ಬೊಮ್ಮಾರಬೆಟ್ಟು: ಪಾಳುಬಾವಿಗೆ ಬಿದ್ದ ಕಾಡುಕೋಣದ ರಕ್ಷಣೆ
ಹಿರಿಯಡಕ: ಬಾವಿಗೆ ಬಿದ್ದ ಕಾಡು ಕೋಣವೊಂದನ್ನು ಕಾರ್ಯಾಚರಣೆ ಮೂಲಕ ರಕ್ಷಣೆ ಮಾಡಿದ ಘಟನೆ ಬೊಮ್ಮಾರಬೆಟ್ಟು ಗ್ರಾಮದ ಪಂಚನಬೆಟ್ಟು ಎಂಬಲ್ಲಿ ಶುಕ್ರವಾರ ನಡೆದಿದೆ. ಪಂಚನಬೆಟ್ಟು ಸಮೀಪದ ಕಾಡಿನಲ್ಲಿರುವ ಪಾಳುಬಿದ್ದ ಬಾವಿಯಲ್ಲಿ ಇಂದು ಬೆಳಿಗ್ಗೆ ಕಾಡುಕೋಣ ಪತ್ತೆಯಾಗಿದೆ. ಆಹಾರ ಹುಡುಕಿಕೊಂಡು ಬಂದ ಕಾಡುಕೋಣ ಆಯತಪ್ಪಿ ಪಾಳುಬಿದ್ದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಕಾಡುಕೋಣ ಬಾವಿಗೆ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದರು. ಬಳಿಕ ಜೇಸಿಬಿ ತರಿಸಿ […]
ಮಾ.26, 27: ಸಮಾಜ ಕಲ್ಯಾಣ ಇಲಾಖೆ ಸಚಿವರ ಪ್ರವಾಸ
ಉಡುಪಿ: ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾರ್ಚ್ 26 ಹಾಗೂ 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.26 ರಂದು ಬೆಳಗ್ಗೆ 7.30 ರಿಂದ 9 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ. ಮಾ.27 ರಂದು ಬೆ. 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ […]
ಉಡುಪಿ: ಸ್ಕೂಟರ್ ಗೆ ಕಾರು ಡಿಕ್ಕಿ; ಮೆಡಿಕಲ್ ಶಾಪ್ ಮಾಲೀಕ ಮೃತ್ಯು
ಉಡುಪಿ: ಕಾರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮೃತಪಟ್ಟ ಘಟನೆ ಉಡುಪಿ ಕಡಿಯಾಳಿಯ ಸಮೀಪ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಪರ್ಕಳದ ಮೆಡಿಕಲ್ ಶಾಪ್ ನ ಮಾಲೀಕ ವಾಮನ ನಾಯಕ್ ಎಂದು ಗುರುತಿಸಲಾಗಿದೆ. ಇವರು ಇಂದು ಬೆಳಿಗ್ಗೆ ಮಗಳನ್ನು ಉಡುಪಿಯ ಶಾಲೆಗೆ ಬಿಟ್ಟು, ಕಡಿಯಾಳಿ ಬಳಿ ಬರುವಾಗ ಕಾರೊಂದು ರಭಸವಾಗಿ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಉರುಳಿಬಿದ್ದ ವಾಮನ್ ನಾಯಕ್ ಅವರ ತಲೆಗೆ ಗಂಭೀರ […]
ಉಡುಪಿ: ಮಾ.27 ಕ್ಕೆ ‘ವಿಶ್ವ ರಂಗಭೂಮಿ ದಿನಾಚರಣೆ- 2022’ ಕಾರ್ಯಕ್ರಮ
ಉಡುಪಿ: ಕರ್ನಾಟಕ ನಾಟಕ ಅಕಾಡೆಮಿ ಮತ್ತು ರಂಗಭೂಮಿ ಉಡುಪಿ ಸಹಯೋಗದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ‘ವಿಶ್ವ ರಂಗಭೂಮಿ ದಿನಾಚರಣೆ- 2022’ ಕಾರ್ಯಕ್ರಮ ಇದೇ ಮಾ.27ರಂದು ಸಂಜೆ 6 ಗಂಟೆಗೆ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಂಗಭೂಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾಹಿತಿ ನೀಡಿದರು. ಅಂಬಲಪಾಡಿ ಜರ್ನಾದನ ಮತ್ತು ಮಹಾಕಾಳಿ […]
ಕೊಡವೂರು: 2ನೇ ಹಂತದ ಕಾಂಪೋಸ್ಟ್ ಡ್ರಮ್ ಮತ್ತು ಉಚಿತ ತರಕಾರಿ ಬೀಜ ವಿತರಣೆ
ಕೊಡವೂರು: ಕೊಡವೂರು ವಾರ್ಡ್ ಅಭಿವೃದ್ದಿ ಸಮಿತಿ, ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು, ಯುವ ಸಂಘ ಕೊಪ್ಪಲ್ ತೋಟ ಮತ್ತು ನಗರ ಸಭೆ ಉಡುಪಿ ಮತ್ತು ಸಾಹಸ್ ಎನ್. ಜಿ . ಓ ಜಂಟಿಯಾಗಿ ಆರೋಗ್ಯ ಸಮಾಜದ ನಿರ್ಮಾಣಕ್ಕಾಗಿ ಮನೆಯ ಹಸಿಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಉಚಿತ ಕಾಂಪೋಸ್ಟ್ ಡ್ರಮ್ ಮತ್ತು ಉಚಿತ ತರಕಾರಿ ಬೀಜ ವಿತರಣೆ ಕಾರ್ಯಕ್ರಮವು ಕೊಡವೂರಿನ ಕೊಪ್ಪಲ್ ತೋಟ ಯುವ ಸಂಘದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೊಪ್ಪಲ್ ಯುವ ಸಂಘದ ಅಧ್ಯಕ್ಷರಾದ ಜನಾರ್ಧನ […]