ಸಾಹಿತಿ, ರಂಗಕರ್ಮಿ ಪ್ರೊ. ಮೇಟಿ ಮುದಿಯಪ್ಪ ನಿಧನ

ಉಡುಪಿ: ಸಾಹಿತಿ, ರಂಗಕರ್ಮಿ, ಪ್ರಾಧ್ಯಾಪಕ ಮೇಟಿ ಮುದಿಯಪ್ಪ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ರಾತ್ರಿ ಉಡುಪಿಯ ಮನೆಯಲ್ಲಿ ನಿಧನರಾಗಿದ್ದಾರೆ‌. ಅವರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಪ್ರೊ. ಮೇಟಿ ಮುದಿಯಪ್ಪ ಅವರು, ಓರ್ವ ಉತ್ತಮ ಸಾಹಿತಿ, ರಂಗ ಕಲಾವಿದ, ಭಾಷಣಕಾರ, ಪರಿಸರ ಪ್ರೇಮಿ, ಸಂಘಟಕ ,ಚಲನಚಿತ್ರ ನಟರಾಗಿಯೂ ಗುರುತಿಸಿಕೊಂಡಿದ್ದರು. ಹಲವಾರು ಸಂಘ ಸಂಸ್ಥೆಯ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಮೂಲತಃ ಹೈದರಾಬಾದ್ ನ ಗಂಗಾವರದವರಾದ ಅವರು, ಉಡುಪಿಯಲ್ಲಿ […]

ಪೆರ್ಡೂರಿನಲ್ಲಿ ಅನಂತಪದ್ಮನಾಭ ದೇವಸ್ಥಾನದ ಶ್ರೀಮನ್ಮಹಾರಥೋತ್ಸವ ಸಂಪನ್ನ

ಪೆರ್ಡೂರು: ಮಹತೋಭಾರ ಶ್ರೀ ಅನಂತಪದ್ಮನಾಭ ಪೆರ್ಡೂರು ದೇವಸ್ಥಾನದ ವರ್ಷಾವಧಿ ಶ್ರೀಮನ್ಮಹಾರಥೋತ್ಸವ ಬುಧವಾರ ರಾತ್ರಿ ಸಂಭ್ರಮದಿಂದ ನಡೆಯಿತು. ಕ್ಷೇತ್ರದ ತಂತ್ರಿಗಳಾದ ಕೊರಂಗ್ರಪಾಡಿ ಕೆ.ಜಿ. ರಾಘವೇಂದ್ರ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಪ್ರಧಾನ ಹೋಮ, ಕಲಶಾಭಿಷೇಕ, ರಥಹೋಮ, ಕೊಡಿಪೂಜೆ, ಮಹಾಪೂಜೆ, ರಥಾರೋಹಣ ಹಾಗೂ ರಾತ್ರಿ ಶ್ರೀಮನ್ಮಮಹಾರಥೋತ್ಸವು ವಿಜೃಂಭಣೆಯಿಂದ ನಡೆಯಿತು. ರಾತ್ರಿ ದೀವಟಿಗೆ ಸಲಾಮ್, ಹಚ್ಚಡ ಸೇವೆ, ರಥಾವರೋಹಣ, ಪಲ್ಲಕ್ಕಿ ಸುತ್ತು, ತಪ್ಪೋತ್ಸವ, ನರ್ತನ ಸೇವೆ ಮೊದಲಾದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಹಿರಿಯಡಕ: ಮಾ.19ಕ್ಕೆ ಕಾಂಗ್ರೆಸ್ ನಿಂದ ‘ಸುವರ್ಣ ಸಂಭ್ರಮದಲ್ಲಿ ಭೂ ಸುಧಾರಣಾ ಕಾನೂನು’ ಸಮಾವೇಶ

ಉಡುಪಿ: ಕಾಂಗ್ರೆಸ್ ಸರ್ಕಾರವು ಭೂ ಸುಧಾರಣಾ ಕಾನೂನು ಜಾರಿಗೊಳಿಸಿ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ  ‘ಸುವರ್ಣ ಸಂಭ್ರಮದಲ್ಲಿ ಭೂ ಸುಧಾರಣಾ ಕಾನೂನು’ ಎಂಬ ಬೃಹತ್ ಸಮಾವೇಶವನ್ನು ಇದೇ ಮಾ.19ರಂದು ಬೆಳಿಗ್ಗೆ 10.30ಕ್ಕೆ ಹಿರಿಯಡಕ ಗಾಂಧಿ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ತಿಳಿಸಿದರು. ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಭೂ ಸುಧಾರಣಾ ಮಸೂದೆ ಜಾರಿಯಾದಾಗ […]

ಹೈಕೋರ್ಟ್ ತೀರ್ಪನ್ನು ಧಿಕ್ಕರಿಸಿ ಬಂದ್ ನಡೆಸಿರುವುದು ಹಿಜಾಬ್ ವಿವಾದವನ್ನು ಇನ್ನಷ್ಟು ಜೀವಂತವಿರಿಸುವ ಹುನ್ನಾರ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಹಾಗೂ ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ಮೆಟ್ಟಲೇರಿದ ಮುಸ್ಲಿಂ ಸಮುದಾಯದ ಕೆಲವು ವಿದ್ಯಾರ್ಥಿನಿಯರು ಇದೀಗ ಉಚ್ಛ ನ್ಯಾಯಾಲಯದ ನ್ಯಾಯಯುತ ತೀರ್ಪನ್ನು ಗೌರವಿಸದೆ ಧಿಕ್ಕರಿಸಿರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆಯಲ್ಲ. ಸಂವಿಧಾನ ಮತ್ತು ಈ ನೆಲದ ಕಾನೂನಿಗೆ ಗೌರವ ನೀಡದೆ ಕೋರ್ಟ್ ತೀರ್ಪಿನ ವಿರುದ್ಧ ಬಂದ್ ಆಚರಿಸುವುದು ಹಿಜಾಬ್ ವಿವಾದವನ್ನು ಇನ್ನಷ್ಟು ಜೀವಂತವಾಗಿರಿಸುವ ಹುನ್ನಾರ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ನ್ಯಾಯಕ್ಕಾಗಿ ಹೈಕೋರ್ಟಿಗೆ ಮೊರೆ ಹೋದವರೇ ಇದೀಗ ಉಚ್ಛ […]

ಕಾರ್ಕಳ ಉತ್ಸವ: ಆಹಾರೋತ್ಸವ ಮೇಳದಲ್ಲಿ ಹೆಸರಾಂತ ಆಹಾರ ಮಳಿಗೆಗಳು

ಕಾರ್ಕಳ: ಕಾರ್ಕಳ ಉತ್ಸವದ ಆಹಾರೋತ್ಸವ ಮೇಳದಲ್ಲಿ ಹೆಸರಾಂತ ಆಹಾರ ಮಳಿಗೆಗಳು ಕಂಡು ಬಂದಿದೆ. ಕರ್ನಾಟಕ ಸೇರಿದಂತೆ ಹೊರ ರಾಜ್ಯದ ೮೦ರಷ್ಟು ಆಹಾರ ಮಳಿಗೆಗಳು ಇಲ್ಲಿವೆ. ಅರ‍್ಲಲೂ ಉಡುಪಿ ಮಲ್ಪೆಯ ತಿಮ್ಮಪ್ಪ ಹೋಟೆಲ್, ಕೋಟೇಶ್ವರ ಸಹನಾ ಗ್ರೂಪ್, ಹೈದಾರಬಾದ್‌ನ ಚಾರ್ ಮಿನರ್, ಮಾರ್ಟಿನ್, ಮಹಾರಾಜ, ಬಿಆರ್‌ಕೆ ಕ್ಯಾಶ್ಯೂ ಮಾರ್ಟಿಸ್ ಸಂಸ್ಥೆಯ ೪೦೦ ವಿಧದ ಜ್ಯೂಸ್, ೯೯ ಬಗ್ಗೆಯ ದೋಸೆ, ಕಲ್ಪರಸ, ಮಂಗಳವಾರ ಖಾಲಿ ಖಾಲಿ ನಿರೀಕ್ಷಿಸಿದ ಮಟ್ಟಕ್ಕಿಂತ ಹೆಚ್ಚಿನ ಸಂಖ್ಯೆ ವೀಕ್ಷಕರು, ಗ್ರಾಹಕರು ಕಾರ್ಕಳ ಉತ್ಸವಕ್ಕೆ ಅಗಮಿಸಿ ತಡ […]