ಇನ್ನು ಮುಂದೆ 28 ದಿನವಲ್ಲ 30 ದಿನ ರೀಚಾರ್ಜ್ ವ್ಯಾಲಿಡಿಟಿ: ಟ್ರಾಯ್ ಆದೇಶ

ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI ) ಟೆಲಿಕಾಂ ಕಂಪನಿಗಳ ಮೇಲೆ ದೊಡ್ಡ ಕ್ರಮ ಕೈಗೊಂಡಿದ್ದು, ಇನ್ನೂ ಮುಂದೆ ಟ್ರಾಯ್ ಟೆಲಿಕಾಂ ಕಂಪನಿಗಳಿಗೆ ಹೊಸ ಆದೇಶವನ್ನು ಹೊರಡಿಸಿದೆ. ಅದರ ಪ್ರಕಾರ ಕಂಪನಿಗಳು ಇಡೀ ತಿಂಗಳು ಮಾನ್ಯವಾಗಿರುವ ಕನಿಷ್ಠ ಒಂದು ಯೋಜನೆಯನ್ನು ಇರಿಸಿಕೊಳ್ಳಬೇಕು ಎಂದು ಹೇಳಿದೆ. ಟೆಲಿಕಾಂ ಕಂಪನಿಗಳು ಕನಿಷ್ಠ ಒಂದು ಪ್ಲಾನ್, ಒಂದು ವಿಶೇಷ ಟ್ಯಾರಿಫ್ ವೋಚರ್ ಮತ್ತು ಒಂದು ವಿಶೇಷ ರೀಚಾರ್ಜ್ ಪ್ಲಾನ್‌ಅನ್ನು ಇಡೀ ತಿಂಗಳು ವ್ಯಾಲಿಡಿಟಿಯೊಂದಿಗೆ ಇಟ್ಟುಕೊಳ್ಳಬೇಕು ಎಂದು ಟ್ರಾಯ್ ಹೇಳಿದೆ. ಈ […]

ಪುತ್ತಿಗೆ ಶ್ರೀ ನಡೆದಾಡುವ ಭಗವದ್ಗೀತೆ: ಪೇಜಾವರ ಶ್ರೀ 

ಬೆಂಗಳೂರು: ಪುತ್ತಿಗೆ ಶ್ರೀಪಾದರು ನಡೆದಾಡುವ ಭಗವದ್ಗೀತೆ. ಭಗವಂತನ ಸಂದೇಶವನ್ನು ವಿದೇಶದ ಭಕ್ತರಿಗೂ ಸಾರಿದವರು ಎಂದು ಪೇಜಾವರಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದರು. ಗುರುವಾರ ನಗರದ. ಬಸವನಗುಡಿ ರಾಮಕೃಷ್ಣ ಆಶ್ರಮದ ಸಮೀಪದ ಗುರುನರಸಿಂಹ ಕಲ್ಯಾಣಮಂಟಪದಲ್ಲಿ ಶ್ರೀಪುತ್ತಿಗೆ ಸುಗುಣೇಂದ್ರತೀರ್ಥ ಸ್ವಾಮೀಜಿ ಅವರ ಬೆಂಗಳೂರು ಅಭಿಮಾನಿಗಳು ಮತ್ತು ಶಿಷ್ಯವೃಂದದವರು ಆಯೋಜಿಸಿದ್ದ `ಗುರು ವಂದನೋತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶ್ರೀಗಳದ್ದು. ಮೇರು ವ್ಯಕ್ತಿತ್ವ. ಅವರ ಮುಂದೆ ನಾವೆಲ್ಲರೂ ಕುಬ್ಜರಾಗಿ ಕಾಣುತ್ತೇವೆ. ಸುಜ್ಞಾನೇಂದ್ರತೀರ್ಥ ಅನಂತರದಲ್ಲಿ ಮಠವನ್ನು ಸಮರ್ಥವಾಗಿ ನಿರ್ವಹಿಸಿದರು ಎಂದರು. ಆದರ್ಶ ಗುರು ಶಿಷ್ಯರು : […]

ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 250 ರೂ. ಏರಿಕೆ

ನವದೆಹಲಿ: ದೇಶದಲ್ಲಿ ತೈಲ ಕಂಪನಿಗಳು ವಾಣಿಜ್ಯ ಅನಿಲ ಸಿಲಿಂಡರ್ ಗಳ ಬೆಲೆಯನ್ನು ಹೆಚ್ಚಿಸಿದೆ. ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯನ್ ಆಯಿಲ್ ( ಐಒಸಿ) 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 250 ರೂ. ಗೆ ಏರಿಸಿದೆ. ದೆಹಲಿಯಲ್ಲಿ ಅದನ್ನು ಮರುಭರ್ತಿ ಮಾಡಲು 2253 ರೂ. ಅದೇ ಸಮಯದಲ್ಲಿ, ಕೋಲ್ಕತಾದಲ್ಲಿ ಈಗ 2087 ರೂ.ಗಳ ಬದಲು 2351 ರೂ.ಗಳನ್ನು ಖರ್ಚು ಮಾಡಬೇಕಾಗುತ್ತದೆ ಮತ್ತು ಮುಂಬೈನಲ್ಲಿ 1955 ರೂ. ಗಳ ಬದಲು, ಇಂದಿನಿಂದ 2205 ರೂ., […]

ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ: ಅವಧಿ ವಿಸ್ತರಣೆ

ಉಡುಪಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಸಕ್ತ ಸಾಲಿಗೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ಹಾಗೂ ಮೆರಿಟ್- ಕಂ- ಮೀನ್ಸ್ ವಿದ್ಯಾರ್ಥಿ ವೇತನಕ್ಕೆ ಆನ್‌ಲೈನ್ ಮೂಲಕ  https://ssp.postmatric.karnataka.gov.in  ನಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 30 ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ವಿದ್ಯಾರ್ಥಿ ವೇತನದ ಕುರಿತು ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವೆಬ್‌ಸೈಟ್  https://dom.karnataka.gov.in/udupi/public ಸಹಾಯವಾಣಿ ಸಂಖ್ಯೆ : 8277799990 ಅಥವಾ ಉಡುಪಿ […]

ಅರ್ಜಿ ಸಲ್ಲಿಕೆ: ಅವಧಿ ವಿಸ್ತರಣೆ

ಉಡುಪಿ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು, ಪ್ರವರ್ಗ-1, ಅಲೆಮಾರಿ ಹಾಗೂ ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ ಹಾಗೂ ವಿದ್ಯಾಸಿರಿ- ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 30 ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ  www.ssp.postmatric.karnataka.gov.in ವೆಬ್‌ಸೈಟ್ ಅಥವಾ ಇಲಾಖಾ […]