ಏ.1: ಸಮಾಜ ಕಲ್ಯಾಣ ಇಲಾಖೆ ಸಚಿವರ ಪ್ರವಾಸ

ಉಡುಪಿ: ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಏಪ್ರಿಲ್ 1 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಂದು ಬೆಳಗ್ಗೆ 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ, 10 ಗಂಟೆಗೆ ಕುಂದಾಪುರ ಪ್ರವಾಸಿ ಮಂದಿರದಲ್ಲಿ, ಉಡುಪಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ನಂತರ […]

ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಘೋಷಿಸುವಂತೆ ಆಗ್ರಹ: ಎ.1ರಂದು ಬೃಹತ್ ಪಾದಯಾತ್ರೆ

ಉಡುಪಿ: ಉಡುಪಿ ಜಿಲ್ಲೆಗೆ ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಸರಕಾರವನ್ನು ಆಗ್ರಹಿಸಿ ಏಪ್ರಿಲ್ 1 ರಂದು ಮನೋವೈದ್ಯ ಡಾ. ಪಿವಿ ಭಂಡಾರಿರವರ ಮುಂದಾಳತ್ವದಲ್ಲಿ ಕರಾವಳಿ ಯೂತ್ ಕ್ಲಬ್ ಉಡುಪಿ ತಂಡವು ಬೆಳಿಗ್ಗೆ 8 ಗಂಟೆಗೆ ಮಲ್ಪೆ ಗಾಂಧಿ ಪ್ರತಿಮೆಯಿಂದ ಮಣಿಪಾಲ ಡಿಸಿ ಆಫೀಸ್ ನವರೆಗೆ ಮೌನ ಪಾದಯಾತ್ರೆ ಹಮ್ಮಿಕೊಳ್ಳಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ಜಿಲ್ಲೆಯ ಡಿಸಿ ಹಾಗೂ ಜನಪ್ರತಿಧಿಗಳಿಗೆ ಮನವಿಯನ್ನು ಸಲ್ಲಿಸುವರು, ಹಾಗೆಯೇ ಜಿಲ್ಲೆಗೆ ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಸರಕಾರಕ್ಕೆ ಆಗ್ರಹಿಸುವ ನಿಟ್ಟಿನಲ್ಲಿ […]

‘ಬಣ್ಣ’ ಪಂಚದಿನ ನಾಟಕೋತ್ಸವ ಉದ್ಘಾಟನೆ: ಘಟನೆಯ ಪರಿಣಾಮವನ್ನು ಪ್ರೇಕ್ಷಕನ ಮುಂದಿಡುವುದೇ ನಾಟಕ: ವಸಂತ ಶೆಟ್ಟಿ

ಬ್ರಹ್ಮಾವರ: ನಾಟಕಗಳು ಒಂದು ಘಟನೆಯನ್ನು ಆಧರಿಸಿ, ಅದರ ಪರಿಣಾಮಗಳನ್ನು ಪ್ರೇಕ್ಷಕರ ಮುಂದಿಡುತ್ತದೆ. ಬಡತನ ಅನುಭವ ಇಲ್ಲದವನಿಗೂ ಬಡತನದ ಕರಾಳತೆಯನ್ನು ತೋರಿಸುವ ಸಾಮರ್ಥ್ಯ ಇರುವುದು ನಾಟಕಕ್ಕೆ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಜ್ಞಾನ ವಸಂತ ಶೆಟ್ಟಿ ಹೇಳಿದರು. ಅವರು ಬ್ರಹ್ಮಾವರದ ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳಮಂಟಪದಲ್ಲಿ ನಡೆದ ಬಣ್ಣ ಪಂಚದಿನ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ, ಸುಪ್ರಸಾದ್ ಶೆಟ್ಟಿ ಮಾತನಾಡಿ, ಫೋಕ್ಸೋ, ಸೈಬರ್ ಕ್ರೈಂ, ಮಾದಕದೃವ್ಯ ಈ ಎಲ್ಲಾ ಪ್ರಕರಣದಲ್ಲಿ ಉಡುಪಿ […]

ಪ್ರಧಾನಮಂತ್ರಿ ಶಿಷ್ಯವೇತನ: ಅವಧಿ ವಿಸ್ತರಣೆ

ಉಡುಪಿ: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವತಿಯಿಂದ ಪಿ.ಯು.ಸಿ 2 ನೇ ವರ್ಷ ಹಾಗೂ ಡಿಪ್ಲೋಮಾ 3 ನೇ ವರ್ಷದಲ್ಲಿ ಶೇ. 60 ಅಂಕ ಪಡೆದು ಪ್ರಸಕ್ತ ಸಾಲಿನಲ್ಲಿ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆದಿರುವ ಮಾಜಿ ಸೈನಿಕರ ಮಕ್ಕಳು, ಪ್ರಧಾನ ಮಂತ್ರಿ ಶಿಷ್ಯವೇತನಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 15 ರ ವರೆಗೆ ವಿಸ್ತರಿಸಲಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.ksb.gov.in ಅನ್ನು ಸಂಪರ್ಕಿಸುವಂತೆ ಸೈನಿಕ ಕಲ್ಯಾಣ […]

ಕಾರ್ಕಳದ ಪೂರ್ಣಿಮಾ ಕೆಫೆಗೆ ಭೇಟಿ ಕೊಡಿ, ಕೂಪನ್ ಪಡೀರಿ ಭರ್ಜರಿ ಬಹುಮಾನ ಗೆಲ್ಲಿ!

ಕಾರ್ಕಳ: ನಗರದ ಜೋಡುರಸ್ತೆಯ ಪ್ರೈಮ್ ಮಾಲ್ ನ ಎರಡನೇ ಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ಪೂರ್ಣಿಮಾ ಕೆಫೆ ನೊರ್ಥ್ ಇಂಡಿಯನ್, ಚೈನೀಸ್ ಫುಡ್ ಕೊರ್ಟ್ ಗೆ ಸಂದರ್ಶಿಸಿದರೆ ನಿಮಗೆ ಬಹುಮಾನ ಪಡೆಯುವ  ಸದಾವಕಾಶವನ್ನು ಸಂಸ್ಥೆ ಘೋಷಿಸಿದೆ. ಯಸ್.. ಪೂರ್ಣಿಮಾ ಕೆಫೆಗೆ ಭೇಟಿ ನೀಡಿದರೆ ಉಚಿತ ಕೂಪನ್ ನಿಮಗಾಗಿ‌ ನೀಡಲಾಗುತ್ತದೆ. ಆ ಕೂಪನ್ ನಲ್ಲಿ ನೀವು ಬಹುಮಾನ ಗೆಲ್ಲಬಹುದು. ಏಪ್ರಿಲ್ 30ಕ್ಕೆ ಬಹುಮಾನ ಡ್ರಾ ಗೊಳ್ಳಲಿದೆ. ಏನೇನು ಬಹುಮಾನ? * ಮೊದಲ ಬಹುಮಾನ 5,000 ಮೌಲ್ಯದ ಫುಡ್ ವೌಚರ್ * […]