ಮೊಗವೀರ ಯುವ ಸಂಘಟನೆ ಹಾಲಾಡಿ- ಶಂಕರನಾರಾಯಣ ಘಟಕದ ಪದಪ್ರದಾನ ಸಮಾರಂಭ
ಮೊಗವೀರ ಯುವ ಸಂಘಟನೆ ರಿ ಉಡುಪಿ ಜಿಲ್ಲೆ. ಹಾಲಾಡಿ ಶಂಕರನಾರಾಯಣ ಘಟಕದ 2022-23 ನೇ ಸಾಲಿನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿ ಶುಭ ಹಾರೈಸಿದರು.
ಪರ್ಕಳ: ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದ ಮರಳು ತುಂಬಿದ ಲಾರಿ; ಚಾಲಕ, ಕ್ಲೀನರ್ ಪಾರು
ಮಣಿಪಾಲ: ಚಾಲಕನ ನಿಯಂತ್ರಣ ತಪ್ಪಿ ಮರಳು ಸಾಗಾಟದ ಲಾರಿಯೊಂದು ರಸ್ತೆಯ ಬದಿಯ ತಗ್ಗು ಪ್ರದೇಶಕ್ಕೆ ಉರುಳಿಬಿದ್ದ ಘಟನೆ ಉಡುಪಿಯ ಪರ್ಕಳ ಪೇಟೆ ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಮರಳು ತುಂಬಿಕೊಂಡು ಮಣಿಪಾಲದಿಂದ ಪರ್ಕಳ ಕಡೆಗೆ ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪರ್ಕಳ ಪೇಟೆಗೆ ಸಮೀಪಿಸುತ್ತಿದ್ದಂತೆ ಹೆದ್ದಾರಿ ಕಾಮಗಾರಿಯ ಪರಿಣಾಮ ಮುಂದಕ್ಕೆ ಚಲಿಸಲಾಗದೆ ಹಿಮ್ಮುಖವಾಗಿ ಚಲಿಸಿದ ಲಾರಿ ರಸ್ತೆ ಬದಿಯ ತಗ್ಗು ಪ್ರದೇಶಕ್ಕೆ ಮಗುಚಿ ಬಿದ್ದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಲಾರಿ ಹಿಮ್ಮುಖವಾಗಿ […]
ಮಾಜಿ ಸೈನಿಕರಿಗೆ ಪರೀಕ್ಷೆ: ಅರ್ಜಿ ಆಹ್ವಾನ
ಉಡುಪಿ: ಆಂಧ್ರ ವಿಶ್ವವಿದ್ಯಾಲಯವು ಕೇಂದ್ರ ಸೈನಿಕ ಮಂಡಳಿಯ ಎಂ.ಓ.ಯು ದೊಂದಿಗೆ ಮಾಜಿ ಸೈನಿಕರಿಗೆ ನೀಡಲಾಗುವ ಬಿ.ಎ (ಹೆಚ್.ಆರ್.ಎಂ) ಪ್ರಮಾಣ ಪತ್ರಕ್ಕಾಗಿ ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶನಾಲಯದ ವತಿಯಿಂದ ಮೇ 4 ನೇ ವಾರ ಹಾಗೂ ನವೆಂಬರ್ 4 ನೇ ವಾರದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು. ಮಾಜಿ ಸೈನಿಕರು ಅರ್ಜಿ ನಮೂನೆಯನ್ನು ಏ.1 ರಿಂದ 25 ರ ವರೆಗೆ ಹಾಗೂ ಅಕ್ಟೋಬರ್ 1 ರಿಂದ 25 ರ ವರೆಗೆ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಏ.30 […]
ಬಾಲ ಗೌರವ ಪ್ರಶಸ್ತಿ: ಅರ್ಜಿ ಆಹ್ವಾನ
ಉಡುಪಿ: ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ವತಿಯಿಂದ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದ ಒಳಗಿನ ಮಕ್ಕಳಿಗೆ ಬಾಲಗೌರವ ಪ್ರಶಸ್ತಿ ಹಾಗೂ ಮಕ್ಕಳ ಪುಸ್ತಕ ಚಂದಿರ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡಾ, ನೃತ್ಯ, ಸಂಗೀತ, ಸಾಹಿತ್ಯ, ಕರಕುಶಲ, ಚಿತ್ರಕಲೆ ಕ್ಷೇತ್ರಗಳಲ್ಲಿ ಹಾಗೂ ಬಹುಮುಖ ಪ್ರತಿಭೆ, ನಾಟಕ ಕ್ಷೇತ್ರದಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಪ್ರಶಸ್ತಿ ಪುರಸ್ಕೃತ ಮಕ್ಕಳು ಸ್ವಯಂ ದೃಢೀಕೃತ ನಕಲು, ಸ್ವವಿವರ, ದಾಖಲೆಗಳೊಂದಿಗೆ ಹಾಗೂ 2021 ರ ಜನವರಿಯಿಂದ ಡಿಸೆಂಬರ್‌ವರೆಗೆ ಪ್ರಕಟಗೊಂಡ […]
ಮುಕ್ತ ವಿವಿ ಪರೀಕ್ಷಾ ಶುಲ್ಕ ಪಾವತಿ: ಅವಧಿ ವಿಸ್ತರಣೆ
ಉಡುಪಿ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2001-02 ರಿಂದ 2014-15 ಹಾಗೂ 2018-19, 2019-20 ಸ್ನಾತಕ ಪದವಿ ಮತ್ತು ಎಲ್.ಎಲ್.ಎಂ, ಎಂ.ಬಿ.ಎ(ಲಾ), ಎಂ.ಟಿ.ಎಂ ಪದವಿಯ ಪುನಾರಾವರ್ತಿತ ವಿದ್ಯಾರ್ಥಿಗಳು ಹಾಗೂ 2020-21 ನೇ ಶೈಕ್ಷಣಿಕ ಸಾಲಿನಲ್ಲಿ (ಜನವರಿ ಆವೃತ್ತಿ) ಪ್ರವೇಶಾತಿ ಪಡೆದ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಗಳಾದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್ಸಿ, ಎಂ.ಎ, ಎಂ.ಕಾಂ, ಎಂ.ಬಿ.ಎ, ಎಂ.ಲಿಬ್.ಐ.ಎಸ್ಸಿ, ಎಲ್ಲಾ ಎಂ.ಎಸ್ಸಿ ಮತ್ತು ಎಲ್ಲಾ ಸ್ನಾತಕ ಹಾಗೂ ಸ್ನಾತಕೋತ್ತರ ಡಿಪ್ಲೋಮಾ, ಸರ್ಟಿಫಿಕೇಟ್ ಕಾರ್ಯಕ್ರಮಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಹಾಗೂ ಸೆಮಿಸ್ಟರ್ ಪರೀಕ್ಷೆಗಳಿಗೆ ಪರೀಕ್ಷಾ […]