ಏ.1 ರಂದು ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನೇರ ಪ್ರಸಾರ

ಉಡುಪಿ: ಕೇಂದ್ರ ಸರ್ಕಾರದ ಸನ್ಮಾನ್ಯ ಪ್ರಧಾನ ಮಂತ್ರಿಯವರು ಏಪ್ರಿಲ್ 1 ರಂದು ಬೆಳಗ್ಗೆ 11 ಗಂಟೆಗೆ ಟಾಟೋಲಾ ಸ್ಟೇಡಿಯಂನಲ್ಲಿ ಪರೀಕ್ಷಾ ಪೇ ಚರ್ಚಾ 2022 ರ ( Pariksha Pe Charcha 2022) 5ನೇ ಆವೃತ್ತಿ ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳು ಮುಂಬರುವ ಪರೀಕ್ಷಾ ಸಂದರ್ಭದಲ್ಲಿ ಎದುರಿಸುವ ಒತ್ತಡ ನಿವಾರಣೆ ಹಾಗೂ ಪರೀಕ್ಷೆಗಳನ್ನು ಯಾವುದೇ ಆತಂಕವಿಲ್ಲದೇ ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನ ಮಂತ್ರಿಯವರ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ […]

ಬೈಲೂರು: ಭೀತಿ ಹುಟ್ಟಿಸಿದ ಕಾಡುಕೋಣದ ರಕ್ಷಣೆ; ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು..!!

ನಿರೇ ಬೈಲೂರು ಗ್ರಾಮದ ಜಡ್ಡಿನಂಗಡಿ ಎಂಬಲ್ಲಿ ಮಂಗಳವಾರ ಭೀತಿ ಹುಟ್ಟಿಸಿದ್ದ ಕಾಡುಕೋಣವೊಂದನ್ನು ಅರಣ್ಯ ಇಲಾಖೆಯವರು ಅರವಳಿಕೆ ಮದ್ದು ನೀಡಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಕಾಡುಕೋಣವನ್ನು ರಕ್ಷಣೆ ಮಾಡಿದರು. ಮೊದಲು ಕಾಡುಕೋಣನಿಗೆ ಅರವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಲಾಯಿತು. ಬಳಿಕ ಕ್ರೈನ್ ಮೂಲಕ ಕಾಡುಕೋಣವನ್ನು ಟಿಪ್ಪರ್ ನಲ್ಲಿ ಹಾಕಿ ಸುರಕ್ಷಿತ ಸ್ಥಳಕ್ಕೆ ಬಿಡಲಾಯಿತು. ಜಡ್ಡಿನಂಗಡಿಯ ಮನೆಯೊಂದರ ಅಂಗಳಕ್ಕೆ ಮಂಗಳವಾರ ಮಧ್ಯಾಹ್ನ ಕಾಡುಕೋಣವೊಂದು ಏಕಾಏಕಿಯಾಗಿ ನುಗ್ಗಿದ್ದು, ಇದರಿಂದ ಈ ಪರಿಸರದಲ್ಲಿ ಆತಂಕದ ವಾತಾವರಣ […]

ಇಂದಿನಿಂದ ಬ್ರಹ್ಮಾವರದಲ್ಲಿ ‘ಬಣ್ಣ’ ಪಂಚದಿನ ನಾಟಕೋತ್ಸವ

ಬ್ರಹ್ಮಾವರ: ಭೂಮಿಕಾ ಹಾರಾಡಿ ಪ್ರತಿ ವರ್ಷ ನಡೆಸುತ್ತಿರುವ ಬಣ್ಣ ಪಂಚದಿನ ನಾಟಕೋತ್ಸವ ಮಾ. 30ರಿಂದ ಎ.3ರ ವರೆಗೆ ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಜರಗಲಿದೆ. ಮಾ.30 ರಂದು ಶ್ರೀ ದುರ್ಗಾಕಲಾ ತಂಡ ಹಾರಾಡಿ ಅಭಿನಯದ ಒಂದಲ್ಲಾ ಒಂದ್ ಸಮಸ್ಯೆ, ಮಾ. 31ರಂದು ಭೂಮಿಕಾ ಹಾರಾಡಿ ಅಭಿನಯದ ಆರದಿರಲಿ ಬೆಳಕು, ಎ.1 ರಂದು ಸುಮನಸಾ ಕೊಡವೂರು ಅಭಿನಯದ ಕಾಪ, ಎ.2 ರಂದು ಭೂಮಿಕಾ ಹಾರಾಡಿ ಅಭಿನಯದ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ಮತ್ತು ಎ.3 ರಂದು ರಂಗಭೂಮಿ ಉಡುಪಿ ಅಭಿನಯದ […]

ಬಿ ಎಡ್ ಕೋರ್ಸ್ ಇನ್ನು ಐದು ವರ್ಷ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿಗಳಿಗೆ ಮೇಜರ್ ಸರ್ಜರಿ ನಡೆದಿದೆ. ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನ್ವಯ ಬಿ ಎಡ್ ನಲ್ಲಿ ಅಮೂಲಾಗ್ರ ಬದಲಾವಣೆ ಮಾಡಿ, ಕೋರ್ಸನ್ನು 5 ವರ್ಷಗಳ ಅವಧಿಗೆ ವಿಸ್ತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.