ಉಚ್ಛ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ರಾಜ್ಯಾದ್ಯಂತ ವಿವಾದ ಸೃಷ್ಠಿಸಿದ್ದ ಹಿಜಾಬ್ ಪ್ರಕರಣದ ಹಿನ್ನೆಲೆಯಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ಐತಿಹಾಸಿಕ ತೀರ್ಪು ಸ್ವಾಗತಾರ್ಹ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ. ಸರಕಾರದ ವಸ್ತ್ರ ಸಂಹಿತೆಯ ಆದೇಶವನ್ನು ಎತ್ತಿಹಿಡಿದ ಉಚ್ಛ ನ್ಯಾಯಾಲಯ, ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ನಿಯಮ ಪಾಲನೆಯ ಪರವಾಗಿ ನೀಡಿರುವ ತೀರ್ಪು ಸಂವಿಧಾನಕ್ಕೆ ದೊರೆತ ಜಯವಾಗಿದೆ ಎಂದು ಕುಯಿಲಾಡಿ ಸುರೇಶ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಿತ್ರೋಡಿ: ‘ಶ್ರೀ ರಾಮ್ ಟ್ರೋಫಿ- 2022’ ಗೆದ್ದ ಪಳ್ಳಿ ಫ್ರೆಂಡ್ಸ್

ಪಿತ್ರೋಡಿ: ಯಂಗ್ ಸ್ಟಾರ್ ಸ್ಪೋರ್ಟ್ಸ್ & ಕಲ್ಚರಲ್ (ರಿ) ಪಿತ್ರೋಡಿ ಇದರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ನಡೆದ ಆಹ್ವಾನಿತ ಗ್ರಾಮೀಣ ಮತ್ತು ಪಿನ್ ಕೋಡ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಶ್ರೀ ರಾಮ್ ಟ್ರೋಫಿ 2022 ಸಮಾಪನಗೊಂಡಿದೆ. ಪಂದ್ಯಾಟದಲ್ಲಿ ಪಿನ್ ಕೋಡ್ ವಿಭಾಗದಲ್ಲಿ ಪಳ್ಳಿ ಫ್ರೆಂಡ್ಸ್ ಪಳ್ಳಿ ಮೊದಲನೆ ಪ್ರಶಸ್ತಿ ಪಡೆದುಕೊಂಡರೆ, ದ್ವಿತೀಯ ಸ್ಥಾನವಾಗಿ ಸಂಡೆ ಫ್ರೆಂಡ್ಸ್ , ಹಾವಂಜೆ ಫ್ರೆಂಡ್ಸ್ ತೃತೀಯ ಸ್ಥಾನ ಪಡೆದುಕೊಂಡಿತು. ಗ್ರಾಮೀಣ ಮಟ್ಟದ ಪಂದ್ಯಾಟದಲ್ಲಿ ಯಂಗ್ ಸ್ಟಾರ್ ಪ್ರಥಮ ಸ್ಥಾನ […]

ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ; ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವಂತಿಲ್ಲ: ಹೈಕೋರ್ಟ್ ತ್ರಿಸದಸ್ಯ ಪೀಠದಿಂದ ಮಹತ್ವದ ತೀರ್ಪು

ಬೆಂಗಳೂರು: ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಹೈಕೋರ್ಟ್ ತಿರಸ್ಕರಿಸಿದೆ. ಹಿಜಾಬ್ ಗೆ  ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಪೀಠ ವಜಾ ಮಾಡಿದೆ. ಈ ಬಗ್ಗೆ ಕಾಯ್ದಿರಿಸಲಾಗಿದ್ದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಜೈಬುನ್ನೀಸಾ ಮೊಹಿಯುದ್ದೀನ್ ಖಾಜಿ ಅವರನ್ನು ಒಳಗೊಂಡ ವಿಸ್ತೃತ ನ್ಯಾಯಪೀಠ ಇಂದು ಪ್ರಕಟಿಸಿತು. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ, ಸರಕಾರದ […]

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ

ಪೆರ್ಡೂರು: ಮಹತೋಭಾರ ಶ್ರೀ ಅನಂತಪದ್ಮನಾಭ ದೇವಸ್ಥಾನ ಶ್ರೀ ಕ್ಷೇತ್ರ ಪೆರ್ಡೂರು ಇದರ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮವು ಮಾ.19 ರ ವರೆಗೆ ನಡೆಯಲಿದೆ. ಮಾರ್ಚ್15 ಮಂಗಳವಾರ ಬೆಳಗ್ಗೆ ಪ್ರಧಾನಹೋಮ, ಕಲಶಾಭಿಷೇಕ. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ ದೀವಟಿಗೆ‌ ಸೇವೆ, ಉತ್ಸವ ಬಲಿ, ವಸಂತೋತ್ಸವ, ಬೆಳ್ಳಿಪಾಲಕಿ, ಚಂದ್ರಮಂಡಲ ರಥ, ಇಡಿಗಾಯಿ, ಓಲಗಮಂಟಪದಲ್ಲಿ ಪೂಜೆ, ಅಷ್ಟಾವಧಾನ ಸೇವೆಗಳು ಮಹಾಪೂಜೆ ನಿತ್ಯಬಲಿ, ಸವಾರಿ ಬಲಿ, ಕಟ್ಟೆಪೂಜೆ ಭುಜಂಗ ಬಲಿ. ಶ್ರೀ ಮನ್ಮಹಾರಥೋತ್ಸವ: ಮಾರ್ಚ್ 16 ಬುಧವಾರ ಬೆಳಿಗ್ಗೆ ಪ್ರಧಾನ ಹೋಮ, ಕಲಶಾಭಿಷೇಕ, […]