ ಬಂಗ್ಲೆಗುಡ್ಡೆ ಶ್ರೀ ವಿದ್ಯಾಸರಸ್ವತಿ ಮಂದಿರದಲ್ಲಿ ಬಳಿ ಏ.2ರ ಶನಿವಾರ ಬೆಳಗಿನ ಜಾವ 2-45ರ ಸುಮಾರಿಗೆ ಕಾರೊಂದರಲ್ಲಿ ಬಂದ ಮೂವರು ದುಷ್ಕರ್ಮಿಗಳು ದನವೊಂದನ್ನು ಹಿಡಿದು ಕದ್ದೊಯ್ದಿದ್ದಾರೆ. ದನವನ್ನು ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗೋ ಕಳ್ಳರನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಕಾರ್ಕಳದ ವಿಶ್ವಹಿಂದು ಪರಿಷತ್- ಬಜರಂಗದಳ […]

ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯಿಂದ ಸ್ಪಂದನ ವಿಶೇಷ ಮಕ್ಕಳ ಶಾಲೆಗೆ ಭೇಟಿ

ಉಡುಪಿ: ಉಡುಪಿಯ ಕೊಳಗಿರಿಯಲ್ಲಿ ಕಾರ್ಯಚರಿಸುತ್ತಿರುವ ಸ್ಪಂದನ ವಿಶೇಷ ಮಕ್ಕಳ ಶಾಲೆಗೆ ಮಾ.31 ರಂದು ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯ ಪ್ರಾಂಶುಪಾಲೆ, ಪ್ರಶಿಕ್ಷಣಾರ್ಥಿ ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಭೇಟಿ ನೀಡಿದರು. ಅಲ್ಲಿನ ಮಕ್ಕಳಿಗೆ ಕ್ರಾಪ್ಟ್ ಹಾಗೂ ಮಾಂಟೆಸ್ಸರಿ ಸಲಕರಣೆಗಳ ಪ್ರಾತಿಕ್ಷಿತೆ ನೀಡಿದರು. ಈ ಸಂದರ್ಭದಲ್ಲಿ ಸ್ಪಂದನ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಜನಾರ್ಧನ್, ಟ್ರಸ್ಟಿಗಳಾದ ಶ್ರೀಯುತ ಉಮೇಶ್ ಹಾಗೂ ವಿವೇಕ್ ಕಾಮತ್‍ರವರು ಉಪಸ್ಥಿತರಿದ್ದರು.

ಕೋಮು ಸಾಮರಸ್ಯ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪಿಗೆ ಶಿಕ್ಷೆ

ಉಡುಪಿ: ಮಸೀದಿಗೆ ಅಕ್ರಮ ಪ್ರವೇಶ ಮಾಡಿ, ಮಸೀದಿಯ ಕಿಟಕಿಗೆ ಹಾನಿ ಮಾಡಿ, ಕೋಮು ಸಾಮರಸ್ಯಕ್ಕೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2017 ಜನವರಿ 29 ರಂದು ಉಡುಪಿ ಪುತ್ತೂರಿನ ಕೊಡಂಕೂರು ಗ್ರಾಮದ ನಿವಾಸಿ ಅಂಕಿತ್ ಕುಂಪಲ ಎಂಬಾತನು, ನಗರದ ಅಂಬಲಪಾಡಿ ಗ್ರಾಮದ ಆದಿ ಉಡುಪಿಯ ಮಸ್ಜಿದ್ ಇ ನುರ್‌ವುಲ್ಲಾ ಇಸ್ಲಾಂ ಮಸೀದಿಗೆ ಅಕ್ರಮ ಪ್ರವೇಶ ಮಾಡಿ, […]