ಬೈಲೂರು: ಕಾಡುಬಿಟ್ಟು ಮನೆಯಂಗಳಕ್ಕೆ ಬಂದ ಕಾಡುಕೋಣ; ಗ್ರಾಮಸ್ಥರಲ್ಲಿ ಆತಂಕ
ಬೈಲೂರು: ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಕಾಡುಕೋಣವೊಂದು ಮನೆಯಂಗಳಕ್ಕೆ ನುಗ್ಗಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಕಾಡಿನಿಂದ ಏಕಾಏಕಿಯಾಗಿ ಮನೆಯಂಗಳಕ್ಕೆ ಕಾಡುಕೋಣ ಬಂದಿದ್ದು, ಇದರಿಂದ ಮನೆಯವರು ಆತಂಕಕ್ಕೊಳಗಾದರು. ಬಳಿಕ ಮನೆಮಂದಿ ಸೇರಿ ಕಾಡುಕೋಣವನ್ನು ಓಡಿಸಿದರು. ಆದರೆ ಕಾಡುಕೋಣವು ಗ್ರಾಮದ ಏಕೈಕ ಸಂಪರ್ಕ ರಸ್ತೆಯಲ್ಲಿ ಅಡ್ಡವಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿದ್ದು, ಇದರಿಂದ ಗ್ರಾಮಸ್ಥರ ಒಡಾಟಕ್ಕೆ ಅಡಚಣೆಯಾಯಿತು. ಆ ನಂತರ ಗ್ರಾಮಸ್ಥರು ಹರಸಾಹಸಪಟ್ಟು ಕೋಣವನ್ನು ಕಾಡಿಗೆ ಅಟ್ಟಿದರು. ಈ ಭಾಗದಲ್ಲಿ ಆಗಾಗ್ಗೆ ಕಾಡುಕೋಣ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಜನರು ಭೀತಿಗೊಂಡಿದ್ದಾರೆ. ಕೆಲ […]
ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದ ಆರೋಗ್ಯ ಸಿಬ್ಬಂದಿಗಳ ಸೇವೆ ಅವಿಸ್ಮರಣೀಯ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
ಉಡುಪಿ: ಕೋವಿಡ್ ಸಂದರ್ಭದಲ್ಲಿ ಇಡೀ ದೇಶವೇ ಕಷ್ಟದಲ್ಲಿರುವಾಗ ತಮ್ಮ ಜೀವ ಪಣಕ್ಕಿಟ್ಟು, ಕರ್ತವ್ಯ ನಿರ್ವಹಿಸಿದ ಮಹತ್ತರವಾದ ಪಾತ್ರ ಆರೋಗ್ಯ ಸಿಬ್ಬಂದಿ ಮತ್ತು ನೌಕರದ್ದಾಗಿದೆ. ಈ ನಿಟ್ಟಿನಲ್ಲಿ ಅವರಿಗೆ ಪ್ರೋತ್ಸಾಹ ನೀಡುವುದು ಒಂದು ಅತ್ಯುತ್ತಮ ಕೆಲಸವಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅಭಿಪ್ರಾಯಪಟ್ಟರು. ಅವರು ಇಂದು ನಗರದ ಅಂಬಲಪಾಡಿಯ ಶ್ಯಾಮಿಲಿ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕೋವಿಡ್ ವಾರಿಯರ್ಸ್ ರವರಿಗೆ ಅಭಿನಂದನಾ […]
ಯುವಜನತೆ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
ಉಡುಪಿ: ಯುವಜನತೆ ತಮಗೆ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಆಯ್ಕೆಯ ಉದ್ಯೋಗ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು, ನಗರದ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಜಿಲ್ಲಾ ಕೌಶಲ್ಯ ಮಿಷನ್, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಉಡುಪಿ, ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್, ಸಣ್ಣ ಕೈಗಾರಿಕಾ ಸಂಘ, ಉಡುಪಿ ಐ.ಎಮ್.ಸಿ, […]
ಶೀಘ್ರದಲ್ಲೇ ಕೊನೆಗೊಳ್ಳಲಿದೆ ಕೋವಿಡ್ ಜಾಗೃತಿ ಕಾಲರ್ ಟ್ಯೂನ್
ನವದೆಹಲಿ: ಕೋವಿಡ್ ಕಾಲರ್ ಟ್ಯೂನ್ ಕೇಳಿ ಬೇಸತ್ತಿದ್ದು, ಜನರಿಗೆ ಇನ್ನೂ ಗುಡ್ ನ್ಯೂಸ್ ಸಿಗಲಿದೆ. ಕೋವಿಡ್ ಕಾಲರ್ ಟ್ಯೂನ್‌ಗಳು ಇನ್ನು ಮುಂದೆ ಕೇಳಿಸುವುದಿಲ್ಲ. ಶೀಘ್ರದಲ್ಲೇ ಕಾಲರ್ ಟ್ಯೂನ್ ಗೆ ಅಂತ್ಯ ಹಾಡಲಾಗುತ್ತದೆ. ಕೋವಿಡ್- 19 ಕುರಿತು ಜಾಗೃತಿಗಾಗಿ ಟೆಲಿಕಾಂ ಆಪರೇಟರ್‌ಗಳು ಪರಿಚಯಿಸಿದ ಫ್ರೀ- ಕಾಲ್- ಆಡಿಯೋ ಜಾಹೀರಾತುಗಳು ಮತ್ತು ಕಾಲರ್- ಟ್ಯೂನ್‌ಗಳನ್ನು ಶೀಘ್ರದಲ್ಲೇ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ಸರಕಾರ ತಿಳಿಸಿದೆ. ಫೋನ್ ಕರೆಗಳನ್ನು ಮಾಡುವಾಗ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಕಾಲರ್ ಟ್ಯೂನ್‌ಗಳನ್ನು ಅಮಾನತುಗೊಳಿಸಲು ಕೇಂದ್ರವು ಪರಿಗಣಿಸುತ್ತಿದ್ದು, ದೂರಸಂಪರ್ಕ ಇಲಾಖೆ […]
ಉಡುಪಿ: ಫೈನಾನ್ಸ್ ಅಸೋಸಿಯೇಶನ್ ಮಹಾಸಭೆ
ಉಡುಪಿ: ಉಡುಪಿ ಜಿಲ್ಲಾ ಫೈನಾನ್ಸ್ ಅಸೋಸಿಯೇಶನ್ (ರಿ.) ಇದರ ಮಹಾಸಭೆವು ಮಾ.25 ರಂದು ಉಡುಪಿ ಹೊಟೇಲ್ ವೇದಾಂತ್ (ರಾಮಕೃಷ್ಣ) ನಲ್ಲಿ ಜರುಗಿತು. ಹಿಂದಿನ ಅಧ್ಯಕ್ಷರಾದ ದಿವಂಗತ ಎಡ್ವ್ ರ್ಟ್ ಸುಮಿತ್ರರವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿ, ಮುಂದಿನ 2 ವರ್ಷಗಳ ಅವಧಿಗೆ ಕಾರ್ಯಕಾರಿಯನ್ನು ರಚಿಸಲಾಯಿತು. ಮುಂದಿನ 2 ವರ್ಷ ಅವಧಿಗೆ ಈ ಕೆಳಗಿನವರು ಆಯ್ಕೆಯಾಗಿರುತ್ತಾರೆ. ಅಧ್ಯಕ್ಷರಾಗಿ ರವಿರಾಜ ಆಚಾರ್ಯ ಅಲೆವೂರು, ಉಪಾಧ್ಯಕ್ಷರಾಗಿ ಶಿರಿಯಾರ ವಾಸುದೇವ ಆಚಾರ್ಯ, ಕಾರ್ಯದರ್ಶಿಯಾಗಿ ಸತೀಶ ಹೆಗ್ಡೆ ಉಡುಪಿ, ಕೋಶಾಧಿಕಾರಿಯಾಗಿ ನಂದ ಕುಮಾರ್ ಕಾರ್ಕಳ ಉಡುಪಿ ಜಿಲ್ಲೆಯ […]