ಉಡುಪಿ ಕಾಡುಬೆಟ್ಟು ಶನೈಶ್ಚರ ದೇವಸ್ಥಾನ ಟ್ರಸ್ಟ್: ವಾರ್ಷಿಕ ಮಹೋತ್ಸವ
ಉಡುಪಿ: ಶ್ರೀ ಅಬ್ಬಗ ಧಾರಗ ವೀರಭದ್ರ ಮತ್ತು ಶನೈಶ್ಚರ ದೇವಸ್ಥಾನ ಟ್ರಸ್ಟ್ ಕಾಡುಬೆಟ್ಟು ಉಡುಪಿ ಇದರ ವಾರ್ಷಿಕ ಮಹೋತ್ಸವ (ವರ್ಧಂತಿ) ಧಾರ್ಮಿಕ ಪೂಜಾ ಕಾರ್ಯಕ್ರಮವನ್ನು ಕೊರಂಗ್ರಪಾಡಿ ವಿದ್ವಾನ್ ಕೆ.ಪಿ. ಕುಮಾರ್, ಗುರು ತಂತ್ರಿ, ಮಾರ್ಗದರ್ಶನದಲ್ಲಿ ಶ್ರೀ ದೇವರ ದಿವ್ಯ ಸನ್ನಿಧಿಯಾದ ಸಹಪಾರಿವಾರ ಗರ್ಭಿತ ಶ್ರೀ ವೀರಭದ್ರ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾಥನೆ, ನವಕ ಕಲಾಭಿಷೇಕ, ಗಣಪತಿ ಪ್ರೀತ್ಯರ್ಥ ಗಣಯಾಗ, ಶ್ರೀ ನಾಗದೇವರಿಗೆ ಪವಮಾನ ಕಲಶಾಭಿಷೇಕ ನೆಡೆಯಿತು. ಶ್ರೀ ಶನೈಶ್ಚರ ದೇವರರಿಗೆ ಪ್ರಧಾನ ಕಲಾಭಿಷೇಕ, ಸಾನಿಧ್ಯ ಹೋಮ ಮತ್ತು […]
ನಿರೀಕ್ಷೆಗೂ ಮೀರಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ: ಶ್ರೀವರ್ಮ ಅಜ್ರಿ
ಕಾರ್ಕಳ: ಪ್ರತಿಯೊಂದು ವಿಭಾಗದಲ್ಲೂ ಪ್ರತಿಭಾವಂತರನ್ನು ಗುರುತಿಸುವ ಸತ್ಕಾರ್ಯವು ನಡೆದಿದೆ ಎಂದು ಎಂಪಿಎಂ ಕಾಲೇಜು ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಹೇಳಿದರು. ಅವರು ಕಾರ್ಕಳ ಉತ್ಸವದ ಅಂಗವಾಗಿ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಾಂಸ್ಕೃತಿಕ ಹಾಗೂ ಅಧುನಿಕತೆಯ ಗೂಡುದೀಪ ಸ್ವರ್ಧೆಯಲ್ಲಿ ಪಾಲ್ಗೊಂಡು ಆಯ್ಕೆಗೊಂಡವರಿಗೆ ಬಹುಮಾನ ನೀಡಿ ಮಾತನಾಡಿ ನಿರೀಕ್ಷೆಗೂ ಮೀರಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ. ಬಹುಮಾನವೊಂದೇ ಮಾನದಂಡವಾಗಬಾರದು. ಸೋಲು- ಗೆಲುವು ಇವುಗಳನ್ನು ಸಮಾನವಾಗಿ ಸ್ವೀಕರಿಸಿ, ಸ್ವರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ, ಕಾರ್ಕಳ ಉತ್ಸವದ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ […]
ಕಾರ್ಕಳ ಉತ್ಸವದ ಯಶಸ್ಸಿಗೆ ಸ್ವಯಂ ಸೇವಕರು ಕಾರಣಕರ್ತರು: ಸಚಿವ ವಿ. ಸುನೀಲ್ ಕುಮಾರ್
ಕಾರ್ಕಳ: ಕಾರ್ಕಳ ಉತ್ಸವದಿಂದಾಗಿ ಕಲೆ, ಸಂಸ್ಕೃತಿಗೆ ಇನ್ನಷ್ಟು ಮೆರಗು ತಂದಿದೆ. ತುಳುನಾಡಿದ ಜನಪಥ ಕಲೆ ಯಕ್ಷರಂಗಾಯಣದ ಮೂಲಕ ಆರಂಭವಾದ ಕಾರ್ಕಳ ಉತ್ಸವವು ದಿನೇ ದಿನೇ ರಂಗುಕಂಡಿತು. ಶನಿವಾರ ರಾತ್ರಿ 9 ಗಂಟೆಯವರೆಗೆ ಎರಡುವರೆ ಲಕ್ಷ ಜನರು ಕಾರ್ಕಳ ಉತ್ಸವದಲ್ಲಿ ನೆರೆದಿದ್ದರು. ಅದೊಂದು ದೊಡ್ಡ ಸಾಹಸ ಕಾರ್ಯಕ್ರಮದಿಂದಾಗಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ ಎಂಬುವುದನ್ನು ಅರ್ಥೈಸಿಕೊಳ್ಳಬಹುದು. ತನ್ಮೂಲಕ ಕಾರ್ಕಳ ಮಂದಿ ಹೊಸ ವಿಚಾರಗಳನ್ನು ತೆರೆಸಿಕೊಂಡಿದೆ. 37 ಸಮಿತಿಯಲ್ಲಿ 1500 ಸಾವಿರದಷ್ಟು ಸ್ವಯಂ ಸೇವಕರು ಇದಕ್ಕೆಲ್ಲ ಕಾರಣಕರ್ತರು. ಅವರ ಬಲ […]