ಯಕ್ಷಗಾನ ಹೆಜ್ಜೆ ಹಾಕುತ್ತಿರುವ ವಾರಣಾಸಿ ನಾಟ್ಯ ವಿದ್ಯಾಲಯದ 20 ವಿದ್ಯಾರ್ಥಿಗಳು
ಉಡುಪಿ: ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಇದೀಗ ರಾಷ್ಟ್ರಮಟ್ಟಕ್ಕೂ ತಲುಪಿದೆ ಎಂದು ಹೇಳಲು ಕರಾವಳಿಗರಾದ ನಮಗೆ ಹೆಮ್ಮೆಯಾಗುತ್ತದೆ. ಅದನ್ನು ಪರಿಚಯಿಸುವಲ್ಲಿ ಶ್ರಮಿಸುವುದು ಉಡುಪಿಯ ಯಕ್ಷಗಾನ ಕೇಂದ್ರವಾಗಿದೆ. ಉಡುಪಿಯ ಯಕ್ಷಗಾನ ಕೇಂದ್ರ ಈಗಾಗಲೇ ಯಶಸ್ವಿಯಾಗಿ 50 ವರ್ಷವನ್ನು ಪೂರೈಸಿ, ಸಾಕಷ್ಟು ಏಳು – ಬೀಳುಗಳನ್ನು ಕಂಡಿದೆ. ಸದಾ ಕ್ರಿಯಾಶೀಲವಾಗಿರುವ ಈ ಕೇಂದ್ರದಲ್ಲಿ ಯಾವಾಗಲೂ ತಾಳದ ಸದ್ದು ಕೇಳುತ್ತಲೆ ಇರುತ್ತದೆ. 6 ರಿಂದ ಹಿಡಿದು 60 ಪ್ರಾಯದವರು ಕೂಡ ಇಲ್ಲಿ ಬಂದು ಗುರುಗಳ ತಾಳಕ್ಕೆ ಹೆಜ್ಜೆ ಹಾಕುತ್ತಾರೆ. ಗುರುಕುಲ ಶಿಕ್ಷಣ […]
ಎ.1ರಿಂದ 15ರ ವರೆಗೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ
ಉಡುಪಿ: ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಇದರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಪುಣ್ಯೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಗಳು ಏಪ್ರಿಲ್ 1 ರ ಶುಕ್ರವಾರದಿಂದ 15 ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಜಿರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷರೂ ಆಗಿರುವ ನಾಡೋಜ ಡಾ| ಜಿ. ಶಂಕರ್ ಹೇಳಿದರು. ಗುರುವಾರ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ದ.ಕ ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟ ಶ್ರೀ ಮಹಾಲಕ್ಷ್ಮೀ ದೇವಸ್ಥಾನವು 1957 ರಲ್ಲಿ […]
ಕ್ಷಯರೋಗ ಮುಕ್ತ ಭಾರತಕ್ಕೆ ಎಲ್ಲರ ಸಹಕಾರ ಅಗತ್ಯ: ಸುಮಿತ್ರಾ ನಾಯಕ್
ಉಡುಪಿ: ಕ್ಷಯ ರೋಗಿಗಳನ್ನು ಶೀಘ್ರದಲ್ಲಿ ಪತ್ತೆ ಹಚ್ಚಿ, ಅವರಿಗೆ ಸೂಕ್ತ ಚಿಕಿತ್ಸೆ ದೊರಕಿಸುವ ಮೂಲಕ, ಭಾರತವನ್ನು ಕ್ಷಯರೋಗ ಮುಕ್ತಗೊಳಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ನಾಯಕ್ ಹೇಳಿದರು. ಅವರು ಇಂದು ಮಲ್ಪೆ ಬೀಚ್ ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಚೇರಿ, ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮಲ್ಪೆ ಸಹಯೋಗದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ […]
ಉಡುಪಿ ಕೋಟದಲ್ಲಿ ರಾಷ್ಟ್ರೀಯ ಮಟ್ಟದ ‘ಪಾಂಚಜನ್ಯ ಟ್ರೋಫಿ- 2022’
ಕುಂದಾಪುರ: ಪಾಂಚಜನ್ಯ ಈವೆಂಟ್ಸ್ ಪ್ರಾಯೋಜಕತ್ವದಲ್ಲಿ, ಚತುರ ಸಂಘಟಕ ನಿತೇಶ್ ಶೆಟ್ಟಿ ಸಾರಥ್ಯದಲ್ಲಿ, 30 ಗಜಗಳ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಪಾಂಚಜನ್ಯ ಟ್ರೋಫಿ- 2022 ಆಯೋಜಿಸಲಾಗಿದೆ. ಮಾರ್ಚ್ 25,26 ಮತ್ತು 27 ರಂದು ಕೋಟ ಗಿಳಿಯಾರು ಶಾಂಭವಿ ಶಾಲಾ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು, ಉತ್ತರ ಪ್ರದೇಶದ ತಂಡ ಸೇರಿದಂತೆ ರಾಜ್ಯದ ಪ್ರತಿಷ್ಠಿತ 20 ತಂಡಗಳು ಭಾಗವಹಿಸಲಿದೆ. ಪ್ರಥಮ ಪ್ರಶಸ್ತಿ 1.5 ಲಕ್ಷ ನಗದು, ದ್ವಿತೀಯ ಪ್ರಶಸ್ತಿ 1 ಲಕ್ಷ ನಗದು, ತೃತೀಯ ಪ್ರಶಸ್ತಿ 25 ಸಾವಿರ […]
ನಗರಸಭಾ ವ್ಯಾಪ್ತಿಯಲ್ಲಿ ಬ್ಯಾನರ್, ಕಟೌಟ್ ಅಳವಡಿಕೆಗೆ ಪರವಾನಿಗೆ ಕಡ್ಡಾಯ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ನಗರಸಭೆಯ ಅನುಮತಿಯಿಲ್ಲದೇ ಬ್ಯಾನರ್ ಹಾಗೂ ಕಟೌಟ್‌ಗಳನ್ನು ಅಳವಡಿಸಿರುವ ಕುರಿತು ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಪರವಾನಿಗೆ ಪಡೆದು ಅವಧಿ ಮುಗಿದ ಮತ್ತು ಅನಧೀಕೃತ ಬ್ಯಾನರ್ ಹಾಗೂ ಕಟೌಟ್‌ಗಳನ್ನು ಕೂಡಲೇ ತೆರವುಗೊಳಿಸಬೇಕು. ತಪ್ಪಿದಲ್ಲಿ ನಗರಸಭಾ ವತಿಯಿಂದ ತೆರವುಗೊಳಿಸಲಾಗುವುದು. ಬ್ಯಾನರ್ ಹಾಗೂ ಕಟೌಟ್‌ಗಳನ್ನು ಅಳವಡಿಸಲು ನಗರಸಭೆಯಿಂದ ಪರವಾನಿಗೆ ಪಡೆಯುವುದು ಕಡ್ಡಾಯ ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.